ಧಾರ್ಮಿಕ ಬೇರು ಸಡಿಲಾದರೆ ಸಮಾನತೆಗೆ ಧಕ್ಕೆ
Team Udayavani, Mar 12, 2018, 12:23 PM IST
ಯಲಹಂಕ: ಧಾರ್ಮಿಕ ಬೇರುಗಳು ಸಡಿಲಾದರೆ ಸಮಾಜದ ಸಮಾನತೆಗೆ ಧಕ್ಕೆಯಾಗಲಿದೆ ಎಂದು 1008 ಸುಬುದೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು. ಯಲಹಂಕ ಉಪನಗರದ ಗುರುರಾಜ ಸೇವಾ ಸಮಿತಿ ನೂತನವಾಗಿ ನಿರ್ಮಿಸಿರುವ ಸುಜಿಯಿಂದ್ರ ಪ್ರವಚನ ಮಂದಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಿಂದೂ ಸನಾತನ ಧರ್ಮಕ್ಕೆ ಬಾಹ್ಯ ಮತ್ತು ಅಂತರಿಕ ಆತಂಕ ಎದುರಾಗಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರರೆ ಸಮಾಜದಲ್ಲಿನ ಸಮಬಾಳ್ವೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಒದಗಬಹುದು. ಈ ನಿಟ್ಟಿನಲ್ಲಿ ಧಾರ್ಮಿಕ ಮುಖಂಡರು, ಮಠಾಧಿಪತಿಗಳು ಜಾತಿ, ಮತ ಭಾಷೆಗಳ ಭೇದವಿಲ್ಲದೆ ಸನಾತನ ಧರ್ಮ ಉಳಿಸಲು ಹೋರಾಡುವ ಅಗತ್ಯವಿದೆ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುರುರಾಜ ಸೇವಾಸಮಿತಿ ಗೌರವಾಧ್ಯಕ್ಷ ಜಿ.ವಿ.ಪ್ರಭಾಕರ ರಾವ್, ಉಪಾಧ್ಯಕ್ಷ ಎಚ್.ಕೆ.ಗುರುರಾಜ ರಾವ್, ಕಾರ್ಯದರ್ಶಿ ಜಿ.ಸು.ಶ್ರೀನಾಥ್ ಮತ್ತು ಎಸ್.ಭೀಮಸೇನಾಚಾರ್, ಎನ್.ರವಿಕುಮಾರ್, ಶ್ರೀದೇವಿ ಗುರುರಾಜ್ ಭಾಗವಹಿಸಿದ್ದರು. ಇದೇ ವೇಳೆ ವಿದ್ವಾನ್ ಮೈಸೂರು ರಾಮಚಂದ್ರಾಚಾರ್ ಅವರಿಂದ ದಾಸವಾಣಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.