ಏಪ್ರಿಲ್‌ನಿಂದ ಇ-ವೇ ಬಿಲ್ ಜಾರಿ: ಜಿಎಸ್‌ಟಿ ಸಭೆ ನಿರ್ಧಾರ
Team Udayavani, Mar 11, 2018, 6:20 AM IST
ಹೊಸದಿಲ್ಲಿ: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಸಾಗಣೆ ಮಾಡಲು ಇಲೆಕ್ಟ್ರಾನಿಕ್ ಬಿಲ್ ನೀಡುವ ವ್ಯವಸ್ಥೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ಶನಿವಾರ ಹೊಸದಿಲ್ಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆ ನಿರ್ಧರಿಸಿದೆ. ಆದರೆ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯ ಬಗ್ಗೆ ರಾಜ್ಯಗಳಲ್ಲಿ ಸಹಮತ ವ್ಯಕ್ತವಾಗದ್ದರಿಂದ, ಈ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.
ಏಪ್ರಿಲ್ 1 ರಿಂದ ಇ-ವೇ ಬಿಲ್ ಆರಂಭಿಸಿದರೂ, ಇದು ರಾಜ್ಯದೊಳಗೆ ಸರಕು ಸಾಗಣೆಗೆ ಮಾತ್ರ ಇರಲಿದೆ. ಏಪ್ರಿಲ್ 15ರಿಂದ ಹಂತ ಹಂತವಾಗಿ ರಾಜ್ಯದಿಂದ ರಾಜ್ಯಕ್ಕೆ ಸಾಗಿಸಲು ಇ-ವೇ ಬಿಲ್ ವ್ಯವಸ್ಥೆ ಜಾರಿಗೆ ಬರಲಿದೆ. ಇದಕ್ಕಾಗಿ ರಾಜ್ಯ ಗಳನ್ನು 4 ವಿಭಾಗಗಳನ್ನಾಗಿ ಮಾಡಲಾಗಿದೆ. ಈ ಬಿಲ್‌ಗಳನ್ನು ಜಿಎಸ್‌ಟಿ ಇನ್‌ಸ್ಪೆಕ್ಟರ್ ಕೇಳಿದಾಗ ತೋರಿಸಬೇಕಿರುತ್ತದೆ.
ತೆರಿಗೆ ತಪ್ಪಿಸಿಕೊಳ್ಳುವವರ ಮೇಲೆ ನಿಗಾ ಇಡಲು ಇದು ಪ್ರಮುಖವಾಗಿದೆ. ಸದ್ಯ ನಗದು ಆಧಾರದಲ್ಲಿ ನಡೆಯುವ ವಹಿವಾಟುಗಳನ್ನು ಇದು ಕಡಿಮೆ ಮಾಡಲಿದೆ. ಅಲ್ಲದೆ ಅಕ್ಟೋಬರ್‌ನಿಂದ ಇ ವ್ಯಾಲೆಟ್ ಜಾರಿಗೆ ತರಲಾಗುತ್ತಿದ್ದು, ಇದರ ವ್ಯಾಲೆಟ್‌ನಲ್ಲೇ ರಿಫಂಡ್ ನೀಡಲಾಗುತ್ತದೆ. ಅಲ್ಲಿಯ ವರೆಗೆ ವ್ಯಾಪಾರಿಗಳು ಪ್ರಸ್ತುತ ವಿಧಾನದಲ್ಲೇ ರಿಟರ್ನ್ಸ್ ಫೈಲ್ ಮಾಡಬಹುದು. 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ಎಲ್ಲ ಸಾಮಗ್ರಿಗಳಿಗೆ ಇ-ವೇ ಬಿಲ್ ಅಗತ್ಯವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
MUST WATCH
ಹೊಸ ಸೇರ್ಪಡೆ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Virtual ; ಟರ್ಕಿಯಯಲ್ಲಿ ವರ, ಹಿಮಾಚಲದಲ್ಲಿ ವಧು : ಆನ್ ಲೈನ್ ನಲ್ಲೇ ನಿಖ್ಹಾ!
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.