ನಿನ್ನೆ ಮಾತ್ರವಲ್ಲ , ಪ್ರತಿದಿನವೂ ಮಹಿಳಾ ದಿನವೇ!


Team Udayavani, Mar 9, 2018, 7:30 AM IST

s-4.jpg

ಹೆಣ್ಣು ಸಮಾಜದ ಕಣ್ಣು’ ಎಂಬ ಮಾತು ಸತ್ಯವಾದರೂ ಸಹ ಅದನ್ನು ಎಲ್ಲರೂ ಸುಲಭವಾಗಿ ಒಪ್ಪಿಕೊಳ್ಳಲು ತಯಾರಿಲ್ಲ ಎಂಬುದಕ್ಕೆ ಈ ಪುರುಷ ಪ್ರಧಾನ ಸಮಾಜವೇ ಸಾಕ್ಷಿ. ಹಿಂದೆ ವೇದಗಳ ಕಾಲದಲ್ಲೂ ಮೈತ್ರೇಯಿ ಮತ್ತು ಗಾರ್ಗಿಯಂತಹ ಮಹಿಳಾ ಪುರೋಹಿತರಿದ್ದರು ಹಾಗೂ ಮಹಿಳೆಯರಿಗೆ ವಿಶೇಷ ಗೌರವ-ಸ್ಥಾನಮಾನವಿತ್ತು. ತದನಂತರ ವೇದೋತ್ತರ ಭಾರತದ ಮಹಿಳೆಯರ ಸಾಮಾಜಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿತು. ಆದ್ದರಿಂದ, ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಸ್ಥಾನಮಾನ ದೊರಕಬೇಕಾಗಿದೆ. 

ಸ್ತ್ರೀ ಎಂದರೆ ಕಾಯೇìಷು ದಾಸಿ, ಕರಣೇಶು ಮಂತ್ರಿ, ರೂಪೇಚ ಲಕ್ಷ್ಮೀ,  ಕ್ಷಮಯಾ ಧರಿತ್ರಿ, ಭೋಜ್ಯೇಶು ಮಾತಾ, ಶಯನೇಶು ರಂಭಾ ಎಂಬ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಎಲ್ಲಾ ನುಡಿಗಳಿಗೆ ತಡೆಗೋಡೆ ಎಂಬಂತೆ ಅತ್ಯಾಚಾರ – ದೌರ್ಜನ್ಯಗಳು ನಡೆಯುತ್ತಿದೆ. ಹೆಣ್ಣು ಪ್ರೀತಿ ಒಪ್ಪಲಿಲ್ಲ ಎಂದು ಅವಳ ಮೇಲೆ ದಾಳಿ, ಪುಟ್ಟ ಮಗು ಎಂದೂ ಅರಿಯದೆ ದೌರ್ಜನ್ಯ ಹೀಗೆ ಹಲವಾರು ಸಮಾಜ ಮುಖಗಳು ಕಂಡುಬರುತ್ತಿವೆ. ಇವೆಲ್ಲಾ ನಮ್ಮ ಸಂಸ್ಕೃತಿಯೇ-ಸಭ್ಯತೆಯೆ? ಯಾಕಿಷ್ಟು ಘೋರವಾದ ವಾತಾವರಣ ಸೃಷ್ಟಿಯಾಗಿದೆ? 

ನೀವೊಮ್ಮೆ ನಿಮ್ಮ ಮನಸಿನೊಡನೆ ಮಾತಾಡಿ ನೋಡಿ. ನಮ್ಮನ್ನು ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿ ಹೆಣ್ಣು, ನಮ್ಮ ಪ್ರೀತಿಯ ಅಕ್ಕ-ತಂಗಿ ಹೆಣ್ಣು, ಭಾವನೆಗಳಿಗೆ ಭಾವನೆಗಳ ಬೆಸೆದು ಸಪ್ತಪದಿ ತುಳಿದು ಜೊತೆಯಾಗಿರುವ ಮಡದಿ ಹೆಣ್ಣು, ರಕ್ತವನ್ನು ಹಂಚಿಕೊಂಡು ಹುಟ್ಟಿ, ಸತ್ತಾಗ ಬಾಯಿಗೆ ಗಂಗಾಜಲ ನೀಡುವ ಮಗಳು ಹೆಣ್ಣು, ಆದರೂ ದೌರ್ಜನ್ಯ-ಅತ್ಯಾಚಾರಗಳಂತಹ ಉಗ್ರಶಿಕ್ಷೆ ಕೂಡ ಹೆಣ್ಣಿಗೇ. ಎಲ್ಲಾ ವಿಚಾರಗಳಲ್ಲೂ, ಕಾರ್ಯಗಳಲ್ಲೂ ಮಹಿಳೆಯ ಸಬಲೀಕರಣ ಆಗುತ್ತಿದ್ದರೆ ಈ ವಿಚಾರದಲ್ಲಿ ಮಾತ್ರ ಯಾಕೆ ಹೀಗೆ?

