ಉದ್ಘಾಟನಾ ಪರ್ವ ಶುರು
Team Udayavani, Mar 9, 2018, 11:52 AM IST
ನಗರದ ಹೃದಯ ಭಾಗದಲ್ಲಿ ಪ್ರಗತಿಯಲ್ಲಿರುವ ಮಹತ್ವಾಕಾಂಕ್ಷಿ ಓಕಳಿಪುರ ಅಷ್ಟಪಥ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ ಪೈಕಿ 3 ಪಥಗಳು ಸಾರ್ವಜನಿಕರಿಗೆ ಲಭ್ಯವಾಗಿವೆ. ಜತೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಲಾಗುತ್ತಿರುವ ಬಹುಮಹಡಿ ವಾಹನ ನಿಲುಗಡೆ ತಾಣದ 2 ಹಂತಗಳು ಪೂರ್ಣಗೊಂಡು ಒಂದು ಮಹಡಿ ಬಳಕೆಗೆ ಮುಕ್ತವಾಗಿದೆ. ಪಶ್ಚಿಮ ಕಾರ್ಡ್‌ರಸ್ತೆಯಲ್ಲಿ ಪ್ರಗತಿಯಲ್ಲಿರುವ ಬಸವೇಶ್ವರ ನಗರ ಹಾಗೂ ಮಂಜುನಾಥ ನಗರ ಜಂಕ್ಷನ್ ಮೇಲ್ಸೇತುವೆಗಳು ಅಂತಿಮ ಹಂತ ತಲುಪಿವೆ. ಇದರ ನಡುವೆಯೇ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಸಹ ಫೆಬ್ರವರಿ ತಿಂಗಳಲ್ಲಿ ವೇಗ ಪಡೆದಿವೆ.
ಕಾರ್ಡ್ ರಸ್ತೆ ಶೀಘ್ರ ಸಿಗ್ನಲ್ ಮುಕ್ತ
ಯೋಜನೆ: ಸಿಗ್ನಲ್ ಮುಕ್ತ ಕಾರಿಡಾರ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಶ್ಚಿಮ ಕಾರ್ಡ್ ರಸ್ತೆ ಬಸವೇಶ್ವರ ನಗರ, ಮಂಜುನಾಥ ನಗರ ಹಾಗೂ ಶಿವನಗರದಲ್ಲಿ ಮೇಲ್ಸೇತುವೆ ಗಳನ್ನು ನಿರ್ಮಿಸಲಾಗುದ್ದು, ಯೋಜನೆ ಯಿಂದ ಕಾರ್ಡ್ ರಸ್ತೆ ಸಿಗ್ನಲ್ ಮುಕ್ತವಾಗಲಿದೆ.
ಈ ತಿಂಗಳ ಪ್ರಗತಿ: ಎರಡು ಮೇಲ್ಸೇತುವೆಗಳಿಗೆ ಗರ್ಡ್‌ರ್‌ಗಳ (ಪ್ರೀಕಾಸ್ಟ್ ಎಲಿಮೆಂಟ್) ಅಳವಡಿಕೆ ಕಾರ್ಯ ಮುಗಿದಿದ್ದು, ರಸ್ತೆ ನಿರ್ಮಾಣ ಕೆಲಸ ನಡೆಸಲಾಗಿದೆ. ಎರಡು ಮೇಲ್ಸೇತುವೆ ಡಾಂಬರೀಕರಣ ಹಾಗೂ ವೈಟ್‌ಮಾರ್ಕಿಂಗ್ ಹಾಗೂ ತಡೆಗೋಡೆಗಳಿಗೆ ಬಣ್ಣ ಬಳಿಯುವ ಕೆಲಸಕ್ಕೆ ಮುಂದಾಗಿದ್ದಾರೆ.
ವಸ್ತುಸ್ಥಿತಿ: ಮಂಜುನಾಥ ನಗರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಡಾಂಬರೀಕರಣ, ಬೀದಿ ದೀಪ ಅಳವಡಿಕೆಯಂತಹ ಕೆಲಸಗಳನ್ನು ಮಾಡಲಾಗುತ್ತಿದೆ. ತಿಂಗಳಾಂತ್ಯಕ್ಕೆ ಬಸವೇಶ್ವನಗರ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಕಾಮಗಾರಿ ಸಹ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ಕೊಟ್ಟಿದ್ದಾರೆ.
ಮಂಜುನಾಥ ನಗರ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಜತೆಗೆ ಬಸವೇಶ್ವರ ನಗರದ ಮೇಲ್ಸೇತುವೆ ಕಾಮಗಾರಿ ಸಹ ಅಂತಿಮ ಹಂತದಲ್ಲಿದೆ.
