ತುಮಕೂರಿನಲ್ಲಿ ತೇಜ್‌ರಾಜ್‌ ಶರ್ಮಾ ವಿಚಾರಣೆ


Team Udayavani, Mar 9, 2018, 12:39 PM IST

Rajanikant-Lata-600.jpg

ತುಮಕೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರಿಗೆ ಚಾಕುವಿನಿಂದ ಇರಿದ ಪ್ರಕರಣದ ಸಂಬಂಧ ಗುರುವಾರ ಆರೋಪಿ ತೇಜ್‌ರಾಜ್‌ ಶರ್ಮನನ್ನು ಬೆಂಗಳೂರಿನಿಂದ ತುಮಕೂರಿಗೆ ಕರೆತಂದು ಅವನು ವಾಸವಿದ್ದ ಬಿದಿರು ಮಳೆ ತೋಟದ ಮನೆ ಮತ್ತು ಎಸ್‌.ಎಸ್‌.ಪುರಂನಲ್ಲಿ ಇದ್ದ ಮನೆಯನ್ನು ಪರಿಶೀಲಿಸಿ ಆತನಿಂದ ಮಾಹಿತಿ ಪಡೆದರು.

ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ವಿಧಾನ ಸೌಧ ಠಾಣೆಯ ಸಿಪಿಐ ಶಂಕರಾಚಾರ್‌ ಮತ್ತು ತುಮಕೂರು ತಿಲಕ್‌ ಪಾರ್ಕ್‌ ಸಿಪಿಐ ರಾಧಕೃಷ್ಣ ನೇತೃತ್ವದಲ್ಲಿ ಒಂಬತ್ತು ಜನರ ತಂಡ ಆರೋಪಿ ತೇಜರಾಜ್‌ ಶರ್ಮನೊಂದಿಗೆ ಆಗಮಿಸಿದ ಪೊಲೀಸರು ಮೊದಲು ಆತ ಬಿದಿರು ಮಳೆ ತೋಟದ ಬಡಾವಣೆಯಲ್ಲಿ ವಾಸವಿದ್ದ ಮನೆಯನ್ನು ತಪಾಸಣೆ ಮಾಡಿದರು.

ಅರ್ಜಿ, ದೇವರ ಫೋಟೋ ಪತ್ತೆ: ಸುಮಾರು 20 ನಿಮಿಷಗಳ ಕಾಲ ತಪಾಸಣೆ ನಡೆಸಿದ ಪೊಲೀಸರಿಗೆ ಆತನ ಮನೆಯಲ್ಲಿ ವಿವಿಧ ಇಲಾಖೆಗಳಿಗೆ ಅರ್ಜಿ ಹಾಕಿದ ಪತ್ರಗಳು ಮತ್ತು ದೇವರ ಪುಸ್ತಕಗಳು, ಮಾಟ ಮಂತ್ರದ ಪುಸ್ತಕಗಳು, ಅದಕ್ಕೆ ಸಂಬಂಧಿಸಿ ಇತರೆ ವಸ್ತುಗಳು ದೊರೆತವು ಎಂದು ತಿಳಿದು ಬಂದಿದೆ.

ಇವೆಲ್ಲವನ್ನು ಮಹಜರು ಮಾಡಿದ ಪೊಲೀಸ್‌ ಅಧಿಕಾರಿಗಳು ತಕ್ಷಣ ಅಲ್ಲಿಂದ ಆತನನ್ನು ಹೊಸ ಬಡಾವಣೆ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಕೆಲವು ವಿಚಾರಣೆ ನಡೆಸಿದರು.ನಂತರ ಆತನಿಗೆ ತಿನ್ನಲು ಇಡ್ಲಿ ನೀಡಿದರು.

ಇಡ್ಲಿ ತಿಂದು ಕೆಲ ಹೊತ್ತು ಠಾಣೆಯಲ್ಲಿಯೇ ಇರಿಸಿ ಆನಂತರ ಎಸ್‌ಎಸ್‌ಪುರಂ ನಲ್ಲಿ ವಾಸವಿದ್ದ ಮನೆಯನ್ನು ತಪಾಸಣೆ ನಡೆಸಿದರು. ತಪಾಸಣೆ ವೇಳೆಯಲ್ಲಿ ಏನೆಲ್ಲಾ ದೊರೆತಿದೆ ಎನ್ನುವುದನ್ನು ಹೇಳಲು ಪೊಲೀಸರು ನಿರಾಕರಿಸಿದರು. ತಪಾಣೆಯ ವೇಳೆಯಲ್ಲಿ ಎರಡು ಮನೆಗಳಲ್ಲಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಎರಡು ಕಡೆ ತಪಾಸಣೆ ನಡೆಸಿದ ನಂತರ ಬೆಂಗಳೂರಿಗೆ ಆರೋಪಿಯನ್ನು ಕರೆದುಕೊಂಡು ಹೋದರು.

ಜನಜಂಗುಳಿ: ಆರೋಪಿ ತೇಜರಾಜ್‌ಶರ್ಮ ನನ್ನು ಆತ ವಾಸವಿದ್ದ ಮನೆಗಳ ಬಳಿ ತಪಾಸಣೆಗಾಗಿ ಕರೆದುಕೊಂಡು ಬರುತ್ತಾರೆ ಎನ್ನುವ ಸುದ್ದಿ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನ ಆತನನ್ನು ನೋಡಲು ನಿಂತಿದ್ದರು. ಈ ಸಂಬಂಧವಾಗಿ ಆತ ವಾಸವಿದ್ದ ಮನೆಯ ಬೀದಿಯ ಅಕ್ಕಪಕ್ಕ ಬ್ಯಾರಿಕೇಟ್‌ಗಳನ್ನು ಹಾಕಿ ಪೊಲೀಸ್‌ ಭದ್ರತೆ ಒದಗಿಸಿದ್ದರು.

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.