10 ಸಾವಿರ ವರ್ಷದ ಗಡಿಯಾರ!
Team Udayavani, Mar 11, 2018, 6:05 AM IST
ಟೆಕ್ಸಾಸ್: ಈ ಗಡಿಯಾರದ ಮುಳ್ಳುಗಳು, ಸೆಕೆಂಡ್, ನಿಮಿಷ ಅಥವಾ ಗಂಟೆಗೊಮ್ಮೆ ತಿರುಗುವುದಿಲ್ಲ. ಬದಲಿಗೆ ವರ್ಷಕ್ಕೆ, ನೂರು ವರ್ಷಕ್ಕೆ ಹಾಗೂ ಒಂದು ಸಾವಿರ ವರ್ಷಕ್ಕೊಮ್ಮೆ ತಿರುಗುತ್ತವೆ. ಇದರ ಆಯುಷ್ಯವೇ 10 ಸಾವಿರ ವರ್ಷ!
ಇದು ಯಾವುದೋ ಸಿನಿಮಾದಲ್ಲಿರುವ ಕಲ್ಪನೆಯ ಗಡಿಯಾರವಲ್ಲ. ಬದಲಿಗೆ ವೆಸ್ಟ್ ಟೆಕ್ಸಾಸ್‌ನಲ್ಲಿ ಪರ್ವತದಲ್ಲಿ ನಿರ್ಮಿಸ ಲಾಗುತ್ತಿರುವ ಬೃಹತ್ ಗಡಿಯಾರ. ಹಲವು ದಶಕಗಳಿಂದಲೂ ನಡೆಯುತ್ತಿದ್ದ ಇದರ ಬಗೆಗಿನ ಸಂಶೋಧನೆ ಇದೀಗ ಅಮೇಜಾನ್ ಸಂಸ್ಥೆಯ ಮಾಲೀಕ ಜೆಫ್ ಬೆಜೋಸ್ ನೆರವಿನಿಂದ ಕಾರ್ಯರೂಪಕ್ಕೆ ಬರುತ್ತಿದೆ. ಈ ಗಡಿಯಾರದ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ.
ಭೂಮಿಯ ಉಷ್ಣ ವೇ ಶಕ್ತಿ!: 500 ಅಡಿ ಎತ್ತರವಿರುವ ಈ ಗಡಿಯಾರಕ್ಕೆ ಭೂಮಿಯ ಉಷ್ಣ ಶಕ್ತಿಯೇ ಇಂಧನ. ಇದರ ಬಹುತೇಕ ಭಾಗವನ್ನು ಅತ್ಯಂತ ಉನ್ನತ ಗುಣಮಟ್ಟದ ಸ್ಟೀಲ್‌ನಿಂದ ನಿರ್ಮಿಸಲಾಗಿದೆ. ಚಲಿಸುವ ಭಾಗಗಳು ಬೇಗನೆ ಸವೆಯುವುದರಿಂದ ಕಲ್ಲು ಮತ್ತು ಸೆರಾಮಿಕ್ ನಿಂದ ನಿರ್ಮಿಸಲಾಗುತ್ತಿದೆ. ಸೆರಾಮಿಕ್‌ಗೆ ಯಾವುದೇ ಲ್ಯೂಬ್ರಿಕೇಶನ್ ಅಗತ್ಯವಿರುವುದಿಲ್ಲ. ಅಲ್ಲದೆ ನಿಧಾನವಾಗಿ ತಿರುಗುವುದಕ್ಕೆ ಇವು ಸೂಕ್ತವಾಗಿವೆ.
ದಶಕಗಳ ಹಿಂದಿನ ಯೋಜನೆ: 1989ರಲ್ಲಿ ಡ್ಯಾನಿ ಹಿಲ್ಸ್ ಈ ರೀತಿಯ ಗಡಿಯಾರ ನಿರ್ಮಿಸುವ ಯೋಜನೆ ರೂಪಿಸಿದ್ದರು. ಅಂದಿನಿಂದಲೂ ಈ ಬಗ್ಗೆ ಅವರು ಸಂಶೋಧನೆ ನಡೆಸುತ್ತಿದ್ದಾರೆ. ಈಗ ಜೆಫ್ ಇದನ್ನು ಸಾಧ್ಯವಾಗಿಸಲು ಹೊರಟಿದ್ದಾರೆ. ಈ ಬಗ್ಗೆ ವೀಡಿಯೋವೊಂದನ್ನು ಜೆಫ್ ಬಿಡುಗಡೆ ಮಾಡಿದ್ದಾರೆ. ಆದರೆ ಇದರ ನಿರ್ಮಾಣ ಕಾರ್ಯ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದು ತಿಳಿದುಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.