ಚಿನ್ನ ಗೆದ್ದ ಕಾಡಿನ ಹುಡುಗ
Team Udayavani, Mar 11, 2018, 8:15 AM IST
ಜೆಮ್ಸ್ಡ್‌ಪುರ: ದ್ರೋಣಾಚಾರ್ಯರ ಶಿಷ್ಯನಾಗುವ ಅವಕಾಶ ಏಕಲವ್ಯನಿಗೆ ಸಿಗದಿದ್ದರೂ ಅವರ ಪ್ರತಿಮೆಯನ್ನಿಟ್ಟುಕೊಂಡೇ ಕಾಡಿನಲ್ಲಿ ಬಿಲ್ಗಾರಿಕೆ ಅಭ್ಯಾಸ ನಡೆಸಿ ವಿಶ್ವ ಗೆದ್ದ ಮಹಾಭಾರತದ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಹೆಚ್ಚು ಕಡಿಮೆ ಇದಕ್ಕೆ ಹೋಲುವಂತಹ ನೈಜ ಘಟನೆಯೊಂದರ ನಾಯಕ ಜಾರ್ಖಂಡ್‌ನ 17 ವರ್ಷದ ಹುಡುಗ ಗೋರಾ. ಏಕಲವ್ಯ ಮತ್ತು ಗೋರಾ ಇಬ್ಬರೂ ಕಾಡಿನಲ್ಲಿ ಅರಳಿದ ಪ್ರತಿಭೆಗಳು ಎನ್ನುವುದು ಇಲ್ಲಿನ ವಿಶೇಷ.
ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯಾಕಪ್ ಹಂತ 1 ಬಿಲ್ಗಾರಿಕೆ ಕೂಟದ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಗೋರಾ. ತನಗಷ್ಟೇ ಅಲ್ಲ ಇಡೀ ಬುಡಕಟ್ಟು ಜನರು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇವರೊಂದಿಗೆ ತಂಡದಲ್ಲಿ ಆಕಾಶ್, ಗೌರವ್ ಲಾಂಬೆ
ಕೂಡ ಇದ್ದರು. ಇವರನ್ನೊಳಗೊಂಡ ತಂಡ ಗುರುವಾರ ಮಂಗೋಲಿಯಾ ವಿರುದ್ಧ ಫೈನಲ್‌ನ ರಿಕರ್ವ್ ವಿಭಾಗದಲ್ಲಿ ಗೆಲುವು ಗಳಿಸಿ ಈ ಸಾಧನೆ ಮಾಡಿದೆ.
ಚಿನ್ನದ ಹುಡುಗ: ಜಾರ್ಖಂಡ್‌ನ ಕೃಷಿ ಕುಟುಂಬದಲ್ಲಿ ಹುಟ್ಟಿದ ಪ್ರತಿಭೆ ಗೋರಾ. ಕಾಡಿನಲ್ಲೇ ಬೆಳೆಯುವುದರ ಜೊತೆಗೆ ಬಿಲ್ಗಾರಿಕೆಯನ್ನು ಸಹಜವಾಗಿ ಕಲಿತರು (ಜಾರ್ಖಂಡ್‌ನಲ್ಲಿ ಬಿಲ್ಗಾರಿಕೆ ಅತ್ಯಂತ ಜನಪ್ರಿಯ ಕ್ರೀಡೆ). ಆಗ ಅವರಿಗೆ ಗುರುವಿನ
ಮಾರ್ಗದರ್ಶನವೇ ಇರಲಿಲ್ಲ. 2014ರಲ್ಲಿ ಇವರನ್ನು ಗುರುತಿಸಿದ ಗುರು ಶ್ರೀನಿವಾಸ ರಾವ್ ಎನ್ನುವ ಬಿಲ್ಗಾರಿಕೆ ಗುರು ಸೆರಾಯ್
ಕೆಲಾದ ದುಗ್ನಿ ಅಕಾಡೆಮಿಗೆ ಸೇರಿಸಿದರು. ಬರೀ 13ನೇ ವಯಸ್ಸಿನಲ್ಲೇ ರಾಷ್ಟ್ರೀಯ ಶಾಲಾ ಕೂಟದಲ್ಲಿ 3 ಚಿನ್ನ ಗೆದ್ದರು. ಅದೇ ವರ್ಷ
ಜಾರ್ಖಂಡ್ ರಾಜ್ಯ ಬಿಲ್ಗಾರಿಕೆ 10 ಪದಕ ಗೆದ್ದರು. ಗೋರಾ ಪ್ರತಿಭೆಯ ಪರಿಚಯ ಪಡೆದ ಜಾರ್ಖಂಡ್ ಸರ್ಕಾರ ವಿಶೇಷವಾದ ಬಿಲ್ಲು ಹಾಗೂ 2.70 ಲಕ್ಷ ರೂ. ನಗದು ನೀಡಿ ಗೌರವಿಸಿತು.
ಬಡತನದ ಕರಿನೆರಳು: ಗೋರಾ ಹಲವು ಕಿರಿಯರ ರಾಜ್ಯ ಮಟ್ಟದ ಕೂಟ, ರಾಷ್ಟ್ರೀಯ ಕಿರಿಯರ ಕೂಟಗಳಲ್ಲಿ ಭಾಗವ
ಹಿಸಿದ್ದಾರೆ. 100ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ. ಇಷ್ಟೆಲ್ಲ ಪ್ರತಿಭೆ ಇರುವ ಹುಡುಗ ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಕಳೆದ
ವರ್ಷವಷ್ಟೇ ತಾಯಿ ತೀರಿಕೊಂಡಿದ್ದಾರೆ. ತಂದೆಗೂ ಅನಾರೋಗ್ಯ. 2 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ನಾಲ್ವರು ಮಕ್ಕಳಲ್ಲಿ ಇವರೇ ಕಿರಿಯ. ಆದರೂ ಕುಟುಂಬ ಇವರ ಬಗ್ಗೆಯೇ ಬಹಳ ನಿರೀಕ್ಷೆಯಿಟ್ಟುಕೊಂಡಿದೆ. 2020ರ ಒಲಿಂಪಿಕ್ಸ್‌ನಲ್ಲಿ ಇವರು ದೇಶಕ್ಕೆ ಪದಕ ಗೆದ್ದು
ತರುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಬಡತನದಿಂದ ನರಳುತ್ತಿರುವ ಇವರ ಕುಟುಂಬಕ್ಕೆ ದುಬಾರಿ ವೆಚ್ಚದ ತರಬೇತಿ ನೀಡುವುದು ಕಷ್ಟವಾಗಿದೆ, ಸದ್ಯ ಇವರ ಸಾಧನೆಯಿಂದ ಸರ್ಕಾರ ಇವರ ನೆರವಿಗೆ ಬರಬೇಕಾಗಿರುವುದು ಅವಶ್ಯಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.