ಮಠವು ಧರ್ಮ, ಸಂಸ್ಕೃತಿ, ಸಂಘಟನೆ, ಪರಂಪರೆಯ ಕೇಂದ್ರ


Team Udayavani, Mar 9, 2018, 11:11 AM IST

0803VTL-Manimata.jpg

ವಿಟ್ಲ : ಮಠವೆಂದರೆ ದೇವ ಭೂಮಿ. ದೇವರುಗಳ ಆಡುಂಬೊಲ. ಅಧ್ಯಾತ್ಮ, ಜ್ಞಾನದ ಬೆಳಕು ತುಂಬುವ ಕೇಂದ್ರ. ಗುರುಸ್ಥಾನವೂ ವೇದ ಸ್ಥಾನವೂ ಗೋವುಗಳ ಸ್ಥಾನವೂ ಹೌದು ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ ಅವರು ನುಡಿದರು.

ಅವರು ಶುಕ್ರವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠ, ಸಂಸ್ಕೃತ ವೇದಪಾಠ ಶಾಲೆ ವಾರ್ಷಿಕೋತ್ಸವ, ಸೂತ್ರ ಸಂಗಮದ ಬಳಿಕ ನಡೆದ ಧರ್ಮ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ನಡೆಸಿ, ಪುಸ್ತಕ ಹಾಗೂ ಧ್ವನಿಮುದ್ರಿಕೆ ಬಿಡು
ಗಡೆಗೊಳಿಸಿ, ಆಶೀರ್ವಚನ ನೀಡಿದರು.

ಅಕ್ಷತಾ ಸಾವು ನ್ಯಾಯವೇ ?
ಯಾವುದೇ ತಪ್ಪೆಸಗದ  ಸುಳ್ಯದ ವಿದ್ಯಾರ್ಥಿನಿ ಅಕ್ಷತಾ ಅವರನ್ನು ಹಾಡ ಹಗಲು ಕ್ರೂರ ವಾಗಿ ಕೊಲ್ಲಲಾಯಿತು. ಆದರೆ ಆ ಬಗ್ಗೆ ಸರಕಾರವಾಗಲೀ ಸಮಾಜವಾಗಲಿ ಗಮನಹರಿಸಲಿಲ್ಲ. ಅವಳ ಸಾವು ನ್ಯಾಯವೇ? ಹೆತ್ತವರ ನೋವಿಗೆ ಸ್ಪಂದಿಸುವವರೇ ಇಲ್ಲ. ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸಮಾಜ ಕೇಂದ್ರೀಕರಿಸಿದ್ದರೆ ವಿಶ್ವ ಮಹಿಳಾ ದಿನಾಚರಣೆ ಅರ್ಥಪೂರ್ಣ ವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಎಸೆಸೆಲ್ಸಿ ಬಳಿಕ ಕೋ ಎಜುಕೇಶನ್‌ ಬೇಡ ಎಂಬ ಕಾಲ ಬಂದಿದೆ. ಸಮಾಜ ಎಚ್ಚರವಾಗಬೇಕಿದೆ ಎಂದು ಶ್ರೀಗಳು ಸಮಾಜಕ್ಕೆ ಸಂದೇಶ ನೀಡಿದರು.

ಭಾನ್ಕುಳಿ ಮಠದಲ್ಲಿ ಗೋ ಸ್ವರ್ಗ
ಸಿದ್ಧಾಪುರದ ಭಾನ್ಕುಳಿ ಶ್ರೀ ರಾಮ ಚಂದ್ರಾಪುರ ಮಠದ ಆವರಣದಲ್ಲಿ 1,000 ದೇಸೀ ಗೋವು ಗಳು ಸಹಜ ವಾಗಿ ಬದುಕು ವಂತಹ ಗೋಶಾಲೆ ಯನ್ನು ನಿರ್ಮಿಸಲಾಗು ವುದು. ಮೇ 27ರಂದು ಗೋಶಾಲೆ ಉದ್ಘಾಟನೆ ಗೊಳ್ಳಲಿದೆ. ನಂತೂರು ಶ್ರೀ ಭಾರತೀ ಕಾಲೇಜು ಶ್ರೀ ಮಠದ ಮಂಗಳೂರು ಭಾಗದಲ್ಲಿ ಪ್ರಮುಖ ಕೇಂದ್ರ ವಾಗಿದೆ. ಆ ಕಾಲೇಜು ವಿದ್ಯಾರ್ಥಿ ಗಳ ಕೇಂದ್ರವಾಗಲಿ ಎಂದು ಹಾರೈಸಿದರು.

