ಜ್ಯೋತಿಷಿ ಬಳಿ ಭವಿಷ್ಯ ಕೇಳಿ ಕೃತ್ಯ


Team Udayavani, Mar 9, 2018, 6:35 AM IST

Tejraj-Sharma.jpg

ಬೆಂಗಳೂರು: ಲೋಕಾಯುಕ್ತ ನ್ಯಾ. ವಿಶ್ವನಾಥ್‌ ಶೆಟ್ಟಿ ಅವರ ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೇಜರಾಜ್‌ ಶರ್ಮಾ ವಿಚಾರಣೆ ಸಂದರ್ಭದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದು, ನಾನೊಬ್ಬ ಆಸ್ತಿಕ ಎಂದು ಹೇಳುತ್ತಿದ್ದಾನೆ.

ದೈವ ಭಕ್ತನಂತೆ ವರ್ತಿಸುತ್ತಿರುವ ಆರೋಪಿ ತನ್ನ ಜೇಬಿನಲ್ಲಿ ಹತ್ತಾರು ದೇವರ ಫೋಟೋ, ಸಣ್ಣ ಭಗವದ್ಗೀತೆ ಪುಸ್ತಕ ಇಟ್ಟುಕೊಂಡಿದ್ದಾನೆ. ಪ್ರತಿ 15 ದಿನಕ್ಕೊಮ್ಮೆ ರೈಲಿನಲ್ಲಿ ಬರುವ ತೇಜರಾಜ್‌ ಶರ್ಮಾ, ಕೇವಲ 50 ರೂ. ತರುತ್ತಾನೆ. ಇಂದಿರಾ ಕ್ಯಾಂಟೀನಿನಲ್ಲಿ ಊಟ, ತಿಂಡಿ ಮಾಡುತ್ತಿದ್ದ. ಈ ದುಡ್ಡಿನಲ್ಲೇ ಇಡೀ ದಿನ ಬೆಂಗಳೂರಿನಲ್ಲಿ ಸಮಯ ಕಳೆದು ಸಂಜೆ ತುಮಕೂರಿಗೆ ಮರಳುತ್ತಿದ್ದ ಎನ್ನಲಾಗಿದೆ.

ನಾನೊಬ್ಬ ಆಸ್ತಿಕ ನನಗೆ ಪ್ರತಿನಿತ್ಯ ದೇವರು ಕಾಣುತ್ತಾನೆ. ನನ್ನ ಸ್ನೇಹಿತರಿಗೆಲ್ಲ ದೇವರನ್ನು ತೋರಿಸಿದ್ದೇನೆ. ನನ್ನ ಮುಂದೆ ಒಂದು ಫೋಟೋ ಇಟ್ಟರೆ ನಿಮಗೂ ದೇವರನ್ನು ತೋರಿಸುತ್ತೇನೆ. ಅಷ್ಟೇ ಅಲ್ಲ, ನನಗೆ ಭ್ರಷ್ಟರನ್ನು ಶಿಕ್ಷಿಸು, ಶಿಷ್ಟರನ್ನು ರಕ್ಷಿಸು ಎಂದು ಶ್ರೀಕೃಷ್ಣನಿಂದ ಪ್ರೇರಣೆಯಾಗಿದೆ.

ಇಂದು ಗುರುವಾರ ನನಗೆ ಒಳ್ಳೆಯ ದಿನ. ರಾಯರು ನನ್ನ ಕಾಪಾಡುತ್ತಾರೆ ಎಂದಿದ್ದಾನಲ್ಲದೆ, ಭಗವದ್ಗೀತೆಯಲ್ಲಿನ ಪ್ರಮುಖ ಸಾರಾಂಶವನ್ನು ಉಲ್ಲೇಖೀಸಿ ಪೊಲೀಸರಿಗೇ ನೀತಿ ಪಾಠ ಹೇಳುತ್ತಿದ್ದಾನೆ. ಈತನ ವರ್ತನೆಯಿಂದ ಅಚ್ಚರಿಗೊಂಡ ಪೊಲೀಸರು ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿದ್ದಾರೆ.

ಜ್ಯೋತಿಷಿ ಹೇಳಿದ್ದ: ಬುಧವಾರ ಬೆಳಗ್ಗೆ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದೆ. ಅವರು ನನಗೆ ಇಂದು ಒಳ್ಳೆಯ ದಿನ. ನೀನು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಜಯಗಳಿಸುತ್ತೀಯಾ ಎಂದು ಹೇಳಿದ್ದರು. ಅದಕ್ಕೆ ಬೆಳಗ್ಗೆ ಲೋಕಾಯುಕ್ತರನ್ನು ನ್ಯಾಯಕ್ಕಾಗಿ ಅಂಗಲಾಚಿದ್ದೆ. ಆದರೆ, ಅವರು ಸರಿಯಾಗಿ ಸ್ಪಂದಿಸಲಿಲ್ಲ. ಇದರಿಂದ ಕೋಪಗೊಂಡು ಚಾಕು ಹಾಕಿದ್ದೇನೆ ಎಂದು ವಿಚಾರಣೆ ಸಂದರ್ಭದಲ್ಲಿ ತೇಜರಾಜ್‌ ಶರ್ಮಾ ಹೇಳಿ ಪೊಲೀಸರನ್ನೆ ದಿಗ್ಭ್ರಾಂತರನ್ನಾಗಿ ಮಾಡಿದ್ದಾನೆ.

20 ದಿನದ ಹಿಂದೆಯೇ ಚಾಕು ಖರೀದಿ: ಆರೋಪಿ 20 ದಿನಗಳ ಹಿಂದೆಯೇ ಲೋಕಾಯಕ್ತ ಅಥವಾ ಸಂಸ್ಥೆಯ ಅಧಿಕಾರಿಗಳ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕಾಗಿ 20 ದಿನಗಳ ಹಿಂದೆಯೇ ಮಾರುಕಟ್ಟೆಯಲ್ಲಿ 50 ರೂ. ಕೊಟ್ಟು 7 ಇಂಚಿನ ತರಕಾರಿ ಕತ್ತರಿಸುವ ಚಾಕು ಖರೀದಿಸಿದ್ದ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.