ಬಂಟರ ಸಂಘ ವಿಶ್ವ ಮಹಿಳಾ ದಿನಾಚರಣೆ; ಸಾಧಕರಿಗೆ ಸಮ್ಮಾನ
Team Udayavani, Mar 13, 2018, 3:37 PM IST
ಮುಂಬಯಿ: ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯು ಮಾ. 8ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ನಡೆಯಿತು.
ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರ ಅಧ್ಯಕ್ಷತೆಯಲ್ಲಿ ಮತ್ತು ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಇವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಸಮಾಜ ಸೇವಕಿ, ಉದ್ಯಮಿ ಜ್ಯೋತಿ ಆರ್. ಎನ್. ಶೆಟ್ಟಿ ದಂಪತಿ, ಮೇಯರ್ ಮೀನಾಕ್ಷಿ ಆರ್. ಶಿಂದೆ, ಮಿಥಾಲಿ ದೊರೈರಾಜ್, ಅಂತಾರಾಷ್ಟ್ರೀಯ ನೃತ್ಯಗಾರ್ತಿ ಮಿಥಾಲಿ ಜಿ. ಶೆಟ್ಟಿ ಇವರನ್ನು ಮಹಿಳಾ ವಿಭಾಗದ ವತಿಯಿಂದ ಪದಾಧಿಕಾರಿಗಳು ಶಾಲು ಹೊದೆಸಿ, ಸ್ಮರಣಿಕೆ ಹಾಗೂ ಪುಷ್ಪಗುತ್ಛವನ್ನಿತ್ತು ಸಮ್ಮಾನಿಸಿದರು. ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆಯವರನ್ನು ಗೌರವಿಸಲಾಯಿತು. ರಂಜನಿ ಎಸ್. ಹೆಗ್ಡೆ, ಸುಧಾಕರ ಎಸ್. ಹೆಗ್ಡೆ, ದಂಪತಿಯನ್ನು ಸಮ್ಮಾನಿಸಲಾಯಿತು.
ಪ್ರಮುಖ ದಾನಿಗಳಾಗಿ ಸಹಕರಿಸಿದ ಸರಿತಾ ಕೆ. ಡಿ. ಶೆಟ್ಟಿ, ಆರತಿ ಶಶಿಕಿರಣ್ ಶೆಟ್ಟಿ, ಭವಾನಿ ರಘುರಾಮ ಶೆಟ್ಟಿ, ರೇವತಿ ದಾಮೋದರ್ ಶೆಟ್ಟಿ, ಸರೋಜಿನಿ ಹರೀಶ್ ಶೆಟ್ಟಿ, ನಯನಾ ಜಯರಾಮ ಶೆಟ್ಟಿ, ಶಾಲಿನಿ ರವಿ ಶೆಟ್ಟಿ ಮಾಹೀಮ್, ದಾನಿಗಳಾಗಿ ಸಹಕರಿಸಿದ ನಿಖೀತಾ ಯತಿನ್ ಹೆಗ್ಡೆ, ಭವಾನಿ ಸೀತಾರಾಮ ಶೆಟ್ಟಿ, ಸಂಧ್ಯಾ ರತ್ನಾಕರ್ ಶೆಟ್ಟಿ, ಆಶಾಲತಾ ಬೋಳಾರ್, ಪ್ರವೀಣ್ ಭೋಜ ಶೆಟ್ಟಿ, ಪ್ರಮೋದ ಶಿವ ಶೆಟ್ಟಿ, ಆದರ್ಶ್ ಶೆಟ್ಟಿ, ಜಯಲಕ್ಷಿ ¾à ಜೆ. ಶೆಟ್ಟಿ, ಲತಾ ವಿಶ್ವನಾಥ್ ಶೆಟ್ಟಿ, ಸುಶೀಲಾ ಜಗನ್ನಾಥ ರೈ, ಪದ್ಮಾವತಿ ಎಸ್ ಹೆಗ್ಡೆ, ಆಶಾ ಸಂತೋಷ್ ಶೆಟ್ಟಿ, ಶಾರದಾ ಪಿ. ಹೆಗ್ಡೆ, ಶಾಂತಾ ಸುಧಾಕರ್ ಶೆಟ್ಟಿ, ವನಜಾ ಕರುಣಾಕರ್ ಶೆಟ್ಟಿ, ಗುಲಾಬಿ ಎಸ್. ಶೆಟ್ಟಿ, ಶಾಂಭವಿ ವಿ. ಶೆಟ್ಟಿ, ಮುಂಡಪ್ಪ ಎಸ್. ಪಯ್ಯಡೆ, ರತ್ನಾ ವಿ. ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.
ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಆಶಾ ವಿ. ರೈ, ಜತೆ ಕಾರ್ಯದರ್ಶಿ ಮನೋರಮಾ ಎನ್. ಶೆಟ್ಟಿ, ಜತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.