ಸುತ್ತುಪುದೆಲ್‌ ಪ್ರದೇಶಕ್ಕೆ ನಾಲ್ಕು ತಿಂಗಳಿನಿಂದ ನೀರೇ ಇಲ್ಲ !


Team Udayavani, Mar 10, 2018, 10:06 AM IST

10-March-1.jpg

ಬಜಪೆ : ಇಲ್ಲಿನ ಗ್ರಾಮ ಪಂಚಾಯತ್‌ನ ಒಂದನೇ ವಾರ್ಡ್‌ನ ಸ್ವಾಮಿಲ ಪದವು ಸುತ್ತುಪುದೆಲ್‌ ಪ್ರದೇಶದಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ.

ಜನವರಿಯಲ್ಲೇ ನೀರಿನ ಅಭಾವ ಕಂಡುಬಂದಿದ್ದು, ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕುಸಿದಿದೆ. ಕೆಲವು ಮನೆಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್‌ ಮೂಲಕ ನೀರು ತರಿಸಲಾಗುತ್ತಿದೆ. ಕೊಳವೆ ಬಾವಿಯ ನೀರು ಆಳಕ್ಕೆ ಹೋಗಿದೆ. ಮರವೂರು ವೆಂಟೆಡ್‌ ಡ್ಯಾಂ ನೀರು ಕೂಡ ಸಮರ್ಪಕವಾಗಿ ಬರುವುದಿಲ್ಲ ಎಂಬುವುದು ಈ ಪ್ರದೇಶದವರ ಅಳಲು.

ಒಂದನೇ ವಾರ್ಡ್‌ನಲ್ಲಿ ಭಟ್ರಕೆರೆ, ಸುತ್ತುಪುದೆಲ್‌, ಸ್ವಾಮಿಲ ಪದವು, ಕೊರಕಂಬ್ಳ, ರಾಜ ಪಲ್ಕೆ, ಕೋಟಿ ಪಲ್ಕೆ, ಅಡ್ಕಬಾರೆ ಪ್ರದೇಶಗಳಿವೆ. ಇಲ್ಲಿರುವುದು ಆರು ಕೊಳವೆ ಬಾವಿಗಳು. ಇದಕ್ಕೆ ಸದಸ್ಯರು ತ್ರಿಶೂಲ್‌ ಶೆಟ್ಟಿ, ನಿರಲ್‌ ಫೆರ್ನಾಂಡಿಸ್‌, ಯಶೋದಾ, ಸುಧಾಕರ ಕಾಮತ್‌, ರಾಘವ ಜಿ., ಸುಮಾ ಶೆಟ್ಟಿ. ಒಟ್ಟು ಇಲ್ಲಿರುವುದು 731 ಕಟ್ಟಡ, 694 ಮನೆಗಳು, 37 ಅಂಗಡಿಗಳು, 378 ನೀರು ಸಂಪರ್ಕವಿರುವ ಮನೆಗಳು. ಅದರಲ್ಲಿ 8ಮೀಟರ್‌ ಅಳವಡಿಕೆಯಾಗದ ಮನೆಗಳಿವೆ.

ಸುತ್ತುಪುದೆಲ್‌, ಕೊರಕಂಬ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು 50 ಸಾವಿರ ಲೀಟರ್‌ ಸಾಮರ್ಥ್ಯದ ಒಟ್ಟು 3 ಒವರ್‌ ಹೆಡ್‌ ಟ್ಯಾಂಕ್‌ಗಳಿವೆ. ಅಡ್ಕಬಾರೆ ಹಾಗೂ ಸ್ವಾಮಿಲ ಪದವಿನಲ್ಲಿ ಕೈ ಪಂಪಿನ ಕೊಳವೆ ಬಾವಿ ಇದ್ದರೂ ಉಪಯೋಗಕ್ಕಿಲ್ಲದಂತಾಗಿದೆ.

ಹಲವೆಡೆ ಪೈಪ್‌ ಅಳವಡಿಕೆ
ಕೋರಕಂಬ್ಳದಲ್ಲಿ 1ಲಕ್ಷ ರೂ.ಜಿ.ಪಂ. ಅನುದಾನದಲ್ಲಿ ಕುಡಿಯುವ ನೀರಿಗಾಗಿ ಪೈಪು ಅಳವಡಿಕೆ, 14ನೇ ಹಣಕಾಸು ಯೋಜನೆಯಡಿ 50 ಸಾವಿರ ರೂ. ಅನುದಾನದಲ್ಲಿ ಪೈಪು, ಜಿ.ಪಂ. ಅನುದಾನದಲ್ಲಿ 1ಲಕ್ಷ ರೂ.ವೆಚ್ಚದಲ್ಲಿ ಸುತ್ತು ಪುದೆಲ್‌ ಪ್ರದೇಶದಲ್ಲಿ ಪೈಪುಗಳನ್ನು ಅಳವಡಿಸಲಾಗಿದೆ. ಪೈಪುಗಳ ರಿಪೇರಿ ಕಾರ್ಯಕ್ಕೆ ಸುಮಾರು 15 ಸಾವಿರ ರೂ. ವೆಚ್ಚ ತಗುಲಿದೆ.