-ಪಾಲಿಕೆ ಸಹಾಯಕ ಎಂಜಿನಿಯರ್
ಮೂರನೇ ಹಂತ ಕಾಮಗಾರಿ ಆರಂಭ
ಯೋಜನೆ: ನಗರದಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ಗಾಂಧಿನಗರದ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ.
ಗುತ್ತಿಗೆದಾರ: ಕೆಎಂವಿ ಪ್ರಾಜೆಕ್ಟ್
ಈ ತಿಂಗಳ ಪ್ರಗತಿ: ಮೊದಲ ಹಂತದಲ್ಲಿ ಒಂದು ಮಹಡಿಯನ್ನು ಪಾರ್ಕಿಂಗ್‌ಗಾಗಿ ಸಿದ್ಧಗೊಳಿಸಲಾಗಿದೆ. ಜತೆಗೆ ಎರಡು ಹಂತಗಳ ಕಟ್ಟಡ ನಿರ್ಮಾಣ ಕಾಮಗಾರಿಯ ಎಲ್ಲ ಮೇಲ್ಛಾವಣಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ಲಾಸ್ಟಿಂಗ್ ಕೆಲಸ ಮುಗಿದಿದೆ.
ವಸ್ತುಸ್ಥಿತಿ: ನಾಲ್ಕು ಹಂತಗಳ ಕಾಮಗಾರಿಯ ಪೈಕಿ ಎರಡು ಹಂತಗಳು ಪೂರ್ಣಗೊಳಿಸಿ, ಒಂದು ಮಹಡಿಯಲ್ಲಿ ಪಾರ್ಕಿಂಗ್ ಸೇವೆ ಕಲ್ಪಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಗುರುವಾರ (ಮಾ.1)ರಂದು ಉದ್ಘಾಟನೆಯಾಗಿದೆ. ಇದೀಗ ಮೂರನೇ ಹಂತ ಕಾಮಗಾರಿಗೆ ಪಾಯ ಹಾಕುವ ಕೆಲಸ ಆರಂಭಿಸಲಾಗಿದೆ.
ಎರಡು ಹಂತಗಳ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸ್ತುತ ಒಂದು ಮಹಡಿ ವಾಹನಗಳ ಪಾರ್ಕಿಂಗ್‌ಗೆ ಮುಕ್ತವಾಗಿದೆ. ಅದರಂತೆ ಮೂರನೇ ಹಂತದ ಕಾಮಗಾರಿಗೆ ಪಾಯ ಹಾಕಲಾಗಿದೆ. ಮೂರು ಹಂತಗಳ ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ ಮೂರು ಮಹಡಿಗಳಿಗೆ ಸಂಪರ್ಕಿಸುವ ರ್‍ಯಾಂಪ್‌ಗ್ಳನ್ನು ನಿರ್ಮಿಸಲಾಗುವುದು. ಮೊದಲ ಹಂತವಾಗಿ ಒಂದು ಮಹಡಿಯಲ್ಲಿ ವಾಹನ ನಿಲುಗಡೆ ಅವಕಾಶ ಕಲ್ಪಿಸಲು ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು.
-ಪಾಲಿಕೆ ಎಂಜಿನಿಯರ್
ಮೇಲ್ಸೇತುವೆ, ಅಂಡರ್‌ಪಾಸ್‌ಗೆ ಚಾಲನೆ
ಯೋಜನೆ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್ ಮುಕ್ತವಾಗಲಿದೆ.
ಈ ತಿಂಗಳ ಪ್ರಗತಿ: ಮಲ್ಲೇಶ್ವರ ಕಡೆಯಿಂದ ರಾಜಾಜಿನಗರ ಕಡೆಗೆ ಸಂಪರ್ಕಿಸುವ ಅಂಡರ್‌ಪಾಸ್ ಹಾಗೂ ನಗರ ರೈಲ್ವೆ ನಿಲ್ದಾಣದಿಂದ ರಾಜಾಜಿನಗರದ ಕಡೆಗೆ ಹೋಗುವ ರಸ್ತೆ ಹಾಗೂ ಮಲ್ಲೇಶ್ವರದ ಕಡೆಗೆ ಹೋಗುವ ಮೇಲ್ಸೇತುವೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ವಸ್ತುಸ್ಥಿತಿ: ಇತ್ತೀಚೆಗೆ ಮುಖ್ಯಮಂತ್ರಿಗಳು ಮೇಲ್ಸೇತುವೆ ಹಾಗೂ ಅಂಡರ್‌ಪಾಸ್ ಉದ್ಘಾಟಿಸಿದ್ದಾರೆ. ಅದರಂತೆ ಇದೀಗ ರೈಲ್ವೆ ನಿಲ್ದಾಣದಿಂದ ನಗರಕ್ಕೆ ಸಂಪರ್ಕಿಸುವ ಲೂಪ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ನಗರ ರೈಲ್ವೆ ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಹೋಗುವ ಮೇಲ್ಸೇತುವೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದ್ದು, ನಗರಕ್ಕೆ ಸಂಪರ್ಕಿಸುವ ಲೂಪ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಲೂಪ್-2 ನಿರ್ಮಾಣ ಕಾಮಗಾರಿ ಹಾಗೂ ರೈಲ್ವೆ ಹಳಿ ಕಳೆಗೆ ನಾಲ್ಕು ಎಲಿಮೆಂಟ್ ಅಳವಡಿಸುವ ಕಾಮಗಾರಿ ಮಾತ್ರ ಬಾಕಿಯಿದೆ.
