ಮೂರು ತಿಂಗಳುಗಳಲ್ಲಿ ಉರ್ವ ಮಾರ್ಕೆಟ್ ನಿರ್ಮಾಣ ಪೂರ್ಣ: ಶಾಸಕ ಲೋಬೋ
Team Udayavani, Mar 12, 2018, 10:11 AM IST
ಮಹಾನಗರ: ಈಗ ನಗರದಲ್ಲಿ ಮಾರ್ಕೆಟ್‌ಗಳ ಅಭಿವೃದ್ಧಿ ಕಾರ್ಯಗಳು ಬಹಳ ಮಹತ್ವವನ್ನು ಪಡೆದಿವೆ. ಈಗಾಗಲೇ ಬಿಜೈ ಮಾರ್ಕೆಟ್ ಹಾಗೂ ಜೆಪ್ಪು ಮಾರ್ಕೆಟ್ ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಯಾಗಿವೆ. ಅದೇ ರೀತಿ ನಿರ್ಮಾಣ ಹಂತದಲ್ಲಿರುವ ಉರ್ವ ಮಾರ್ಕೆಟ್ ಸಂಕೀರ್ಣದ ಕಾಮಗಾರಿಯನ್ನು ಶಾಸಕ ಜೆ.ಆರ್. ಲೋಬೋ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸುಮಾರು 12.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆಯ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. 9 ತಿಂಗಳ ಹಿಂದೆ ಶಿಲಾನ್ಯಾಸ ಕಾರ್ಯ ನಡೆದಿದ್ದು, ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದ್ದು, ಎಲ್ಲರಿಗೂ ಸಮಾಧಾನಕರವಾಗಿ ಕೆಲಸವನ್ನು ಪೂರ್ತಿಗೊಳಿಸಲಾಗುವುದು. ತರಕಾರಿ ಹಾಗೂ ಹಣ್ಣುಹಂಪಲುಗಳ ಕೌಂಟರ್‌ಗಳನ್ನು ಪ್ರತ್ಯೇಕವಾಗಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಮನವಿಗೆ ಪೂರಕ ಸ್ಪಂದನೆ
ಸುಮಾರು 60 ಮಂದಿ ಮೀನು ವ್ಯಾಪಾರಸ್ಥರು ಶಾಸಕರಲ್ಲಿ ಮನವಿಯನ್ನು ಅರ್ಪಿಸಿ ಎತ್ತರದಲ್ಲಿ ಮೀನು ಮಾರಾಟ ಮಾಡಲು ಕಷ್ಟವಾಗುತ್ತದೆ. ಅದರ ಬದಲಿಗೆ ನೆಲದಲ್ಲಿ ಮಾರುವ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಕೇಳಿಕೊಂಡರು. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಅವರ ಬೇಡಿಕೆಯನ್ನು ಪರಿಶೀಲಿಸಿ ನ್ಯಾಯ ಒದಗಿಸಿ ಕೊಡುವುದಾಗಿ ಹೇಳಿದರು.
ಕದ್ರಿ ಮಾರ್ಕೆಟ್ ಹಾಗೂ ಕಂಕನಾಡಿ ಮಾರ್ಕೆಟ್ ಕಾಮಗಾರಿ ವಿಷಯ ಸರಕಾರದ ಕ್ಯಾಬಿನೆಟ್‌ಗೆ ಹೋಗಿದೆ. ಸೆಂಟ್ರಲ್ ಮಾರ್ಕೆಟ್ ಅಭಿವೃದ್ಧಿ ಕಾಮಗಾರಿಯು ಸ್ಮಾರ್ಟ್ ಸಿಟಿ ಪ್ಯಾಕೇಜ್ ನಲ್ಲಿದೆ ಎಂದರು. ಈ ಸಂದರ್ಭ ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮನಪಾ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲ್ಯಾನ್, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧಿಧೀರ್, ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್, ದೀಪಕ್ ಶ್ರೀಯಾನ್, ಚೇತನ್ ಕುಮಾರ್ ಉರ್ವ, ಆಸಿಫ್, ಮುಡಾ ಆಯುಕ್ತ ಶ್ರೀಕಾಂತ್ ರಾವ್, ಪಾಲಿಕೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ರಂಗನಾಥ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.