ರಾಮಮಂದಿರ ನಿರ್ಮಾಣ ಖಚಿತ
Team Udayavani, Mar 12, 2018, 10:10 AM IST
ನಾಗ್ಪುರ: ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವುದು ಸುಲಭದ ಮಾತಲ್ಲ. ಆದರೆ, ವಿವಾದಿತ ಸ್ಥಳದಲ್ಲಿ ರಾಮಮಂದಿರ ಹೊರತುಪಡಿಸಿ ಬೇರ್ಯಾವುದನ್ನೂ ನಿರ್ಮಿಸುವ ಪ್ರಶ್ನೆಯೇ ಇಲ್ಲ ಎಂದು ಆರೆಸ್ಸೆಸ್ ಸ್ಪಷ್ಟಪಡಿಸಿದೆ.
ನಾಗ್ಪುರದಲ್ಲಿ ನಡೆದ ಅಖೀಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನವಾದ ರವಿವಾರ ಮಾತನಾಡಿದ ಆರೆಸ್ಸೆಸ್ ಸರಕಾರ್ಯವಾಹ ಭಯ್ನಾಜಿ ಜೋಷಿ, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ನಿಶ್ಚಿತ. ಅದರ ಬಗ್ಗೆ ನಿರ್ಧಾರವನ್ನೂ ಕೈಗೊಂಡಾಗಿದೆ. ಸುಪ್ರೀಂಕೋರ್ಟ್‌ನಿಂದ ನಮ್ಮ ಪರ ವಾಗಿಯೇ ತೀರ್ಪು ಬರುವ ವಿಶ್ವಾಸವಿದೆ.
ತೀರ್ಪಿನ ಆಧಾರದಲ್ಲಿ ರಾಮ ಮಂದಿರವನ್ನು ನಿರ್ಮಿಸುತ್ತೇವೆ’ ಎಂದಿದ್ದಾರೆ. ಇದೇ ವೇಳೆ, ಸಂಧಾನ ಮಾತುಕತೆ ಕುರಿತು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ನಡೆಸುತ್ತಿರುವ ಯತ್ನದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಜೋಷಿ ಅವರು, “ಪರಸ್ಪರ ಒಪ್ಪಿಗೆಯಿಂದ ರಾಮಮಂದಿರ ನಿರ್ಮಿಸಬೇಕು ಎಂದು ನಾವು ಯಾವತ್ತೂ ಹೇಳಿಕೊಂಡೇ ಬಂದಿದ್ದೇವೆ. ಆದರೆ, ಈ ವಿಚಾರದಲ್ಲಿ
ಒಮ್ಮತ ಮೂಡುವುದು ಕಷ್ಟ ಎಂದು ಅನುಭವಕ್ಕೆ ಬಂದಿದೆ’ ಎಂದಿದ್ದಾರೆ.
ಕರ್ನಾಟಕದ ಇಬ್ಬರಿಗೆ ನಂ.3 ಸ್ಥಾನ
ಆರೆಸ್ಸೆಸ್‌ನ 3ನೇ ಸ್ಥಾನವಾದ ಸಹಸರಕಾರ್ಯ ವಾಹ ಹುದ್ದೆಗೆ ರವಿವಾರ ಬೆಂಗಳೂರಿನ ಮುಕುಂದ ಸಿ.ಆರ್. ಅವರನ್ನು ನೇಮಕ ಮಾಡಲಾಗಿದ್ದು, ಕರ್ನಾಟಕದ ಇಬ್ಬರಿಗೆ ಈ ಸ್ಥಾನ ದೊರೆತಂತಾಗಿದೆ. ಈಗಾಗಲೇ ದತ್ತಾತ್ರೇಯ ಹೊಸಬಾಳೆ ಅವರು ಸಹಸರ ಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ.ಮನಮೋಹನ್ ವೈದ್ಯ ಅವರನ್ನೂ ಸಹಸರ ಕಾರ್ಯವಾಹರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಒಟ್ಟು 6 ಮಂದಿ ಜಂಟಿ ಪ್ರಧಾನ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡಂತಾಗಿದೆ. ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯ ವಾಹರಾಗಿ ಡಾ. ಜಯಪ್ರಕಾಶ್, ಸಹಕಾರ್ಯ ವಾಹರಾಗಿ ಪಿ.ಎಸ್.ಪ್ರಕಾಶ್, ಪ್ರಚಾರಕರಾಗಿ ಗುರುಪ್ರಸಾದ್ ಆಯ್ಕೆಯಾಗಿದ್ದಾರೆ. ಕರ್ನಾಟಕ ಉತ್ತರ ಪ್ರಾಂತ್ಯಕ್ಕೆ ಪ್ರಚಾರಕರಾಗಿ ಸುಧಾಕರ್, ಸಹ ಪ್ರಚಾರಕರಾಗಿ ನರೇಂದ್ರ ನೇಮಕ ಗೊಂಡಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣಕ್ಕೆ ಕ್ಷೇತ್ರೀಯ ಸಹಕಾರ್ಯವಾಹರಾಗಿ ಎನ್.ತಿಪ್ಪೇಸ್ವಾಮಿ, ಕ್ಷೇತ್ರ ಸಹ ಪ್ರಚಾರಕರಾಗಿ ಸುಧೀರ್, ಕ್ಷೇತ್ರೀಯ ಬೌದ್ಧಿಕ್ ಪ್ರಮುಖ್ ಆಗಿ ಬಿ.ವಿ. ಶ್ರೀಧರಸ್ವಾಮಿ ನೇಮಕಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.