ಮೊಹಮ್ಮದ್ ಶಮಿ ವಿರುದ್ಧ ಪತ್ನಿಯಿಂದ ಫಿಕ್ಸಿಂಗ್ ಆರೋಪ
Team Udayavani, Mar 9, 2018, 6:35 AM IST
ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಬುಧವಾರವಷ್ಟೇ ಗೃಹಹಿಂಸೆ ಆರೋಪ ಮಾಡಿದ್ದ ಪತ್ನಿ ಹಸಿನ್ ಜಹಾನ್ ಗುರುವಾರ ಮತ್ತೂಂದು ಬಾಂಬ್ ಸಿಡಿಸಿದ್ದಾರೆ.
ಶಮಿ ಮ್ಯಾಚ್ಫಿಕ್ಸಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಅವರು ಇಂಗ್ಲೆಂಡ್ ಮೂಲದ ಉದ್ಯಮಿಯಿಂದ ಹಣ ಸ್ವೀಕರಿಸಿದ್ದಾರೆ. ಇದಕ್ಕೆ ನನ್ನ ಬಳಿ ದಾಖಲೆಯಿದೆ ಎಂದು ಹೇಳಿದ್ದಾರೆ. ಶಮಿ ವಿರುದ್ಧ ಗುರುವಾರ ಕೋಲ್ಕತಾದ ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಜಹಾನ್ ತಮ್ಮ ಆರೋಪಗಳನ್ನು ಮುಂದುವರಿಸಿದ್ದಾರೆ.
ಶಮಿಗೆ ಪಾಕಿಸ್ತಾನ ಮೂಲದ ಮಹಿಳೆಯೊಂದಿಗೆ ಸಂಬಂಧವಿದೆ. ಪಾಕ್ನ ಅಲಿಶ್ಬಾ ಹೆಸರಿನ ಮಹಿಳೆಯಿಂದ ಮ್ಯಾಚ್ ಫಿಕ್ಸ್ ಮಾಡಲು ಹಣ ಪಡೆದಿದ್ದಾರೆ. ಇದನ್ನು ನೀಡಿದ್ದು ಇಂಗ್ಲೆಂಡ್ ಉದ್ಯಮಿ ಮೊಹಮ್ಮದ್ ಭಾಯ್. ಇದಕ್ಕೆ ನನ್ನ ಬಳಿ ಸಾಕ್ಷಿಯಿದೆ. ಅವರು ನನ್ನನ್ನು ವಂಚಿಸಬಲ್ಲರೆಂದರೆ ದೇಶವನ್ನೂ ವಂಚಿಸಬಲ್ಲರು ಎಂದು ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.