ಪೈಪು ಲೈನ್‌ಗಳು ಇರುವ ಪ್ರದೇಶ
ಭಟ್ರಕೆರೆಯಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಜಿಎಸ್‌ಬಿ ಹಾಲ್‌ ತನಕ, ಶನೀಶ್ವರ ದೇವಸ್ಥಾನದಿಂದ ರಾಜ ಪಲ್ಕೆ ರಸ್ತೆಯ ಬದಿಯಲ್ಲಿ, ಸ್ವಾಮಿಲ ಪದವಿನ ಒಳಗೆ ಎಲ್ಲ ರಸ್ತೆಯ ಬದಿಯಲ್ಲಿ, ಕೋರಕಂಬ್ಳ ರಸ್ತೆಬದಿ, ಅಡ್ಕಬಾರೆ ರಸ್ತೆ ಬದಿ, ಕೋಡಿ ಪಲ್ಕೆ ರಸ್ತೆ ಬದಿ, ಅಡ್ಕಬಾರೆಯಿಂದ ಚರ್ಚ್‌ ನ ತನಕ ಪೈಪುಗಳಿವೆ ನೀರಿನ ಪೈಪ್‌ ಗಳಿವೆ.

4 ತಿಂಗಳಿನಿಂದ ನೀರಿಲ್ಲ 
ಸುತ್ತು ಪುದೆಲ್‌ ಎಂಬಲ್ಲಿ 50 ಮನೆಗಳಿಗೆ ನೀರಿನ ಸಮಸ್ಯೆ ಇದೆ. ಈ ಹಿಂದೆ ಕೊಳವೆಬಾವಿಯಿಂದ ನೇರ ನೀರು ಸರಬರಾಜು ಆಗುತ್ತಿತ್ತು. ಈಗ ಟ್ಯಾಂಕ್‌ ಮೂಲಕ ಪೂರೈಸಲಾಗುತ್ತಿದೆ. ಅದರೂ ನೀರು ಸಮರ್ಪಕವಾಗಿ ಬರುತ್ತಿಲ್ಲ. ನೀರು ಬಾರದೇ 4 ತಿಂಗಳಾಯಿತು. ಕೊಳವೆ ಬಾವಿಯ ನೀರಿನ ಮಟ್ಟ ತಳಕ್ಕೆ ಹೋಗಿದೆ. ಈ ಬಗ್ಗೆ ಕೇಳಿದರೆ ನೀರಿನ ರಭಸ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
 -ಗಿಲ್ಪರ್ಟ್‌ ಡಿ’ಸೋಜಾ

ಕೊಳವೆ ಬಾವಿಯಲ್ಲಿ ನೀರು ಕಡಿಮೆ
ಈ ಭಾಗಕ್ಕೆ ಜನವರಿಯಿಂದಲೇ ನೀರಿಲ್ಲ. ಟ್ಯಾಂಕರ್‌ ಮೂಲಕ ವಾರಕ್ಕೊಮ್ಮೆ ನೀರು ತರಲಾಗುತ್ತದೆ. 3 ಸಾವಿರ ಲೀಟರ್‌ ನೀರಿಗೆ 350 ರೂ.. ಇಲ್ಲಿನ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ನೀರಿನ ಟ್ಯಾಂಕ್‌ ಎತ್ತರವಾಗಿ ಇರಬೇಕಿತ್ತು. ಕೊಳವೆ ಬಾವಿ ಇದ್ದವರು, ಬಾವಿ ಇದ್ದವರೂ ಪಂಚಾಯತ್‌ ನೀರನ್ನೇ ಉಪಯೋಗಿಸುತ್ತಿದ್ದಾರೆ. ಕೆಲವರು ತೆಂಗಿನ ಮರಕ್ಕೆ ನೀರು ಬಿಡುತ್ತಿದ್ದಾರೆ. ಇದರಿಂದ ನಮಗೆ ನೀರು ಇಲ್ಲವಾಗಿದೆ. ಇಲ್ಲಿ ಕುಡಿಯುವ ನೀರಿಗಾಗಿ ಸಮಿತಿ ರಚಿಸಿದ್ದು, ಅವರೇ ಸರಬರಾಜು ನೋಡಿಕೊಳ್ಳುತ್ತಾರೆ.
– ಸ್ಟೀವನ್‌, ಸುತ್ತುಪುದೆಲ್‌ ನಿವಾಸಿ

ಓವರ್‌ಹೆಡ್‌ ಟ್ಯಾಂಕ್‌ ಅಗತ್ಯ
ಸ್ವಾಮಿಲ ಪದವು, ಸುತ್ತುಪುದೆಲ್‌,ಭಟ್ರಕರೆಯವರಿಗೆ ನೀರಿನ ಸಮಸ್ಯೆ ಇದೆ. ಕಳೆದ ಬಾರಿ ಪೈಪುಗಳನ್ನು ಇಂಟರ್‌ ಲಿಂಕ್‌ಮಾಡುವ ಮೂಲಕ ಎರಡು ದಿನಕ್ಕೊಮ್ಮೆ ನೀರು ನೀಡಲಾಗಿತ್ತು. ಹಳೆಯ ಒಂದು ಟ್ಯಾಂಕ್‌ ಕೆಡವಲಾಗಿದೆ. ಅದಕ್ಕೆ ಪರ್ಯಾಯವಾಗಿ ಓವರ್‌ ಹೆಡ್‌ ಟ್ಯಾಂಕ್‌ ಬೇಕು. ಈ ಬಗ್ಗೆ ಜಿಲ್ಲಾ ಪಂಚಾಯತ್‌ ಹಾಗೂ ಎಂಆರ್‌ಪಿಎಲ್‌ ಸಂಸ್ಥೆಗೆ ಮನವಿ ಮಾಡಲಾಗಿದೆ. ಮರವೂರು ವೆಂಟೆಡ್‌ ಡ್ಯಾಂನಿಂದ ನೀರು ಸಮರ್ಪಕವಾಗಿ ಬರುತ್ತಿಲ್ಲ.
– ಸುಧಾಕರ್‌ಕಾಮತ್‌ 
ಗ್ರಾ.ಪಂ. ಸದಸ್ಯ

ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.