ಬದನೆಯಿಂದ ಬಂಗಾರ ಕಂಡ ನಾಗಣ್ಣ
Team Udayavani, Mar 12, 2018, 12:40 PM IST
ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಅಮ್ಮನಘಟ್ಟದ ತಿಪ್ಪೂರು ಗ್ರಾಮದಲ್ಲಿ ಪ್ರಗತಿ ರೈತ ನಾಗಣ್ಣರ ಕಡೆ ಎಲ್ಲರ ಕಣ್ಣು ನೆಟ್ಟಿದೆ. ಕಾರಣ ಬದನೆ. ಇವರು ಲಲಿತ ತಳಿ ಬದನೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.
ನಾಗಣ್ಣರಿಗೆ 1.20 ಗುಂಟೆ ಜಮೀನಿದ್ದು ಇದರಲ್ಲಿ ಅಡಿಕೆ, ತೆಂಗು, ಏಲಕ್ಕಿ, ಬಾಳೆ, ಕಾಳುಮೆಣಸು ಬೆಳೆಯಿಟ್ಟಿದ್ದಾರೆ. ಬದುಗಳಲ್ಲಿ ಸಪೋಟ, ಕಿತ್ತಲೆ, ಮೂಸಂಬಿ, ಸೀಬೆ ಇನ್ನೂ ಮುಂತಾದ ಹಣ್ಣುಗಳೂ ಉಂಟು. ತರಕಾರಿ ಬೆಳೆಗಳನ್ನು ಬೆಳೆಯಲು ಜಮೀನಿನ ಪಕ್ಕದವರಲ್ಲಿ 20 ಗುಂಟೆಯನ್ನು ಗುತ್ತಿಗೆಗೆ ಪಡೆದು ಅದರಲ್ಲಿ ಬದನೆ, ಹಸಿ ಮೆಣಸಿನಕಾಯಿ, ಚೆಂಡು ಹೂವುಗಳನ್ನು ಬೆಳೆದಿದ್ದಾರೆ.
ನಾಗಣ್ಣನವರು ಆರು ಜನರನ್ನು ಒಳಗೊಂಡ ವಾಲಿ¾ಕಿ ಐಡಿಎಫ್ ರೈತ ಕೃಷಿಕರ ಸಂಘ ರಚಿಸಿಕೊಂಡಿದ್ದಾರೆ. ಸಂಸ್ಥೆಯು ಪ್ರತಿ ಹದಿನೈದು ದಿನಗಳಿಗೊಮ್ಮೆ ನಡೆಸುವ ರೈತ ಕ್ಷೇತ್ರ ಪಾಠಶಾಲೆಯಲ್ಲಿ ಈ ಗುಂಪಿನ ಸದಸ್ಯರು ಭಾಗವಹಿಸಿ ಸುಸ್ಥಿರ ಕೃಷಿಯ ಬಗ್ಗೆ ಮಾಹಿತಿ ಪಡೆದು ಆದರಂತೆ ಕೃಷಿ ಮಾಡುತ್ತಾರೆ. ಸಾಲಿನಿಂದ ಸಾಲಿಗೆ 5 ಅಡಿ, ಗಿಡದಿಂದ ಗಿಡಕ್ಕೆ 4 ಅಡಿ ಅಂತರದಲ್ಲಿ ಬದನೆ ಸಸಿಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡುವಾಗ ಸಸಿಗಳಿಗೆ ಜೈವಿಕ ಗೊಬ್ಬರಗಳಿಂದ ಬಿಜೋಪಚಾರ ಮಾಡಿ ಕೊಟ್ಟಿಗೆ ಗೊಬ್ಬರ ಬಳಸಿದ್ದಾರೆ. ಕೀಟನಾಶಕವಾಗಿ ಬೇವಿನ ಸೊಪ್ಪಿನ ಕಷಾಯ, ಹುಳಿಮಜ್ಜಿಗೆ, ಎಳನೀರನ್ನು ಗೇಣು ಉದ್ದದ ಸಸಿಯಿಂದ ವಾರಕ್ಕೆ ಒಂದು ಬಾರಿ ಸಿಂಪಡಣೆ ಮಾಡುತ್ತ ಬಂದಿದ್ದಾರೆ.
ಮಾರುಕಟ್ಟೆ
ಎರಡು ರೀತಿಯ ಬದನೆಯನ್ನು ಬೆಳೆದಿದ್ದಾರೆ. ಗುಂಡು ಬದನೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಡಿಕೆ ಇದ್ದುದರಿಂದ ಇವರು ಒಂದು ಬಾರಿ ಕೊಯ್ಲು ಮಾಡಿದರೆ ಸುಮಾರು 30 ರಿಂದ 40 ಕೆ.ಜಿ ಸಿಗುತ್ತದೆ. ಒಂದು ಚೀಲಕ್ಕೆ 150 ರಿಂದ 250 ರೂಗಳ ಬೆಲೆ ಸಿಕ್ಕಿದೆಯಂತೆ. ಒಮ್ಮೆ ಮಾರುಕಟ್ಟೆಗೆ ಹೋದರೆ, ಹೆಚ್ಚಾ ಕಡಿಮೆ 7-8 ಸಾವಿರ ರೂ. ವ್ಯಾಪಾರ ಆಗುತ್ತದೆ ಎನ್ನುತ್ತಾರೆ ನಾಗಣ್ಣ.
ಬದನೆ ಸಸಿಯನ್ನು ಒಂದಕ್ಕೆ 20.ರೂ ನಂತೆ 2000 ಸಸಿಗಳನ್ನು ತಂದು ನಾಟಿ ಮಾಡಲಾಗಿತ್ತು. ಮೇಲು ಗೊಬ್ಬರವಾಗಿ ಯೂರಿಯ, ಕೊಟ್ಟಿಗೆ ಗೊಬ್ಬರವನ್ನು ಜಮೀನಿಗೆ ಬೆರೆಸಿ ಸುಮಾರು 30 ಸಾವಿರ ಹಣ ಖರ್ಚು ಮಾಡಿ, ಬದನೆ, ಚೆಂಡು ಹೂ, ಮೆಣಸಿನ ಕಾಯಿನ್ನು ಬೆಳೆದು ಮಾರಾಟ ಮಾಡಿ ಸುಮಾರು 2.ಲಕ್ಷ ರೂ ಲಾಭಗಳಿಸಿದ್ದಾರೆ.
ಹೀಗಾಗಿ ಎಲ್ಲರ ಕಣ್ಣು ನಾಗಣ್ಣನ ಮೇಲೆ.
ಮಾಹಿತಿಗೆ–9141176728
– ಲೋಕೇಶ.ಡಿ.ಗುಬ್ಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.