ಚೆನ್ನೈ: ರೈತ ನಾಯಕನಿಗೆ ಬಿಜೆಪಿ ನಾಯಕಿಯಿಂದ ಕಪಾಳ ಮೋಕ್ಷ, Watch
Team Udayavani, Mar 9, 2018, 4:23 PM IST
ಚೆನ್ನೈ : ಕೇಂದ್ರ ಸರಕಾರವನ್ನು ಟೀಕಿಸುವ ಕರಪತ್ರಗಳನ್ನು ಹಂಚಿದ ಕಾರಣಕ್ಕೆ ಸಿಟ್ಟಿಗೆದ್ದ ಬಿಜೆಪಿ ಮಹಿಳಾ ವಿಭಾಗದ ಜಿಲ್ಲಾ ಕಾರ್ಯದರ್ಶಿ ನೆಲ್ಲಯ್‌ಯಮ್ಮಾಳ್, ತಮಿಳು ನಾಡಿನ ರೈತ ನಾಯಕ ಪಿ ಅಯ್ಯಕಣ್ಣು ಅವರಿಗೆ ಕಪಾಳ ಮೋಕ್ಷ ಮಾಡಿ, ಕೋಪಾವೇಶದ ಪರಾಕಾಷ್ಠೆಯಲ್ಲಿ ಕಾಲಲ್ಲಿದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ಬೆದರಿಸಿದ ಘಟನೆಯ ವಿಡಿಯೋ ಚಿತ್ರಿಕೆ ಈಗ ವೈರಲ್ ಆಗಿದೆ.
ಮಾತಿನ ಜಗಳದಲ್ಲಿ ಉದ್ರಿಕ್ತತೆ ತಲೆದೋರಿದ ಈ ಘಟನೆ ನಡೆದದ್ದು ಚೆನ್ನೈನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ.
#WATCH: Heated argument ensued between District Secretary of the BJP's women's wing Nellaiyammal and Tamil Nadu Farmer leader P Ayyakannu outside premises of Sri Subramania Swamy Temple in Thiruchendur when the latter was allegedly distributing pamphlets criticising Central govt. pic.twitter.com/Ze8FJu5FN0
— ANI (@ANI) March 9, 2018
ರೈತ ನಾಯಕ ಅಯ್ಯಕಣ್ಣು ಅವರು ರೈತರ ಸಂಕಷ್ಟಗಳ ಬಗ್ಗೆ ಸರಕಾರದ ಗಮನ ಸೆಳೆದು ಪರಿಹಾರ ಕಾಣಲು ನೂರು ದಿನಗಳ ಪ್ರತಿಭಟನಾ ರಾಲಿ ನಡೆಸುತ್ತಿದ್ದಾರೆ. ಈ ರಾಲಿಯನ್ನು ಅವರು ಕಳೆದ ವಾರ ಕನ್ಯಾಕುಮಾರಿಯಲ್ಲಿ ಆರಂಭಿಸಿದರು. ಅವರು ಹೋದಲ್ಲೆಲ್ಲ ಜನರನ್ನು ಉದ್ದೇಶಿಸಿ ಮಾತನಾಡಿ ರೈತರ ಬೇಡಿಕೆಗಳನ್ನು ಒಳಗೊಂಡ ಕರಪತ್ರಗಳನ್ನು ಜನರಿಗೆ ವಿತರಿಸುತ್ತಾರೆ. ಅವರ ಬೇಡಿಕೆಗಳಲ್ಲಿ ರೈತರ ಕೃಷಿ ಸಾಲ ಮನ್ನಾ, ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ, ಹಿರಿಯ ರೈತರಿಗೆ ಪಿಂಚಣಿ ಮುಖ್ಯವಾಗಿವೆ.
ತಿರುಚೆಂದೂರು ದೇವಳ ಆವರಣವನ್ನು ಇವರು ಪ್ರವೇಶಿಸಿ ಅಲ್ಲಿದ್ದವರಿಗೆ ರೈತರ ಬೇಡಿಕೆಗಳ ಕರ ಪತ್ರ ವಿತರಿಸುವಾಗ ಅಲ್ಲಿಗೆ ಧಾವಿಸಿ ಬಂದ ಬಿಜೆಪಿ ನಾಯಕಿ ಕರಪತ್ರ ಕಸಿದು ಮಾತಿನ ಜಗಳ ಆರಂಭಿಸಿ ಕಪಾಳ ಮೋಕ್ಷ ಮಾಡಿ ಚಪ್ಪಲಿ ಕೈಗೆತ್ತಿಕೊಂಡು ರೈತ ನಾಯಕನಿಗೆ ಬೆದರಿಕೆ ಹಾಕಿದರು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.