ಬಿಡುಗಡೆ – ಪುರಸ್ಕಾರ
ಶಂಕರ ಪಂಚಮಿ ಆಮಂತ್ರಣ ಪತ್ರಿಕೆ ಬಿಡುಗಡೆ, ಭಾರತೀ ಪ್ರಕಾಶನ ಹೊರತಂದ ರಾಮ ಪದ ಸತ್ಸಂಗದ ಧ್ವನಿಮುದ್ರಿಕೆ, ವೇ|ಮೂ| ಘನಪಾಠಿ ಶಂಕರನಾರಾಯಣ ಭಟ್‌ ಪಳ್ಳತ್ತಡ್ಕ ವಿರಚಿತ ಯಜುರ್ವೇದದಲ್ಲಿ ವರ್ಣಕ್ರಮ, ಸದಭಿರುಚಿ ಪ್ರಕಾಶನ ಪ್ರಕಾಶಿ ಸಿದ ಸುಬ್ರಾಯ ಸಂಪಾಜೆ ಅವರ ರಸರಾಮಾಯಣ ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿ ವಾಹಿನಿಯ ವತಿಯಿಂದ ಪ್ರದರ್ಶನ ಕರುಣಾ ವರಣದೊಳು ಕಲಾ ಅನಾವರಣ ಮೂಲಕ ಮಂಗಳೂರು ಹೋಬಳಿಯ ವಿದ್ಯಾರ್ಥಿಗಳ ಚಿತ್ರ ಕಲಾ ಪ್ರದರ್ಶನ ನಡೆಯಿತು. ಮಠದ ವಿವಿಧ ಯೋಜನೆಗಳಿಗೆ ದೇಣಿಗೆ ಸಮರ್ಪಣೆ ನಡೆಯಿತು.

ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕಾರ್ಯ ದರ್ಶಿ ಹರಿಪ್ರಸಾದ್‌ ಪೆರಿಯಾಪು, ಮಂಗಳೂರು ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್‌, ಕಾರ್ಯ ದರ್ಶಿ ನಾಗರಾಜ ಭಟ್‌ ಪೆದಮಲೆ, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ| ಶ್ರೀಕೃಷ್ಣ ಭಟ್‌, ಕಾರ್ಯದರ್ಶಿ ಸರ್ಪಮೂಲೆ ಬಾಲಸುಬ್ರಹ್ಮಣ್ಯ ಭಟ್‌, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅಶೋಕ ಕೆದ್ಲ, ಕಾರ್ಯದರ್ಶಿ ಶ್ರೀಧರ ಭಟ್‌ ಕೂವೆತ್ತಂಡ, ಮಹಾಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಸಂಧ್ಯಾ ಕಾನತ್ತೂರು, ಭಾರತೀ ಪ್ರಕಾಶನದ ಕಾರ್ಯದರ್ಶಿ ಅನುರಾಧಾ ಪಾರ್ವತಿ, ಮಾಣಿ ಮಠ ಸೇವಾ ಸಮಿತಿ ಕೋಶಾಧಿಕಾರಿ ಮೈಕೆ ಗಣೇಶ್‌ ಭಟ್‌, ವೇದಪಾಠ ಶಾಲೆಯ ಮುಖ್ಯ ಶಿಕ್ಷಕ ಕಾಂಚನ ಕೃಷ್ಣ ಕುಮಾರ, ಮಿತ್ತೂರು ಶ್ರೀನಿವಾಸ ಭಟ್‌, ಸದಭಿರುಚಿ ಪ್ರಕಾಶನದ ಶಂಕರ ಕುಳಮರ್ವ, ಶಾಂತಾ ಎಸ್‌.ಎನ್‌. ಭಟ್‌, ಶಿವರಾಜ ಬೆಂಗಳೂರು, ಕೇಶವ ಪ್ರಸಾದ ಕೂಟೇಲು ಉಪಸ್ಥಿತರಿದ್ದರು.

ಮಾಣಿ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್‌ ವರದಿ ಮಂಡಿಸಿದರು. ಕಾರ್ಯದರ್ಶಿ ಜನಾರ್ದನ ಭಟ್‌ ಲೆಕ್ಕಪತ್ರ ಮಂಡಿಸಿ ದರು. ಮಂಗಳೂರು ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಭಾಸ್ಕರ ಹೊಸಮನೆ ಪ್ರತಿಭಾ ಪುರಸ್ಕೃತರ ಪಟ್ಟಿ ಓದಿದರು. ಉದಯಶಂಕರ ಭಟ್ಟ ಅರಸಿನಮಕ್ಕಿ ನಿರ್ವಹಿಸಿದರು.

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.