ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆ
Team Udayavani, Mar 9, 2018, 7:30 AM IST
ಓಎನ್‌ಜಿಸಿ- ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್, ಮಂಗಳೂರು ತನ್ನ ಸಂಸ್ಥೆಯ ಅಭಿವೃದ್ಧಿಯ ಜೊತೆಜೊತೆಗೆ ಸಾಮಾಜಿಕವಾಗಿ ಧಾರ್ಮಿಕವಾಗಿ ಸಮಾಜದಲ್ಲಿ ತೊಡಗಿಸಿಕೊಂಡು, ಸಮಾಜಮುಖಿ ಕಾರ್ಯದಲ್ಲಿ ಸಂಸ್ಥೆಯು ಗುರುತಿಸಿಕೊಂಡಿದೆ. ಈ ಸಂಸ್ಥೆ ಡಿಸೆಂಬರ್ 2006ರಂದು ಪೆರ್ಮುದೆ ಎಂಬ ಊರಿನಲ್ಲಿ ಸ್ಥಾಪನೆಯಾಗಿ ಇಂದಿಗೆ 11 ವಸಂತಗಳನ್ನು ದಾಟಿ 12ಕ್ಕೆ ಕಾಲಿಟ್ಟ ಕಿಶೋರಿ. ಸಂಸ್ಥೆಯ ಬೆಳವಣಿಗೆಯನ್ನು ಕೇಂದ್ರವಾಗಿರಿಸಿಕೊಂಡು ಸ್ಥಳೀಯ ಸಂಸ್ಥೆಗಳಿಗೂ ಸಹಕರಿಸುತ್ತ ತನ್ನ ಉದ್ಯೋಗಿಗಳ ಪ್ರತಿಭೆಯನ್ನು ಬೆಂಬಲಿಸಿಕೊಂಡು ಮುನ್ನಡೆಯುತ್ತಿದೆ. ಕಲೆ, ಯಕ್ಷಗಾನ, ಕ್ರೀಡೆ ಮುಂತಾದುವುಗಳಿಗೆ ಪ್ರೇರಣೆಯಿರಿಸಿಕೊಂಡು ಮಹಿಳಾ ದಿನಾಚರಣೆ, ಸುರಕ್ಷತಾ ದಿನಾಚರಣೆ (ಸೇಫ್ಟಿ ಡೆ) ಪರಿಸರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಫ್ಯಾಮಿಲಿ ಮೀಟ್ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹೆಮ್ಮೆ ನಮ್ಮದು. ಇದಕ್ಕೆ ಮತ್ತೂಂದು ಗರಿ ಎಂಬಂತೆ ಮಹಿಳಾ ಉದ್ಯೋಗಿಗಳ ಸ್ಥಾನಿಕ ಅಭಿವೃದ್ಧಿ ಹಾಗೂ ವಿಪ್ಸ್ ಧ್ಯೇಯೋದ್ದೇಶವನ್ನು ಮನಗಂಡು ವಿಪ್ಸ್‌ನ 28ರ ನ್ಯಾಷನಲ್ ಮೀಟ್ ಸಂದರ್ಭದಲ್ಲಿ ಓಎಮ್‌ಪಿಎಲ್ ವಿಪ್ಸ್ ರಾಷ್ಟ್ರೀಯ ಬಳಗವನ್ನು ಜನವರಿ 26, 2018ರಂದು ಸೇರಿಕೊಂಡಿತು. ಹೀಗೆ ಓಎನ್‌ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಸಿಇಒ ಸುಶೀಲ್ ಶೆಣೈ ಹಾಗೂ ಸಿಒಒ ಎಸ್‌ಎಸ್ ನಾಯಕ್‌ರವರ ಒತ್ತಾಸೆ ಹಾಗೂ ಪ್ರೋತ್ಸಾಹದಿಂದ ಓಎಮ್‌ಪಿಎಲ್‌ನ ಕಾರ್ಯವೈಖರಿಯ ಜೊತೆ ವಿಪ್ಸ್ ಒಂದು ಭಾಗವಾಗಿ ಸೇರಿಕೊಂಡಿದೆ.
