ರೈತರ ನೆರವಿಗೆ ಸಹಕಾರ ಮಾರಾಟ ಮಹಾಮಂಡಳ
Team Udayavani, Mar 10, 2018, 6:00 AM IST
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 1652 ಕೋಟಿ ರೂ. ಮೌಲ್ಯದ ತೊಗರಿ, ಕಡಲೇಕಾಳು, ಉದ್ದು, ಹೆಸರುಕಾಳು, ರಾಗಿ ಖರೀದಿ ಮಾಡಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.
ರಾಜೇಂದ್ರಕುಮಾರ್, ಮಂಡಳಿಯು ಬೆಂಬಲ ಬೆಲೆ ಯೋಜನೆಯಡಿ ಧಾನ್ಯಗಳನ್ನು ಖರೀದಿಸಿ ರಾಜ್ಯದ ರೈತರ ನೆರವಿಗೆ ಧಾವಿಸಿದೆ. ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪೂರ್ಣ ಪ್ರಮಾಣದ ಹಣ ರೈತರಿಗೆ ತಲುಪುವಂತೆ ಮಾಡಿದೆ ಎಂದು ಹೇಳಿದರು.
ಮಹಾ ಮಂಡಳವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 39 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ರಸಗೊಬ್ಬರ ಕಾಪು ದಾಸ್ತಾನು ಯೋಜನೆ, ಬೆಂಬಲ ಬೆಲೆ ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದಲ್ಲಿ ಒಟ್ಟು 12 ಲಕ್ಷ ಟನ್ ತೊಗರಿ
ಉತ್ಪಾದನೆಯಾಗಿದ್ದು ಕೃಷಿ ಇಲಾಖೆ 9 ಲಕ್ಷ ಟನ್ ಉತ್ಪಾದನೆ ಲೆಕ್ಕಾಚಾರ ಕೇಂದ್ರ ಸರ್ಕಾರಕ್ಕೆ ಕೊಟ್ಟಿದೆ. ಇದುವರೆಗೂ ಕೇಂದ್ರ ಸರ್ಕಾರ 3.64 ಲಕ್ಷ ಟನ್ ಖರೀದಿಗೆ ಒಪ್ಪಿಗೆ ನೀಡಿದೆ. ಪ್ರತಿ ಕ್ವಿಂಟಾಲ್‌ಗೆ 6 ಸಾವಿರ ರೂ.ನಂತೆ ಪ್ರತಿ ರೈತನಿಂದ ಹತ್ತು ಕ್ವಿಂಟಾಲ್‌ನಂತೆ ತೊಗರಿ ಖರೀದಿ ಮಾಡಲಾಗಿದ್ದು, ಇಲ್ಲಿವರೆಗೆ 1,81,387 ರೈತರಿಂದ 1412 ಕೋಟಿ ರೂ. ಮೊತ್ತದ ತೊಗರಿ ಖರೀದಿ ಮಾಡಿದೆ. ಈ ಸಂಬಂಧ ನ್ಯಾಫೆಡ್ ಸಂಸ್ಥೆಯು ಹಣ ಪಾವತಿ ಬಿಡುಗಡೆ ಮಾಡುತ್ತಿದ್ದು ಇಲ್ಲಿಯವರೆಗೆ 462 ಕೋಟಿ ರೂ. ಬಿಡುಗಡೆ ಮಾಡಿದೆ. ಉಳಿದ ಮೊತ್ತ ಕೂಡಲೇ ಬಿಡುಗಡೆ ಮಾಡುವಂತೆ ನ್ಯಾಫೆಡ್ ಸಂಸ್ಥೆಗೆ ತಿಳಿಸಲಾಗಿದೆ. ಕಡಲೇಕಾಳು ಖರೀದಿ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ 296 ಖರೀದಿ ಕೇಂದ್ರಗಳನ್ನು ಮಹಾಮಂಡಳದ ಶಾಖೆಗಳ ಮೂಲಕ ತೆರೆದು 4,400 ದರದಲ್ಲಿ ಖರೀದಿಸಲಾಗುತ್ತಿದೆ. 2.02 ಲಕ್ಷ ಟನ್ ಕಡಲೇಕಾಳು ಖರೀದಿ ಗುರಿ ಹೊಂದಲಾಗಿದ್ದು, ಪ್ರತಿ ರೈತನಿಂದ 15 ಕ್ವಿಂಟಾಲ್
ನಂತೆ 7,570 ರೈತರಿಂದ ಇಲ್ಲಿಯವರೆಗೆ 40 ಕೋಟಿ ರೂ. ಮೌಲ್ಯದ 90,672 ಕ್ವಿಂಟಾಲ್ ಕಡಲೆ ಖರೀದಿಸಲಾಗಿದೆ.