ಹೌದು ಸ್ನೇಹಿತರೇ, ಇದು ನಮ್ಮ ಸಮಾಜದ ಈಗಿನ ಪರಿಸ್ಥಿತಿ. ಹಾಗಂತ ಮಹಿಳೆಯರಿಗೆ ಏನೂ ಸೌಲಭ್ಯ ದೊರೆತಿಲ್ಲ ಎಂದು ನಾನು ಖಂಡಿತಾ ಹೇಳಲಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಅಪಾರ. ಕಲಾರಂಗದಲ್ಲಿ, ರಾಜಕೀಯ ವಿಚಾರದಲ್ಲಿ ಮಹಿಳೆಗೆ ಖಂಡಿತವಾಗಿಯೂ ಮೀಸಲಾತಿ ಸೌಲಭ್ಯ ದೊರೆತಿದೆ. ವನಿತೆಯರು ಸ್ವಂತ ಉದ್ಯಮ ಕೈಗೊಳ್ಳಲು ಅವಕಾಶವೂ ಇದೆ. ಆದರೆ ಮಹಿಳಾ ಸಬಲೀಕರಣದ ಹಾದಿಯಲ್ಲಿ ಕೆಲವೊಂದು ಅನಾವಶ್ಯಕ ಸಂಪ್ರದಾಯ ಆಚರಣೆಗಳು, ಅತ್ಯಾಚಾರದಂತಹ ಅಮಾನುಷ ಘೋರ ಕೃತ್ಯಗಳು, ಇವತ್ತಿನ ದಿನದಲ್ಲೂ ಕೆಲವು ಹಳ್ಳಿಗಳಲ್ಲಿ ಮಹಿಳೆ ಯಾರ ಬಳಿಯಾದರೂ ಮಾತನಾಡಲು ಅಥವಾ ಸುತ್ತಾಡಲೆಂದು ಹೋದರೂ, ಗೆಳೆಯ ಎಂಬ ಭಾವನೆಯಿಂದ ಮಾತನಾಡಿದರೂ ಅದನ್ನು ಕಂಡ ಈ ಸಮಾಜ ಆಕೆಯ ಕುರಿತಾಗಿ ಕೆಟ್ಟ ಹೇಳಿಕೆಗಳನ್ನು ನೀಡುವುದು ಈ ಮಹಿಳಾ ಮನಶ್ಶಕ್ತಿಗೆ ಸಮುದ್ರಕ್ಕೆ ಅಡ್ಡವಾಗಿ ನಿಂತಿರುವ ತಿಮಿಂಗಿಲದಂತೆ ತಡೆಗೋಡೆಯಾಗುತ್ತಿದೆ. ಮಹಿಳೆಯರ ಸಾಧನೆಯ ನಡುವೆ ಇದೊಂದು ಕಪ್ಪುಚುಕ್ಕೆಯಾಗುತ್ತಿದೆ. 

