ಹೆರ್ಗ: ಸ್ವರ್ಣೆ ನದಿಯಲ್ಲಿ ಸತ್ತ ಮೀನುಗಳು ಪತ್ತೆ
Team Udayavani, Mar 10, 2018, 6:15 AM IST
ಉಡುಪಿ: ಹೆರ್ಗ ಸಮೀಪ ಇರುವ ಗೋಪಾಲತೋಟದ ಕಡವಿನ ಬಾಗಿಲು ಪರಿಸರದಲ್ಲಿ ಸ್ವರ್ಣಾ ನದಿಯಲ್ಲಿ ಸುಮಾರು 30-40ರಷ್ಟು ಸತ್ತಮೀನುಗಳು ಮಾ.9ರಂದು ಪತ್ತೆಯಾಗಿವೆ.
ಕೆಲವು ಮೀನುಗಳು ಪೊದೆಯಲ್ಲಿ ಸಿಲುಕಿಕೊಂಡಿರುವುದು.
ಸ್ಥಳೀಯರಾದ ಎಮಿಡಾ ಡಿ’ಸೋಜ, ಬ್ಯಾಪಿಸ್ಟ್ ಡಿ’ಅಲ್ಮೆಡಾ, ಡಯಾನ ಡಿ.ಅಲ್ಮೆಡಾ ಮೊದಲಾದವರು ಸಮಾಜಸೇವಕ ಗಣೇಶ್‌ರಾಜ್ ಸರಳೇಬೆಟ್ಟು ಅವರಿಗೆ ಈ ಕುರಿತು ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಗಣೇಶ್‌ರಾಜ್ ಅವರು ಅಂಬಿಗ ತಿಮ್ಮ ಪೂಜಾರಿ ಮತ್ತು ಸ್ಥಳೀಯರ ಜತೆ ಸೇರಿ ದೋಣಿಯ ಮೂಲಕ ಸಾಗಿ ಪರಿಶೀಲನೆ ನಡೆಸಿದರು. ಆಗ ಸುಮಾರು 40ರಷ್ಟು ಸತ್ತಮೀನುಗಳು ಹಾಗೂ ಒಂದು ಉಡ ಕೂಡ ಪತ್ತೆಯಾಯಿತು. ಕೆಲವು ಮೀನುಗಳು ನದಿ ಪಕ್ಕದ ಪೊದೆಗಳ ಮೇಲೆ ಕೂಡ ಇದ್ದವು. ನೀರಿನ ಮಟ್ಟ ಏರಿಕೆಯಾದ ಸಂದರ್ಭದಲ್ಲಿ ಅವುಗಳು ಪೊದೆಗಳ ಸಣ್ಣ ಕಾಂಡಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಕೆಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಸತ್ತು ಬಿದ್ದಿರುವ ಉಡದ ಎದುರು ಮೀನಿನ ಮುಳ್ಳುಗಳಿವೆ. ಹಾಗಾಗಿ ಉಡ ಕೂಡ ಮೀನುಗಳನ್ನು ತಿಂದ ಅನಂತರ ಸತ್ತಿರಬಹುದು ಎನ್ನುತ್ತಾರೆ ಸ್ಥಳೀಯರು.
ಒಂದೇ ಜಾತಿಯ ಮೀನುಗಳು
ಶಿಂಬ್ರ ನೂತನ ಸೇತುವೆಯವರೆಗೂ ಸತ್ತಿರುವ ಮೀನುಗಳು ಪತ್ತೆಯಾಗಿವೆ. ಈಗಾಗಲೇ ಹಲವಾರು ಮೀನುಗಳನ್ನು ಹದ್ದು, ಕೊಕ್ಕರೆಗಳು ತಿಂದಿವೆ. ಸತ್ತಿರುವ ಮೀನುಗಳೆಲ್ಲಾ “ಇಪೆ’ಎಂದು ಕರೆಯಲ್ಪಡುವ ಮೀನುಗಳು. ಇವು ತೀರಾ ಸಣ್ಣ ಗಾತ್ರದ ಮೀನುಗಳಲ್ಲ. ದೊಡ್ಡದಿವೆ. ನದಿನೀರು ಈಗ ಉಪ್ಪಾಗಿದೆ. ಉಪ್ಪುನೀರಿನಲ್ಲಿ ನದಿಯ ಮೀನುಗಳು ಸಾಯುವುದಿಲ್ಲ. ಇಷ್ಟಕ್ಕೂ ಒಂದೇ ಜಾತಿಗೆ ಸೇರಿದ ಮೀನುಗಳು ಸತ್ತಿರುವುದು ಹೆಚ್ಚು ಕುತೂಹಲ ಮೂಡಿಸಿದೆ. ಮೀನುಗಳನ್ನು ಪರಿಶೀಲಿಸುವುದಾದರೆ ಕೆಲವು ಮೀನುಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದೇವೆ ಎಂದು ಗಣೇಶ್‌ರಾಜ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಪರಿಶೀಲಿಸಲಿ
ನದಿ ನೀರಿನಲ್ಲೇನಾದರೂ ಕಶ್ಮಲ ತುಂಬಿದ ಪರಿಣಾಮವಾಗಿ ಮೀನುಗಳು ಸತ್ತಿವೆಯೇ ಅಥವಾ ಇನ್ನಾವುದೇ ಬೇರೆ ಕಾರಣದಿಂದ ಸತ್ತಿವೆಯೇ ಎಂಬುದನ್ನು ಜಿಲ್ಲಾಡಳಿತ ಪರಿಶೀಲಿಸಬೇಕು. ಸ್ಥಳೀಯರ ಸಂಶಯ ದೂರ ಮಾಡಬೇಕು ಎಂದು ಗಣೇಶ್‌ರಾಜ್ ಸರಳೇಬೆಟ್ಟು ಮತ್ತು ಜಯಶೆಟ್ಟಿ ಬನ್ನಂಜೆ ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.