-ಪಾಲಿಕೆ ಸಹಾಯಕ ಎಂಜಿನಿಯರ್
ಭೂಸ್ವಾಧೀನ ಪರಿಹಾರ ಅಪಸ್ವರ
ಕಾಮಗಾರಿ ಪ್ರಗತಿ: ಶೇ. 20-25
ಬಾಕಿ ಇರುವ ಕಾಮಗಾರಿ: ಕಂಬಗಳ ನಿರ್ಮಾಣ, ಹಳಿಗಳ ಜೋಡಣೆ, ವಿದ್ಯುತ್ ಲೈನ್ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ.
ವಸ್ತುಸ್ಥಿತಿ: ಐಟಿ-ಬಿಟಿ ಹಬ್ ವೈಟ್‌ಫೀಲ್ಡ್‌ಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ಮಾರ್ಗವು ಬಿಎಂಆರ್‌ಸಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಕೈಗಾರಿಕೆಗಳು ಕೂಡ ಈ ಮಾರ್ಗದಲ್ಲಿ ಹೆಚ್ಚು ಬರುತ್ತದೆ. ಈ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಇದನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಈಗಷ್ಟೇ ಅಡಿಪಾಯ ಹಾಕುವ ಕೆಲಸ ಮುಗಿದಿದ್ದು, ಕಂಬಗಳ ನಿರ್ಮಾಣ ಇನ್ಮುಂದೆ ಶುರುವಾಗಲಿದೆ. ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಗುತ್ತಿಗೆ ನೀಡಿದ್ದು, ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.
ವಿಳಂಬಕ್ಕೆ ಕಾರಣ: ಒಟ್ಟಾರೆ 15.50 ಕಿ.ಮೀ. ಪೈಕಿ ಕೆ.ಆರ್.ಪುರದ ಲೌರಿ ಮೆಮೋರಿಯಲ್ ಸ್ಕೂಲ್‌ನಿಂದ ಮಹದೇವಪುರ ನಡುವಿನ ಎರಡು ಕಿ.ಮೀ. ಮಾರ್ಗದಲ್ಲಿ ಕೆ.ಆರ್. ಪುರ, ಜಿ. ನಾರಾಯಣಪುರ, ವಿಜಿನಾಪುರ ಮತ್ತು ಮಹದೇವಪುರ ಗ್ರಾಮಗಳು ಬರುತ್ತವೆ. ಇಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪ್ರತಿಯಾಗಿ ನೀಡುವ ಪರಿಹಾರದ ವಿಚಾರದಲ್ಲಿ ಅಪಸ್ವರ ಕೇಳಿಬಂದಿತ್ತು.
ಚದರಡಿಗೆ 3,500ರಿಂದ 4 ಸಾವಿರ ರೂ. ನೀಡಲಾಗುತ್ತಿದೆ. ಆದರೆ, ಇದೇ ಯೋಜನೆಗೆ ಅಕ್ಕಪಕ್ಕ ವಶಪಡಿಸಿಕೊಂಡ ಭೂಮಿಗೆ ಚದರಡಿಗೆ 8ರಿಂದ 10 ಸಾವಿರ ರೂ. ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಸ್ಥಳೀಯರು ಆಕ್ಷೇಪ ಎತ್ತಿದ್ದರು. ಈಚೆಗೆ ದುಪ್ಪಟ್ಟು ಪರಿಹಾರ ಘೋಷಣೆ ಮಾಡಿ, ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದು ಯೋಜನೆ ಮೇಲೂ ಪರಿಣಾಮ ಬೀರಲು ಕಾರಣವಾಯಿತು.
ಮಾಹಿತಿ: ವೆಂ. ಸುನೀಲ್ ಕುಮಾರ್, ವಿಜಯ್‌ಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.