ಭದ್ರತಾ ವೈಫಲ್ಯ ಬಟಾಬಯಲು ಲೋಕಾಯುಕ್ತರ ಮೇಲೆ ಹಲ್ಲೆ
Team Udayavani, Mar 9, 2018, 8:15 AM IST
ಈ ಮಾದರಿ ಹಲ್ಲೆ ರಾಜಕಾರಣಿ ಮೇಲೆ ಆಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಊಹಿಸಿ. ರಾಜಕೀಯದವರು ತಮ್ಮ ಭದ್ರತೆಗಾಗಿ ಎಲ್ಲ ಏರ್ಪಾಡು ಮಾಡಿಕೊಂಡಿದ್ದಾರೆ.
ಬಹುಶಃ ಈ ಮಾದರಿಯ ಘಟನೆ ಕರ್ನಾಟಕದಲ್ಲಿ ಮಾತ್ರ ಸಂಭವಿಸಲು ಸಾಧ್ಯವೇನೊ. ವ್ಯಕ್ತಿಯೊಬ್ಬ ಚೂರಿ ಬಚ್ಚಿಟ್ಟುಕೊಂಡು ಬಂದು ಕರ್ತವ್ಯದಲ್ಲಿದ್ದ ಲೋಕಾಯುಕ್ತ ಮುಖ್ಯಸ್ಥ ನ್ಯಾ| ಪಿ. ವಿಶ್ವನಾಥ್ ಶೆಟ್ಟಿಯವರನ್ನು ಅವರ ಕಚೇರಿಯಲ್ಲೇ ಇರಿದು ಗಾಯಗೊಳಿಸಿದ್ದು ಸರಕಾರಿ ಕಚೇರಿಗಳ ಭದ್ರತಾ ವೈಫಲ್ಯವನ್ನು ಬಟಾಬಯಲುಗೊಳಿಸಿದ ಘಟನೆ. ಆರೋಪಿ ಸಾಯಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದರೂ ಆಯುಷ್ಯ ಗಟ್ಟಿಯಿದ್ದುದರಿಂದ ನ್ಯಾ| ಶೆಟ್ಟಿಯವರು ಬದುಕುಳಿದಿದ್ದಾರೆ. ವಿಧಾನಭವನದ ಪಕ್ಕದ ಕಟ್ಟದಲ್ಲೇ ಈ ಘಟನೆ ಸಂಭವಿಸಿದೆ. ದುರದೃಷ್ಟದ ವಿಚಾರವೆಂದರೆ ಯಾರಿಗೂ ಇದೊಂದು ಗಂಭೀರವಾದ ಘಟನೆ ಎಂದು ಅನ್ನಿಸಿಲ್ಲ. ಆರೋಪಿಗೆ ಯಾವುದೇ ರಾಜಕೀಯ ಅಥವಾ ಸಂಘಟನೆಯ ಹಿನ್ನೆಲೆಯಿಲ್ಲ. ವೈಯಕ್ತಿಕ ಹತಾಶೆಯಲ್ಲಿ ಅವನು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿಯುತ್ತಲೇ ಮಾಧ್ಯಮಗಳಿಗೆ ಈ ಘಟನೆಯ ಮೇಲಿದ್ದ ಉತ್ಸಾಹ ಅರ್ಧಕ್ಕರ್ಧ ಇಳಿದಿದೆ. ಒಂದು ದಿನದ ಮಟ್ಟಿಗಷ್ಟೆ ದೃಶ್ಯ ಮಾಧ್ಯಮಗಳಿಗೆ ಈ ಘಟನೆ ಮುಖ್ಯವಾಗಿತ್ತು. ಇನ್ನು ಮುಖಂಡರು ಮಾಡಿದ ಟೀಕೆಗಳಲ್ಲಿ ರಾಜಕೀಯ ಲಾಭದ ಉದ್ದೇಶವನ್ನಲ್ಲದೆ ಬೇರೇ ನನ್ನೂ ನಿರೀಕ್ಷಿಸುವುದು ಸಾಧ್ಯವಿಲ್ಲ. ಸದ್ಯದಲ್ಲೇ ಚುನಾ ವಣೆ ಇಲ್ಲದಿ ರುತ್ತಿದ್ದರೆ ಸರಕಾರವಾ ಗಲಿ, ವಿಪಕ್ಷ ಗಳಾಗಲಿ ಈ ಘಟನೆ ಯನ್ನು ಇಷ್ಟು ಗಂಭೀರವಾಗಿ ಪರಿಗಣಿ ಸುತ್ತಿತ್ತೇ ಎನ್ನುವುದು ಪ್ರಶ್ನೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಆಪೆ¤ ಶಶಿಕಲಾಗೆ ರಾಜಾತಿಥ್ಯ ನೀಡಲು ಸ್ವತಹ ಮುಖ್ಯಮಂತ್ರಿಯವರೇ ಸೂಚಿಸಿ ದ್ದರು ಎಂಬುದು ಬಯ ಲಾದ ಸಂದರ್ಭದಲ್ಲೇ ಲೋಕಾ ಯುಕ್ತ ಕಚೇರಿಯ ಭದ್ರತಾ ಲೋಪ ಬೆಳಕಿಗೆ ಬಂದಿರುವುದು ಒಂದು ರೀತಿಯಲ್ಲಿ ವ್ಯವಸ್ಥೆಯ ವಿಡಂಬನೆಯಂತಿದೆ. ಜೈಲಿನಲ್ಲಿರುವ ಕೈದಿಗೆ ಸಕಲ ಐಷಾರಾಮ ಮತ್ತು ಸರಕಾರದ ಕೆಲಸ ಮಾಡುತ್ತಿರುವ ನಿವೃತ್ತ ನ್ಯಾಯಾಧೀಶರಿಗೆ ಕನಿಷ್ಠ ಭದ್ರತೆಯೂ ಇಲ್ಲ ಎಂಬಂತಹ ಪರಿಸ್ಥಿತಿ. ಲೋಕಾಯುಕ್ತ ಕಚೇರಿಗೆ ಹೇಳಿಕೊಳ್ಳಲೇನೋ ಬಿಗ ಭದ್ರತೆಯಿದೆ. ಆದರೆ ಕಚೇರಿಯ ಲೋಹ ಶೋಧಕ ಕಳೆದ ಆರೇಳು ತಿಂಗಳಿಂದ ನಿಷ್ಕ್ರಿಯಗೊಂಡಿದೆ. ಈ ಸ್ಥಳದಲ್ಲಿ ಕನಿಷ್ಠ ಓರ್ವ ಪೊಲೀಸ್ ಕಾನ್‌ಸ್ಟೆಬಲ್‌ನ್ನಾದರೂ ಸಂದರ್ಶಕರ ತಪಾಸಣೆಗಾಗಿ ನೇಮಿಸಿಬೇಕೆಂದು ಸರಕಾರಕ್ಕೆ ಅನ್ನಿಸಿಲ್ಲ. ಸದಾ ಲೋಕಾಯುಕ್ತರ ಜತೆಗಿರಬೇಕಾಗಿದ್ದ ಅಂಗರಕ್ಷಕನೂ ಹಲ್ಲೆ ಯಾಗುವ ಸಂದರ್ಭದಲ್ಲಿ ಅಲ್ಲಿರಲಿಲ್ಲ. ಒಂದು ವೇಳೆ ಲೋಕಾಯುಕ್ತರೇ ಅಂಗರಕ್ಷಕನನ್ನು ತನ್ನ ಚೇಂಬರ್‌ನಿಂದ ಹೊರಗೆ ಕಳುಹಿಸಿದ್ದರೂ ಬಾಗಿಲಲ್ಲಿ ನಿಂತು ಕಾಯುವುದು ಅಂಗರಕ್ಷಕನ ಕರ್ತವ್ಯವಾಗಿತ್ತು. ಕೆಲ ಸಮಯದ ಹಿಂದೆಯಷ್ಟೆ ಲೋಕಾಯುಕ್ತ ಕಚೇರಿಯ ದುರ್ಬಲ ಭದ್ರತೆ ಕುರಿತು ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಲಾಗಿತ್ತು. ಯಥಾ ಪ್ರಕಾರ ಸರಕಾರ ಈ ವರದಿಯನ್ನು ಕಡತಗಳ ರಾಶಿಗೆ ಸೇರಿಸಿ ಕೈತೊಳೆದು ಕೊಂಡಿದೆ. ಆರೋಪಿಗೆ ಲೋಕಾಯುಕ್ತರ ಮೇಲೆ ಹಲ್ಲೆ ಮಾಡಲು ವೈಯಕ್ತಿಕ ಕಾರಣಗಳಿದ್ದವು ಅಥವಾ ಅವನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ ಎನ್ನುವ ನೆಪಗಳೆಲ್ಲ ಭದ್ರತಾ ವೈಫಲ್ಯವನ್ನು ಮುಚ್ಚಿ ಹಾಕಲು ಸಾಕಾಗುವುದಿಲ್ಲ. ಇದು