ಮಾರ್ಗರೇಟ್‌ ಥ್ಯಾರ್ಚ ಎಂಬವರು 1989ರಲ್ಲಿ ಭಾರತಕ್ಕೆ ಪ್ರವಾಸಕ್ಕೆ ಬಂದಾಗ ಭಾರತೀಯ ಮಹಿಳೆಯರ ಬಗ್ಗೆ ಒಂದು ಮಾತು ಹೇಳಿದರು.  In England at the age of 35, an english women think of her marriage but in India at the age of 35, an Indian women think of her daughter’ s marriage ‘  ಹೌದು ತಾನೇ?  ಇದು ಅರ್ಥವುಳ್ಳ ಮಾತಲ್ಲವೇ? ಆದರೆ ಈ ಅಂಶವನ್ನು ಬದಿಗಿಟ್ಟು ನಮ್ಮ ದೇಶದ ಮಹಿಳೆಯರು ಮಾಡಿದ ಸಾಧನೆಗಳನ್ನು ಕೇಳಿದ ಎಂತಹ ಪುರುಷನಾದರೂ ಹೆಮ್ಮೆ ಪಡಬೇಕೇ ಹೊರತು ಅವಳನ್ನು ಹೀಯಾಳಿಸುವಂತಿಲ್ಲ. ಏಕೆಂದರೆ, ಶಿಕ್ಷಣಕ್ಕೆ ಮುನ್ನುಡಿಯ ಭಾಷ್ಯ ಬರೆದ ಪಾಕಿಸ್ತಾನದ ಬಾಲೆ “ಮಲಾಲ’ ಪ್ರತಿಷ್ಠಿತ ನೋಬೆಲ್‌ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ಏರಿದ ರೀತಿ ಅಮೋಘ. ಈಕೆ ತಾಲಿಬಾನಿಗಳ ದೌರ್ಜನ್ಯವನ್ನು ನಿರಂತರವಾಗಿ ಕಂಡವಳು. ಆದರೆ ಅವರೆಲ್ಲರನ್ನು ಎದುರಿಸಿ ಈಕೆ ಹೋರಾಡಲಿಲ್ಲವೆ? ಎರಡೂ ಕೈಗಳಿಲ್ಲದೇ ವಿಮಾನ ಹಾರಿಸಿದ ಅಮೆರಿಕ ಬೆಡಗಿ ಜೆಸ್ಸಿಕಾ ಕಾಕ್ಸ್‌ ಹೆಣ್ಣು ತಾನೆ? ಅದಿರಲಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ರಾಣಿ ಲಕ್ಷ್ಮಿಬಾಯಿ ಇವರು ಸ್ತ್ರೀಕುಲ ಕೌಸ್ತುಭರಲ್ಲವೆ? ನಾವು ಎಷ್ಟೇ ಹಿಂಸೆಯನ್ನು ಕೊಟ್ಟರೂ ಅದನ್ನು ಸಹಿಸುತ್ತಾ ನಮ್ಮನ್ನು ಹೊತ್ತು ನಿಂತಿರುವ ಭೂಮಿತಾಯಿ ಮಹಿಳಾ ಸ್ವರೂಪವಲ್ಲವೇ? ನಮ್ಮಿಂದ ಯಾರೂ ಕದಿಯಲಾರದ ಆಸ್ತಿಯೇ ವಿದ್ಯೆ. ಈ ವಿದ್ಯಾದೇವತೆ ಸರಸ್ವತಿ, ನಾವು ಹೊಂದಿರುವ ಅಪಾರ ಆಸ್ತಿ-ಐಶ್ವರ್ಯದ ಅಧಿದೇವತೆ ಲಕ್ಷ್ಮೀ ಸ್ತ್ರೀಕುಲದ ಪುಷ್ಪವಲ್ಲವೆ? ಇಷ್ಟೆಲ್ಲ ಅಂಶಗಳು ಗೊತ್ತಿರುವಾಗ ಮಹಿಳೆಯರನ್ನು ಏತಕ್ಕಾಗಿ ನಿಕೃಷ್ಟವಾಗಿ ಕಾಣುತ್ತಾರೆ ಎಂಬುದೇ ಖೇದಕರ. 

ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಮೀನಾ ಯೋಜನೆ ಜಾರಿಗೆ ತರಲಾಯ್ತು. ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ತರಲಾಯ್ತು. 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ತರಲಾಯ್ತು. ಪುರುಷರಷ್ಟೇ ಸಮಾನ ಸ್ಥಾನಮಾನ ಕಲ್ಪಿಸಲು ಯೋಜನೆ ರೂಪಿಸಲಾಯಿತು. ಆದರೆ ಈ ಎಲ್ಲ ಕಾಯ್ದೆಗಳು ಸ್ತ್ರೀಯರ ಸಾಧನೆ, ಕಾರ್ಯಗಳಿಗೆ ಸೀಮಿತವಾಯಿತೇ ವಿನಾ ಮಹಿಳೆ ನಿರ್ಭಯವಾಗಿ ಓಡಾಡಲು ಇಂದಿಗೂ ಸಾಧ್ಯವಾಗುತ್ತಿಲ್ಲ. 

