ವಾಹನ ವಿಮೆ ವಾರ್ಷಿಕ ಪ್ರೀಮಿಯಂ ಕಡಿತ?
Team Udayavani, Mar 11, 2018, 6:50 AM IST
ಸದ್ಯದಲ್ಲೇ, ಖಾಸಗಿ ವಾಹನ ಮಾಲೀಕರಿಗೆ ಸಿಹಿ ಸುದ್ದಿ ಕಾದಿದೆ. ಭಾರತೀಯ ವಿಮೆ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಥರ್ಡ್ ಪಾರ್ಟಿ ಇನ್ಶೂರೆನ್ಸ್ (ಟಿಪಿ) ಪ್ರೀಮಿಯಂ ಮೊತ್ತವನ್ನು 2018-19ನೇ ವರ್ಷದಿಂದ ಕೊಂಚ ಇಳಿಸಲು ನಿರ್ಧರಿಸಿದ್ದು, ಈ ಕುರಿತ ಪ್ರಸ್ತಾವನೆ ಸಿದ್ಧಪಡಿಸಿದೆ. ಇದಕ್ಕೆ ಸರಕಾರದ ಸಮ್ಮತಿ ಸಿಕ್ಕರೆ, ದುಬಾರಿ ವಾರ್ಷಿಕ ಪ್ರೀಮಿಯಂ ಕಟ್ಟುತ್ತಿದ್ದವರು ಕೊಂಚ ನಿರಾಳವಾಗಲಿದ್ದಾರೆ.
1,850 ರೂ. – ಸಾವಿರ ಸಿಸಿ ಎಂಜಿನ್ನ ಕಾರುಗಳ ವಿಮೆ ಪ್ರೀಮಿಯಂನ ಸಂಭಾವ್ಯ ಮೊತ್ತ
427 ರೂ. – ಎಪ್ಪತ್ತೈದು ಸಿಸಿ ಎಂಜಿನ್ನ ಬೈಕುಗಳ ವಾರ್ಷಿಕ ವಿಮಾ ಪ್ರೀಮಿ ಯಂನ ಸಂಭಾವ್ಯ ಮೊತ್ತ
ಶೇ.50 – ಮಾನ್ಯತೆ ಪಡೆದ ವಿಂಟೇಜ್ ಕಾರುಗಳ ಪ್ರೀಮಿ ಯಂ ಮೇಲೆ ನೀಡಲಾಗುವ ರಿಯಾಯಿತಿ
ಎಷ್ಟು ಇಳಿಕೆ?
1000 ಸಿಸಿ ಇಂಜಿನ್ಗಳಿಗಿಂತ ಕಡಿಮೆ ಇರುವ ಕಾರುಗಳ ಪ್ರೀಮಿಯಂ 2,055ರೂ.ಗಳಿಂದ 1,850 ರೂ.ಗಳಿಗೆ ಹಾಗೂ 75 ಸಿಸಿ ಇಂಜಿನ್ ಬೈಕುಗಳ ಪ್ರೀಮಿಯಂ ಈಗಿರುವ 569 ರೂ.ಗಳಿಂದ 427 ರೂ.ಗಳಿಗೆ ಇಳಿಸಲು ಪ್ರಸ್ತಾಪಿಸಲಾಗಿದೆ. ವಿಂಟೇಜ್ ಆ್ಯಂಡ್ ಕ್ಲಾಸಿಕ್ ಕಾರ್ ಕ್ಲಬ್ ಮಾನ್ಯತೆ ಪಡೆದ ಹಳೆಯ ಮಾಡೆಲ್ ಕಾರುಗಳ ಪ್ರೀಮಿಯಂಗೆ ಶೇ.50 ವಿನಾಯ್ತಿ ಸಿಗಲಿದೆ.
ಯಾರಿಗಿಲ್ಲ ವಿನಾಯ್ತಿ?
1000 ಸಿಸಿ ಸಾಮರ್ಥ್ಯಕ್ಕೂ ಮಿಗಿಲಾದ ಇಂಜಿನ್ ಹೊಂದಿರುವ ಕಾರುಗಳು ಹಾಗೂ 75 ಸಿ.ಸಿ.ಗೂ ಅಧಿಕ ಸಾಮರ್ಥ್ಯದ ಎಂಜಿನ್ನ ಬೈಕುಗಳ ಪ್ರೀಮಿಯಂನಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಈ ಕಾರು ಹಾಗೂ ಬೈಕುಗಳ ಮಾಲೀಕರು, ಈಗ ಚಾಲ್ತಿಯಲ್ಲಿರುವ ದರದಲ್ಲೇ ಪ್ರೀಮಿಯಂ ಕಟ್ಟಬೇಕಿದೆ. ಜತೆಗೆ, 12,000 ಕೆಜಿ ಭಾರ ಹೊರುವ ಸಾಮರ್ಥ್ಯ ಮೀರಿದ ಸಾರ್ವಜನಿಕ ಸಾರಿಗೆ ವಾಹನಗಳ (ತ್ರಿ ಚಕ್ರ ವಾಹನ ಹೊರತುಪಡಿಸಿ) ಪ್ರೀಮಿಯಂ ಅನ್ನೂ ಅವುಗಳ ಸಾಗಣೆ ಸಾಮರ್ಥ್ಯಕ್ಕ ನುಗುಣವಾಗಿ ಹೆಚ್ಚಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.