ನವದೆಹಲಿ ನಿವಾಸಿ ವಿರಾಟ್ ಕೊಹ್ಲಿ ಉ.ಪ್ರದೇಶ ಮತದಾರನಾಗಿದ್ದು ಹೇಗೆ?
Team Udayavani, Mar 10, 2018, 8:15 AM IST
ಲಕ್ನೋ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಬರೀ ಭಾರತವಲ್ಲ ವಿಶ್ವದ ಹಲವು ರಾಷ್ಟ್ರಗಳಲ್ಲಿ ಜನಪ್ರಿಯ ವ್ಯಕ್ತಿ. ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲೂ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಂತಹ ಕೊಹ್ಲಿಯ ಮತದಾರ ಪತ್ರವೇ ವ್ಯತ್ಯಾಸವಾಗುತ್ತದೆಂದರೆ? ಹೌದು, ಇಂತಹದೊಂದು ವಿಚಿತ್ರ, ಬೇಜವಾಬ್ದಾರಿ ಘಟನೆ ಸಂಭವಿಸಿದೆ. ವಾಸ್ತವವಾಗಿ ಕೊಹ್ಲಿ ದೆಹಲಿ ನಿವಾಸಿ. ಅವರೀಗ ದಿಢೀರೆಂದು ಉತ್ತರಪ್ರದೇಶದ ಗೋರಖಪುರದ ಸಹಜನ್ವಾ
ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ!
ಇದು ಗೊತ್ತಾಗಲು ಕಾರಣ ಉತ್ತರಪ್ರದೇಶ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ. ಉತ್ತರಪ್ರದೇಶದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದ ಕಾರಣ ಯೋಗಿ ಆದಿತ್ಯನಾಥ್ ಮತ್ತು ಕೇಶವ ಪ್ರಸಾದ್ ಮೌರ್ಯ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಮಾ.11ರಂದು ಚುನಾವಣೆ ನಡೆಯಲಿದ್ದರೆ ಮಾ.14ಕ್ಕೆ ಮತಎಣಿಕೆ ನಡೆಯಲಿದೆ. ಆ ಕಾರಣಕ್ಕೆ ಸಹಜನ್ವಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾಗ ಬೂತ್ ಅಧಿಕಾರಿ ಸುನೀತಾ ಚೌಬೆಗೆ 5 ದಿನಗಳ ಹಿಂದೆ ವಿಷಯ ಗೊತ್ತಾಗಿದೆ. ಅಲ್ಲಿ ಕೊಹ್ಲಿಯ ಮತದಾರ ಸಂಖ್ಯೆ 822 ಎಂದು ಚಿತ್ರ ಸಹಿತ ಲಗತ್ತಾಗಿದೆ! ಕೊಹ್ಲಿಯ ಹೆಸರು ಇಲ್ಲಿ ಹೇಗೆ ಬರಲು ಸಾಧ್ಯ ಎಂದು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಇದು ಎಡವಟ್ಟು ಎಂದು ಗೊತ್ತಾಗಿದೆ. ಆದ್ದರಿಂದ
ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.