ಮರೋಡಿ: ‘ಸೌಖ್ಯ’ ಆರೋಗ್ಯ-ಆಪ್ತ ಸಮಾಲೋಚನ ಕೇಂದ್ರ ಉದ್ಘಾಟನೆ
Team Udayavani, Mar 12, 2018, 11:56 AM IST
ವೇಣೂರು: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ದೇಶಕ್ಕೆ ಮಾದರಿ ಆಗಿದೆ. ಈ ಸಂಸ್ಥೆಯಿಂದ ಆರೋಗ್ಯ ಮತ್ತು ಆಪ್ತ ಸಮಾಲೋಚನ ಕೇಂದ್ರ ಸ್ಥಾಪನೆಯಾಗಿರುವುದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಹಾಗೂ ಮರೋಡಿ ಗ್ರಾ.ಪಂ. ಆಶ್ರಯದಲ್ಲಿ ಪೆರಾಡಿ ಭಂಡಸಾಲೆಯ ಶ್ರೀ ಶಾರದಾಂಬಾ ಭಜನ ಮಂದಿರದ ಸಭಾಂಗಣದಲ್ಲಿ ರವಿವಾರ ಆಳ್ವಾಸ್ ಆರೋಗ್ಯ ಮತ್ತು ಆಪ್ತ ಸಮಾಲೋಚನ ಕೇಂದ್ರ ‘ಸೌಖ್ಯ’ ಇದರ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀಕ್ಷೇತ್ರ ಧ.ಗ್ರಾ.ಯೋ. ಪೆರಾಡಿ ಹಾಗೂ ಶ್ರೀ ಶಾರದಾಂಬಾ ಭಜನ ಮಂಡಳಿ ಆಶ್ರಯದಲ್ಲಿ ಭಜನ ಮಂಗಲೋತ್ಸವ ಸಮಾರಂಭವು ಇದೇ ಸಂದರ್ಭ ಜರಗಿತು. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭವನ್ನು ಉದ್ಘಾಟಿಸಿ, ಜನಸೇವೆಗಾಗಿ ಇದೊಂದು ಪ್ರಾಯೋಗಿಕ ಪ್ರಯತ್ನ. ಇಂತಹ ಆರೋಗ್ಯ ಕೇಂದ್ರಗಳ ಸೇವೆಯ ಬಗ್ಗೆ ಜನತೆ ತಿಳಿಯಬೇಕು. ಆಗ ಆ ಕಾರ್ಯ ಯಶಸ್ವಿಯಾಗುತ್ತದೆ. ಸೌಖ್ಯ ಆಳ್ವಾಸ್‌ನ ಕೇಂದ್ರವಲ್ಲ, ಬದಲಾಗಿ ಅದು ಜನತೆಯ ಕೇಂದ್ರ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ| ಶ್ರೀನಿವಾಸ ಭಟ್ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ನಾರಾವಿ ಜಿಲ್ಲಾ ಪಂಚಾಯತ್ ಸದಸ್ಯ ಪಿ. ಧರಣೇಂದ್ರ ಕುಮಾರ್, ಶ್ರೀಕ್ಷೇತ್ರ ಧ.ಗ್ರಾ.ಯೋ.ಯ ಯೋಜನಾಧಿಕಾರಿ ಜಯಕರ ಶೆಟ್ಟಿ ಮಾತನಾಡಿದರು. ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ನಾರಾವಿ ತಾ.ಪಂ. ಸದಸ್ಯೆ ರೂಪಲತಾ, ಮರೋಡಿ ಗ್ರಾ.ಪಂ. ಅಧ್ಯಕ್ಷ
ಸದಾನಂದ ಶೆಟ್ಟಿ, ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಸದಾನಂದ ಪೂಜಾರಿ, ಸುಮಿತ್ರಾ, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಶ್ರೀ ಶಾರದಾಂಬಾ ಭಜನ ಮಂಡಳಿ ಅಧ್ಯಕ್ಷ ವಿಟ್ಠಲ ಶೆಟ್ಟಿ, ಸುರೇಶ್ ದೇವಾಡಿಗ, ಧ.ಗ್ರಾ.ಯೋ. ವಲಯ ಮೇಲ್ವಿಚಾರಕ ಗಿರೀಶ್ ಕುಮಾರ್ ಎಂ., ಸೇವಾಪ್ರತಿನಿಧಿ ಮಮತಾ, ಒಕ್ಕೂಟಗಳ ಅಧ್ಯಕ್ಷರಾದ ಬಾಬಣ್ಣ ಕುಲಾಲ್, ಸದಾಶಿವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್ ಪ್ರಸ್ತಾವಿಸಿದರು. ಕರುಣಾಕರ ಮರೋಡಿ ಸ್ವಾಗತಿಸಿದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಪವಿತ್ರಾ ಪ್ರಸಾದ್ ವಂದಿಸಿದರು. ವಿಶುಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ನುರಿತ ವೈದ್ಯರಿಂದ ಔಷಧೋಪಚಾರ
ಮರೋಡಿ ಗ್ರಾ.ಪಂ.ನ ಹಳೆ ಕಟ್ಟಡದಲ್ಲಿ ಆಳ್ವಾಸ್‌ನ ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಯೋಗ ವಿಜ್ಞಾನ ಕಾಲೇಜು ಆಸ್ಪತ್ರೆಯ ನುರಿತ ವೈದ್ಯರ ತಂಡವು ರವಿವಾರ ಹೊರತುಪಡಿಸಿ ಬೆಳಗ್ಗೆ 10ರಿಂದ ಅಪರಾಹ್ನ 2ರ ವರೆಗೆ ವೈದ್ಯಕೀಯ ತಪಾಸಣೆ ನಡೆಸಿ ಔಷಧೋಪಚಾರಗಳನ್ನು ನೀಡಲಿದೆ.
ಆಳ್ವರ ಸಾಧನೆ ಮೆಚ್ಚುವಂಥದ್ದು
ಡಾ| ಮೋಹನ ಆಳ್ವರು ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್, ಊಟ, ಶಿಕ್ಷಣ ನೀಡುತ್ತಿದ್ದಾರೆ. ಪ್ರಾಮಾಣಿಕ ಸೇವೆ ನೀಡುತ್ತಿರುವ ಆಳ್ವರ ಕಾರ್ಯಸಾಧನೆ ಮೆಚ್ಚುವಂಥದ್ದು.
– ಕೆ. ವಸಂತ ಬಂಗೇರ
ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.