“ಪೆಣ್ಣು ಪೆಣ್ಣೆಂದೇಕೆ ಪೆರ್ಚುವರು ಪೆಣ್‌ ಜನರು, ಪೆಣ್ಣಲ್ಲವೆ ನಮ್ಮ ಪೆತ್ತ ತಾಯಿ’ ಎಂದು ಯಾಕೆ ಯಾರಿಗೂ ತಿಳಿಯುತ್ತಿಲ್ಲ ಎಂಬುದೇ ನನ್ನನ್ನು ಕಾಡುತ್ತಿರುವ ಯಕ್ಷ ಪ್ರಶ್ನೆ. ಹಿತ್ತಾಳೆಯಂತಹ ಮನುಷ್ಯನನ್ನು ಬಂಗಾರವಾಗಿಸುವುದರಲ್ಲಿ ಹೆಣ್ಣಿನ ಪಾತ್ರ ಅಪಾರ. ಮಹಿಳಾ ಸಬಲೀಕರಣದ ಬಗ್ಗೆ ಹತ್ತಾರು ವರ್ಷಗಳಿಂದ ಸದ್ದಿಲ್ಲದ ಪ್ರಯತ್ನಗಳು ಗ್ರಾಮಮಟ್ಟದಲ್ಲೂ ನಡೆಯುತ್ತಿವೆ. ಆದರೆ ನಿರೀಕ್ಷಿತ ಪ್ರಗತಿ ಮಾತ್ರ ಮರೀಚಿಕೆ. ಸ್ತ್ರೀಪುರುಷ ಸಮಾನತೆಯ ಬಗ್ಗೆ ಪಟ್ಟಣದಲ್ಲಿರುವಷ್ಟು ಜಾಗೃತಿ ಈಗಲೂ ಗ್ರಾಮಾಂತರ ಪ್ರದೇಶಗಳಲ್ಲಿಲ್ಲ. ಮಹಿಳೆಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಜಾಗೃತಿ ಮೂಡಿಸುವವರು ಯಾರೂ ಇಲ್ಲ. 

ಒಂದು ವೇಳೆ ಪ್ರಸ್ತುತ ದಿನಗಳಲ್ಲಿ ಮಹಿಳಾ ಸಬಲೀಕರಣವಾದರೆ ಅಂದರೆ ಮಹಿಳೆಗೆ ಯಾವುದೇ ರೀತಿಯ ಭಯಗಳಿಲ್ಲದೆ ಸಮಾಜದಲ್ಲಿ ನಿರ್ಭಯವಾಗಿ ಜೀವನ ನಡೆಸಲು ಸೂಕ್ತ ಅವಕಾಶ ದೊರೆತರೆ ನಮ್ಮ ಈ ಸಮಾಜಕ್ಕೆ ತಟ್ಟಿದ ಕಳಂಕ ದೂರವಾದಂತಾಗುತ್ತದೆ. ಸಮಾಜದ ಶೋಭೆ ಹೆಚ್ಚುತ್ತದೆ. ನಮ್ಮ ಈ ಸಮಾಜದಲ್ಲಿ ಹೊಸತನ ಮೂಡಿಬರುತ್ತದೆ. ಯತ್ರ ನಾರಿಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಅಂದರೆ ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ಸ್ವಾಮಿ ವಿವೇಕಾನಂದರು, ರಾಜಾರಾಂ ಮೋಹನ್‌ ರಾಯರಂತ ಸಮಾಜ ಸುಧಾರಕರು ಕಂಡ ಸಬಲ ಮಹಿಳಾ ಸಮಾಜ ನಿರ್ಮಾಣ ಆಗಲಿ. ಈ ಮಹಿಳಾ ದಿನಾಚರಣೆ ಒಂದು ಉತ್ತಮ ಕಾರ್ಯ ಕೈಗೊಳ್ಳಲು ಪ್ರೇರೇಪಿಸಲಿ ಮಾತ್ರವಲ್ಲ , ಮಹಿಳೆಯನ್ನು ಈ ದಿನವೆನ್ನದೆ ಪ್ರತಿದಿನವೂ ಗೌರವದಿಂದ ಕಾಣಿರಿ.

ಪ್ರಜ್ಞಾ ಬಿ. ಪ್ರಥಮ ಪತ್ರಿಕೋದ್ಯಮ,  ಎಸ್‌ಡಿಮ್ ಕಾಲೇಜು, ಉಜಿರೆ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.