ಜಿಮ್ನಾಸ್ಟಿಕ್ಸ್‌ನಲ್ಲಿ ಅರುಣೋದಯ
Team Udayavani, Mar 10, 2018, 11:05 AM IST
ಅದು 2016 ಅಗಸ್ಟ್ 10. ಬ್ರೆಜಿಲ್‌ನ ರಿಯೋ ಡಿ ಜುನೈರೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳಾ ಜಿಮ್ನಾಸ್ಟಿಕ್ಸ್ ವಿಭಾಗದ ಅಂತಿಮ ಘಟ್ಟದ ಪ್ರದರ್ಶನ ನಡೆಯುತ್ತಿತ್ತು. ಇಡೀ ವಿಶ್ವವೇ ಅತ್ತ ನೋಡುತ್ತಿತ್ತು. ಅದಕ್ಕೆ ಕಾರಣ, ಅಲ್ಲಿ ವಿಶ್ವದ ವಿವಿಧ ದೇಶಗಳ 8 ಮಂದಿ ಘಟಾನುಘಟಿ ಸ್ಪರ್ಧಿಗಳು ಇದ್ದರು. ಎಲ್ಲರೂ ನಿಬ್ಬೆರಗಾಗುವಂಥ ಪ್ರದರ್ಶನ ನೀಡಿದರು. ಅಂತಿಮವಾಗಿ ಫಲಿತಾಂಶ ಹೊರ ಬಿತ್ತು. ಮೊದಲ ಮೂರು ಸ್ಥಾನಗಳು ನಿರೀಕ್ಷೆಯಂತೆ ಬಲಿಷ್ಠ ಸ್ಪರ್ಧಿಗಳ ಪಾಲಾಗಿದ್ದವು. ಅಲ್ಲಿ ಕಾಣಿಸಿಕೊಂಡ ಹೊಸ ಹೆಸರೊಂದು ಎಲ್ಲಾ ಕ್ರೀಡಾಪ್ರೇಮಿಗಳ ಮನಸ್ಸನ್ನು ತಾಕಿತು. ಆ ಹೆಸರೆ ದೀಪಾ ಕರ್ಮಾಕರ್. ಭಾರತದ ದೀಪಾ ಆವತ್ತು, 4ನೇ ಸ್ಥಾನ ಪಡೆದು, ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾದರು. ಆದರೆ, ಭಾರತೀಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಈಗ ಇವರ ವಿಷಯ ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ದೀಪಾ ಕರ್ಮಾಕರ್ ದಾರಿಯಲ್ಲಿ ಭಾರತಕ್ಕೆ ಮತ್ತೂಂದು “ದೀಪ’ ಸಿಕ್ಕಂತಾಗಿದೆ. ಅವರೇ ಹೈದರಾಬಾದ್‌ನ ಅರುಣಾ ಬುದ್ಧ ರೆಡ್ಡಿ. ಇತ್ತೀಚಿಗೆ ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ನಡೆದ ವಿಶ್ವ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಭಾರತದ ಮತ್ತೂಂದು “ದೀಪ’ವಾಗಿ ಬೆಳಗುವ ಹಾದಿಗೆ ಮುನ್ನುಡಿ ಬರೆದಿದ್ದಾರೆ.
ಭಾರತದ ಮೊದಲ ಜಿಮ್ನಾಸ್ಟಿಯನ್
ಜಿಮ್ನಾಸ್ಟಿಕ್ಸ್ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದ ಅರುಣಾ ಸ್ಪರ್ಧಿಸಿದ್ದು ಅತ್ಯಂತ ಕಠಿಣ ವಿಭಾಗದ ವಾಲ್ಟ್ನಲ್ಲಿ. ಇದರಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಆಕೆಗೆ ದೊರೆತದ್ದು ಕಂಚಿನ ಪದಕ. ಆ ಮೂಲಕ ಈ ಸ್ಪರ್ಧೆಯಲ್ಲಿ ಪದಕ ಗೆದ್ದು ಸಾಧನೆ ಮಾಡಿದ ಮೊದಲ ಭಾರತೀಯ ಜಿಮ್ನಾಸ್ಟಿಯನ್ ಎಂಬ ದಾಖಲೆ ಮಾಡಿದರು. ಇದಕ್ಕೂ ಮುನ್ನ ಭಾರತದ ಯಾವ ಜಿಮ್ನಾಸ್ಟಿಯನ್ ಸ್ಪರ್ಧಿಯೂ ವಿಶ್ವಕಪ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿಲ್ಲ.
ಕರಾಟೆ ಬಿಟ್ಟು, ಜಿಮ್ನಾಸ್ಟಿಕ್‌ಗೆ ಬಂದ್ರು
ಚಿಕ್ಕ ವಯಸ್ಸಿನಲ್ಲೇ ಕ್ರೀಡೆ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಅರುಣಾ ಕರಾಟೆ ಅಭ್ಯಾಸ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ ಕರಾಟೆಗೆ ಗುಡ್ ಬೈ ಹೇಳಿ ಅರುಣಾ ಜಿಮ್ನಾಸ್ಟಿಕ್ಸ್ ಕಡೆ ವಾಲಿದರು. ಅಲ್ಲಿಂದ ಜಿಮ್ನಾಸ್ಟಿಕ್ ಅಭ್ಯಾಸ ಶುರು ವಾಯಿತು. ಹಲವು ಏಳು ಬೀಳುಗಳ ನಡುವೆ ಹೈದರಾಬಾದಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದ ಜಿಮ್ನಾಸ್ಟಿಕ್ ತರಬೇತಿಗೆ ಸೇರ್ಪಡೆಗೊಂಡರು. ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ಕನಸು ಹೊತ್ತರು.
ಅದಕ್ಕೆ ತಂದೆ-ತಾಯಿ ಸೇರಿದಂತೆ ಕುಟುಂಬದ ಎಲ್ಲರ ಸಹಕಾರ ಸಿಕ್ಕಿತು.
ಮೊದಲು ಸ್ವರ್ಣಲತಾ ಹಾಗೂ ರವೀಂದ್ರ ಎಂಬುವರ ಮಾರ್ಗದರ್ಶನಲ್ಲಿ ತರಬೇತಿ ಪಡೆದರು. ಈಗ ಗಿರಿರಾಜ್, ಬ್ರಿಜ್ ಕಿಶೋರ್ ಅವರಿಂದ ಕೋಚಿಂಗ್ ಪಡೆಯುತ್ತಿದ್ದಾರೆ.
ದೇವಲಾಪುರ ಮಹದೇವಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.