ಠಾಣೆಗೆ ಹಾಜರಾದ ಲಕ್ಷ್ಮೀ-ಸುಂದರ್; ದುನಿಯಾ ವಿಜಿ ಸಾಥ್
Team Udayavani, Mar 9, 2018, 3:49 PM IST
ಬೆಂಗಳೂರು: ಮೈಸೂರಿನ ದೇವಾಲಯದಲ್ಲಿ ವಿವಾಹವಾಗಿದ್ದ ಶಾಸಕ ಶಿವಮೂರ್ತಿ ನಾಯಕ್ ಅವರ ಪುತ್ರಿ ಲಕ್ಷ್ಮೀ ನಾಯಕ್ ಹಾಗೂ ಚಿತ್ರನಿರ್ಮಾಪಕ ಪಿ.ಸುಂದರ್ ಇಂದು ಶುಕ್ರವಾರ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಹಾಜರಾಗಿ ನಾವು ಪರಸ್ಪರ ಪ್ರೀತಿಸುತ್ತಿದ್ದು ಸ್ವಇಚ್ಛೆಯಿಂದಲೇ ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.
ಲಕ್ಷ್ಮೀ ಹಾಗೂ ಸುಂದರ್ ಗೌಡ ವಿವಾಹವಾದ ಬಳಿಕ ನಟ ದುನಿಯಾ ವಿಜಯ್ ಅವರ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ್ದರು. ನಿವಾಸದಿಂದ ಕಾರಿನಲ್ಲಿ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದಾರೆ. ಈ ವೇಳೆ ದುನಿಯಾ ವಿಜಯ್ ಅವರು ಜೊತೆಗಿದ್ದರು.
ಠಾಣಾಧಿಕಾರಿಯ ಮುಂದೆ ಹೇಳಿಕೆ ನೀಡಿ ಚನ್ನಮ್ಮನ ಅಚ್ಚುಕಟ್ಟು ಪ್ರದೇಶದಲ್ಲಿರುವ ಸುಂದರ್ ನಿವಾಸಕ್ಕೆ ತೆರಳಿ ಸುದ್ದಿಗೋಷ್ಠಿಯನ್ನು ನಡೆಸಿದರು.
‘ನಮ್ಮಿಂದ ಯಾರಿಗಾದರು ತೊಂದರೆಯಾದರೆ ಕ್ಷಮಿಸಿ, ಲಕ್ಷ್ಮೀ ಮನೆಯಲ್ಲಿ ವಿರೋಧಿಸಿದ್ದರಿಂದ ಈ ರೀತಿ ವಿವಾಹವಾಗಿದ್ದೇವೆ. ಮುಂದೆ ಎಲ್ಲವೂ ಸರಿ ಹೋಗುವ ವಿಶ್ವಾಸವಿದೆ’ ಎಂದರು.
ಕಣ್ಣೀರಿಡುತ್ತಿರುವ ಲಕ್ಷ್ಮೀ ಕುಟುಂಬ
ಲಕ್ಷ್ಮೀ ತಾಯಿ ಚೀಫ್ ಮೆಡಿಕಲ್ ಆಫೀಸರ್ ಆಗಿರುವ ಡಾ.ಗೀತಾ ಮಾಧ್ಯಮದ ಎದುರು ಮಗಳ ಪ್ರಕರಣದಿಂದ ನೊಂದು ಕಣ್ಣೀರಿಟ್ಟಿದ್ದಾರೆ.
ನನ್ನ ಮಗಳಿಗೆ 23 ವರ್ಷ,ಸುಂದರ್‌ಗೆ 36 ವರ್ಷ ಪ್ರಾಯ. ಅವನು ಮಾಸ್ತಿಗುಡಿ ದುರಂತ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದವನು, ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಎಂದು ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.
ಎಂಬಿಬಿಎಸ್ ವಿದ್ಯಾರ್ಥಿನಿ!
ಲಕ್ಷ್ಮೀ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 3 ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಕಳೆದ 7 ತಿಂಗಳ ಹಿಂದೆ ಸುಂದರ್ ಜೊತೆ ಪ್ರೇಮಾಂಕುವಾಗಿತ್ತು.
ಇವೆಂಟ್ ಮ್ಯಾನೇಜರ್ ಆಗಿರುವ ಸುಂದರ್ ತಂಗಿಯ ಗಂಡನ ಮೂಲಕ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.