“ಗ್ರಾಮೀಣ ಕರಕುಶಲಕರ್ಮಿಗಳಿಗೆ ಅವಕಾಶ ನೀಡಿ’
Team Udayavani, Mar 10, 2018, 6:30 AM IST
ಉಡುಪಿ: ಗಾಮೀಣ ಕರಕುಶಲಕರ್ಮಿಗಳಿಗೆ ಅನುಕಂಪ, ಕರುಣೆಗಿಂತ ಅವಕಾಶಗಳನ್ನು ನೀಡಬೇಕು ಎಂದು ಮಣಿಪಾಲ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಅವರು ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್ ಅವರು ಆಯೋಜಿಸಿದ ಮೂರು ದಿನಗಳ ನಮ್ಮ ಅಂಗಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಹ್ಯವಾದ ವಸ್ತುಗಳ ನಿರ್ಮಾಣದಿಂದ ವಾತಾವರಣವೂ ನಿರ್ಮಲ ವಾಗಿರುತ್ತದೆ. ಶೇ.70ಕ್ಕೂ ಅಧಿಕದಷ್ಟು ಜನರು ಗಾಮೀಣ ಪ್ರದೇಶದಲ್ಲಿ ವಾಸಿಸುತ್ತಿರು ವುದರಿಂದ ಅವರಿಗೆ ವಿಶೇಷ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ಅವರು ನಗರದತ್ತ ಬರುವ ಅಗತ್ಯವೂ ಕಡಿಮೆಯಾಗುತ್ತದೆ ಎಂದು ಅವರು ಅಭಿಪಾಯಪಟ್ಟರು.
ಅಭಿವೃದ್ಧಿ ಹೆಸರಿನಲ್ಲಿ ನಾಶ
ಗ್ರಾಮೀಣ ಪರಿಸರದಲ್ಲಿ ಅಭಿವೃದ್ಧಿಯ ಹೆಸರಲ್ಲಿ ನಾಶವಾಗುತ್ತಿದೆ. ಪರಿಸರ ನಾಶವಾಗುತ್ತಿದೆ. ಶ್ರಮಿಕವರ್ಗ ಮಾಯವಾಗುತ್ತಿದೆ. ಫಲವತ್ತಾದ ಮಣ್ಣು ಹಾಳಾಗುತ್ತಿದೆ. ಇದರಿಂದಾಗಿ ಕುಶಲಕರ್ಮಿಗಳಿಗೆ ಅಗತ್ಯವಿರುವ ಕಚ್ಚಾವಸ್ತುಗಳ ಲಭ್ಯತೆ ದುಸ್ತರವಾಗುತ್ತಿದೆ. ಇದನ್ನೇ ನಂಬಿಕೊಂಡು ಜೀವನ ಮಾಡುವ ಕುಟುಂಬಗಳು ಬೀದಿಗೆ ಬರುತ್ತಿವೆ ಎಂದು ನಮ್ಮ ಭೂಮಿಯ ಮುಖ್ಯಸ್ಥ ಶಿವಾನಂದ ಶೆಟ್ಟಿ ಹೇಳಿದರು.
ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಶನ್ನಿನ ನಿರ್ದೇಶಕರಾದ ಡಾ| ಪದ್ಮಾರಾಣಿ, ಸಹಾಯಕ ಪಾಧ್ಯಾಪಕಿ ಮಂಜುಳಾ ವೆಂಕಟರಾಘವನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕ ಪದ್ಮಕುಮಾರ್ ಸ್ವಾಗತಿಸಿ, ಸುಪಜಾ ವಂದಿಸಿದರು. ಸಂಗೀತಾ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.