ಲೋಕಾಯುಕ್ತರ ಕಚೇರಿಯೊಂದರ ಕತೆ ಮಾತ್ರವಲ್ಲ, ಬಹುತೇಕ ಎಲ್ಲ ಸರಕಾರಿ ಕಚೇರಿಗಳೂ ಇದೇ ರೀತಿ ಇವೆ. ಭದ್ರತೆ ಮಾತು ದೂರ ವುಳಿಯಿತು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೂಡ ಸಾಧ್ಯವಾಗಿಲ್ಲ ಎನ್ನುವುದು ತಲೆತಗ್ಗಿಸುವ ಸಂಗತಿ. ಯಾವುದೇ ಸರಕಾರಿ ಕಚೇರಿಯಲ್ಲಿ ಯಾವುದೇ ಹೊತ್ತಿನಲ್ಲಿ ಬೇಕಾದರೂ ಈ ಮಾದರಿಯ ಹಲ್ಲೆ ಸಂಭವಿಸಬಹುದು. ಹೆಚ್ಚೇಕೆ ಕಚೇರಿಯೊಳಗೆ ಬಾಂಬಿಟ್ಟು ಹೋದ ಘಟನೆಗಳನ್ನು ಕೂಡ ಕೇಳಿದ್ದೇವೆ. ಇದು ನಮ್ಮ ಸರಕಾರಿ ಕಚೇರಿಗಳ ಸ್ಥಿತಿ. ಆದರೆ ಈ ಮಾದರಿಯ ಹಲ್ಲೆ ಶಾಸಕರೋ, ಸಚಿವರ ಮೇಲೋ ಆಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿ ನೋಡಿ. ವಿಧಾನ ಸೌಧದಲ್ಲಂತೂ ಇಂತಹ ಹಲ್ಲೆ ನಡೆಯಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿಗೆ ಹೋಗಬೇಕಾದರೆ ಹಲವು ಸುತ್ತಿನ ಭದ್ರತಾ ತಪಾಸಣೆಯನ್ನು ದಾಟಬೇಕು. ಚಾಕು ಬಿಡಿ ಸಣ್ಣದೊಂದು ಸೂಜಿಯನ್ನು ಕೂಡ ಒಳಗೊ ಯ್ಯಲು ಸಾಧ್ಯವಿಲ್ಲ. ರಾಜಕೀಯದವರು ತಮ್ಮ ಭದ್ರತೆಗಾಗಿ ಈ ಎಲ್ಲ ಏರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಲೋಕಾಯುಕ್ತ ಮುಖ್ಯಸ್ಥ ಹುದ್ದೆಯಲ್ಲಿರುವ ನ್ಯಾಯಾಧೀಶರಿಗೆ ಈ ಗತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಜನರು ಕೇಳುತ್ತಿ ರುವುದರಲ್ಲಿ ಅರ್ಥವಿದೆ. ಇನ್ನು ಕೆಲ ಮಾಧ್ಯಮಗಳು ಲೋಕಾಯುಕ್ತರ ಮೇಲಾದ ಹಲ್ಲೆಯನ್ನು ಲೋಕಾಯುಕ್ತದ ಮೇಲೆಯೇ ನಡೆದ ಆಕ್ರಮಣ ಎಂಬುದಾಗಿ ವಿಶ್ಲೇಷಿಸಿರುವುದು ಮಾತ್ರ ಸರಿಯಲ್ಲ. ಈ ಕೆಲಸವನ್ನು ಸರಕಾರ ಲೋಕಾಯುಕ್ತವನ್ನು ವಿಭಜಿಸಿ ಭ್ರಷ್ಟಾಚಾರ ನಿಗ್ರಹ ಪಡೆಯನ್ನು ರಚಿಸಿದಾಗಲೇ ಮಾಡಿ ಮುಗಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.