ಇಂದಿಗೆ 28 ವಸಂತಗಳನ್ನು ಪೂರೈಸಿರುವ ಎಲ್ಲಾ ಮಹಿಳಾ ಉದ್ಯೋಗಿಗಳ ಪ್ರತಿಭೆಯನ್ನು ಗುರುತಿಸುವ, ಅಭಿವೃದ್ಧಿಪಡಿಸುವ ಮತ್ತು ಅವರುಗಳನ್ನು ಮುಖ್ಯವಾಹಿನಿಗೆ ತಂದು ಜಾಗತಿಕ ಪ್ರಪಂಚದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಒದಗಿಸುವ ಉದ್ದೇಶದೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆ (WIPS) ಪರಿಕಲ್ಪನೆ ಹುಟ್ಟಿಕೊಂಡಿತ್ತು. ಈ ಸಂಘಟನೆಗಳು ತಮ್ಮನ್ನು ಸಮಾಜಮುಖಿಯಾಗಿ ಸಿದ್ಧಪಡಿಸುವುದರಿಂದ ಮಹಿಳೆಯರು ತಮ್ಮ ಸಾಮಾರ್ಥ್ಯ ಮತ್ತು ಪ್ರತಿಭೆಗಳನ್ನು ಅವರು ಕೆಲಸ ಮಾಡುವ ಸಂಸ್ಥೆಗಳಿಗೆ ಮಹತ್ವದ ಕೊಡುಗೆ ನೀಡಲು ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಮೂಲಕ ವಿಪ್ಸ್ ಕಾರ್ಯನಿರ್ವಹಿಸುತ್ತದೆ.
ಮಹಿಳೆಯರು ಸರಿ ಸಮಾನವಾಗಿ ಸಮಾಜದಲ್ಲಿ ಬೆಳಗಬೇಕೆನ್ನುವ ದೃಷ್ಟಿಯಿಂದ ವಿಪ್ಸ್‌ನ ಕಾರ್ಯ ಕೇಂದ್ರ ಸರಕಾರದ “ಬೇಟಿ ಬಚಾವೋ ಬೇಟಿ ಪಡಾವೋ’ ಅನ್ನೋ ಪರಿಕಲ್ಪನೆಗೆ ಒತ್ತು ಕೊಟ್ಟು 2018ರ ಜನವರಿ 20ರಂದು ಕೋಡಿಕೆರೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಎಲ್ಲ ಶಿಕ್ಷಕ ವೃಂದದವರನ್ನು ಒಟ್ಟುಗೂಡಿಸಿ ಈ ಪರಿಕಲ್ಪನೆಯ ಮಹತ್ವವನ್ನು ತಿಳಿಸುವಲ್ಲಿ ಪ್ರಾರಂಭವಾಯಿತು. ಗಣರಾಜ್ಯೋತ್ಸವದ ದಿನ ವಿಪ್ಸ್‌ನ ಧ್ಯೇಯೋದ್ದೇಶವನ್ನು ಇಡೀ ನಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ತಿಳಿಸಲಾಯಿತು. ಫೆಬ್ರವರಿ 12 ಹಾಗೂ 13ರಂದು ಅಸ್ಸಾಂ ರಾಜ್ಯದ ಗುವಾಟಿಯಲ್ಲಿ ನಡೆದ 28ರ ನ್ಯಾಷನಲ್ ಮೀಟ್ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯಿಂದ ಮೂವರು ಸದಸ್ಯರಾದ ಅಕ್ಷತಾ ಎ. ಕೊತಾರಾರ್, ಪ್ರಮೀಳಾ ದೀಪಕ್ ಪೆರ್ಮುದೆ, ಪೂರ್ಣಿಮಾ ರವೀಂದ್ರ ಪೂಜಾರಿ ಈ ಸಂಸ್ಥೆಯನ್ನು ಪ್ರತಿನಿಧಿಸಿದ್ದರು.
ಪ್ರಮೀಳಾ ದೀಪಕ್ ಪೆರ್ಮುದೆ ವಿಪ್ಸ್ ಸದಸ್ಯೆ ಓಎನ್‌ಜಿಸಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.