ದಕ್ಷಿಣ ಕರ್ನಾಟಕ ಭಾಗದಲ್ಲಿ ರಾಗಿ ಹೆಚ್ಚಾಗಿ ಬೆಳೆದಿರುವುದರಿಂದ 7 ಖರೀದಿ ಕೇಂದ್ರ ಹಾಸನ ಜಿಲ್ಲೆಯಲ್ಲಿ ತೆರೆದು 1320 ರೈತರಿಂದ ಪ್ರತಿ ರೈತನಿಂದ 75 ಕ್ವಿಂಟಾಲ್‌ನಂತೆ 9 ಕೋಟಿ ರೂ. ಮೌಲ್ಯದ 39.134 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. ಜತೆಗೆ 13000 ರೈತರಿಂದ 70 ಕೋಟಿ ರೂ. ಮೌಲ್ಯದ 1,70,000ಕ್ವಿಂಟಾಲ್ ಉದ್ದು, 21644 ರೈತರಿಂದ 121 ಕೋಟಿ ರೂ. ಮೌಲ್ಯದ 2.17
ಲಕ್ಷ ಕ್ವಿಂಟಾಲ್ ಹೆಸರು ಕಾಳು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಖರೀದಿ ಮಾಡಲಾಗಿದೆ. ಮಹಾಮಂಡಳವು 1 ಸಾವಿರ ಕೋಟಿ ರೂ.ಗೂ ಮೇಲ್ಪಟ್ಟು ವಹಿವಾಟು ನಡೆಸುತ್ತಿದ್ದು, ಈ ವರ್ಷ ಕೃಷಿ ಉತ್ಪನ್ನ ಖರೀದಿ ಹೆಚ್ಚಾಗಿರುವುದರಿಂದ 2500 ಕೋಟಿ ರೂ.
ವ್ಯವಹಾರ ಮಾರ್ಚ್ ಅಂತ್ಯದೊಳಗೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಕೃಷಿ ಇಲಾಖೆ ಮೂಲಕ ಮಹಾ ಮಂಡಳಕ್ಕೆ ಕಾಪು ದಾಸ್ತಾನು ರಸಗೊಬ್ಬರ ಖರೀದಿ ಯೋಜನೆಗಾಗಿ ಬ್ಯಾಂಕಿನಿಂದ 500 ಕೋಟಿ ರೂ. ಸಾಲ ಸೌಲಭ್ಯ ಲಭ್ಯವಾಗಿದೆ. ಇದನ್ನು ಬಳಸಿಕೊಂಡು ರೈತರಿಗೆ ಬೇಕಾಗುವ ರಸಗೊಬ್ಬರಗಳನ್ನು ಕೃಷಿ ಹಂಗಾಮಿಗೆ ಮುಂಚಿತವಾಗಿ ದಾಸ್ತಾನು ಮಾಡಲಾಗುತ್ತಿದೆ.
ಸದ್ಯ ಎಲ್ಲ ಜಿಲ್ಲೆಗಳಲ್ಲಿ 1,30,000 ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಈ ತಿಂಗಳಲ್ಲಿ 1 ಲಕ್ಷ ಟನ್‌ವರೆಗೆ ಕೃಷಿ ಇಲಾಖೆ
ಬೇಡಿಕೆಯಂತೆ ದಾಸ್ತಾನು ಮಾಡಲು ಯೋಜಿಸಲಾಗಿದೆ. ಕೇಂದ್ರ ಸರ್ಕಾರವು ರಸಗೊಬ್ಬರ ಮಾರಾಟ ಮಾಡಲು ಷರತ್ತು
ವಿಧಿಸಿದ್ದು, ಬಿಎಸ್‌ಸಿ, ಎಂಎಸ್‌ಸಿ ಕೃಷಿ ಪದವಿ ಮಾಡಿದವರಿಗೆ ಮಾತ್ರ ಲೈಸೆನ್ಸ್ ನೀಡುವುದಾಗಿ ತಿಳಿಸಿದೆ. ಹೀಗಾದರೆ ಕಷ್ಟವಾಗಬಹುದು. ಮತ್ತೆ ಕೇಂದ್ರದ ಸುತ್ತೋಲೆಯಲ್ಲಿ ನಿಯಮ ಸಡಿಲವಾಗಬಹುದು ಎಂದು ಹೇಳಲಾಗುತ್ತಿದೆ. ಆಗ ಸ್ಪಷ್ಟತೆ ದೊರೆಯಲಿದೆ ಎಂದು ಹೇಳಿದರು.
ಅಮೃತ ಮಹೋತ್ಸವ: 1943ರಲ್ಲಿ ಸ್ಥಾಪನೆಯಾದ ಮಂಡಳ ಸಣ್ಣ ಸಹಕಾರ ಸಂಸ್ಥೆಯಾಗಿ ಪ್ರಾರಂಭಗೊಂಡು ರಾಜ್ಯಮಟ್ಟದ ಸಂಸ್ಥೆಯಾಗಿ ರೈತರಿಗೆ ನೆರವಾಗುತ್ತಿದೆ. ನವೆಂಬರ್‌ನಲ್ಲಿ ಮಹಾಮಂಡಳದ ಅಮೃತ ಮಹೋತ್ಸವ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು. ನಿರ್ದೇಶಕರಾದ ಜೆ.ಆರ್.ಷಣ್ಮುಖಪ್ಪ, ಶಿವಕುಮಾರ ಗೌಡ, ಜಯವಂತರಾವ ಪತಂಗೆ,
ತಿಮ್ಮಣ್ಣ ಮೆಳ್ಳಿ, ವ್ಯವಸ್ಥಾಪಕ ನಿರ್ದೇಶಕ ಆರ್. ಶಿವಪ್ರಕಾಶ್, ಪ್ರಧಾನ ವ್ಯವಸ್ಥಾಪಕ ಎಚ್.ಆರ್ .ನಾಗೇಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.