5 ಬಾರಿ ಸಿಎಂ ಬಂದ್ರೂ ಬಿಡಿಗಾಸಿಲ್ಲ
Team Udayavani, Mar 13, 2018, 4:58 PM IST
ಹರಿಹರ: ಸಿಎಂ ಸಿದ್ದರಾಮಯ್ಯ 5 ಸಲ ಕ್ಷೇತ್ರಕ್ಕೆ ಭೇಟಿ ನೀಡಿದ್ದರೂ ಅಭಿವೃದ್ಧಿಗೆ ಬಿಡಿಗಾಸೂ ನೀಡಿಲ್ಲ ಎಂದು ಶಾಸಕ ಎಚ್.
ಎಸ್. ಶಿವಶಂಕರ್ ಟೀಕಿಸಿದರು. ಮಾ. 31ರಂದು ನಂದಿಗುಡಿಯಲ್ಲಿ ಆಯೋಜಿಸಿರುವ ಕುಮಾರಪರ್ವ ಕಾರ್ಯಕ್ರಮದ ನಿಮಿತ್ತ ನಗರದ ಕಾಟೆ ಭವನದಲ್ಲಿ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಖಾಸಗಿ ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ಸಿಎಂ ಆಗಮಿಸಿದಾಗ ಕ್ಷೇತ್ರದ ಹಲವು ಅತಿ ಮುಖ್ಯ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೆನಾದರೂ ಸಿಎಂ ನಯಾಪೈಸೆ ನೀಡಿಲ್ಲ ಎಂದರು.
ಅನುದಾನ ನೀಡಿಕೆಯಲ್ಲಿನ ತಾರತಮ್ಯಕ್ಕೆ ನಾನು ವೀರಶೈವ ಲಿಂಗಾಯತ ಶಾಸಕನಾಗಿರುವುದೂ ಕಾರಣವಾಗಿರಬಹುದು. ಆದರೆ ತಮ್ಮದೇ ಸರ್ಕಾರ, ಸ್ವಜಾತೀಯ ಸಿಎಂ ಇದ್ದಾಗಲೂ ಕಾಂಗ್ರೆಸ್ ಮುಖಂಡರು ಭೈರನಪಾದ ಯೋಜನೆ ಬಗ್ಗೆ ಚಕಾರವೆತ್ತಿಲ್ಲ. ಈಗ
ಚುನಾವಣೆ ಬಂದಾಗ ನಿದ್ದೆಯಿಂದ ಎದ್ದು ಬಡಬಡಿಸಿದಂತೆ ಭೈರನಪಾದದ ಜಪ ಮಾಡುತ್ತಿದ್ದಾರೆ. ಇವೆಲ್ಲಾ ಚುನಾವಣೆ ಗಿಮಿಕ್ ಎಂಬುದು ಮತದಾರರಿಗೆ ಗೊತ್ತಾಗುತ್ತದೆ ಎಂದರು. ಜೆಡಿಎಸ್ ಜಾತ್ಯತೀತವಾಗಿ ಎಲ್ಲ ಜನಸಮುದಾಯಗಳ ವಿಶ್ವಾಸ ಗಳಿಸಿದೆ.
ಕುಮಾರಸ್ವಾಮಿ ಸಿಎಂ ಆಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇನ್ನೂ ಜನಮಾನಸದಲ್ಲಿ ಹಸಿರಾಗಿವೆ. ಜೆಡಿಎಸ್ ಗೆಲ್ಲಿಸಿ ಕುಮಾರಸ್ವಾಮಿಯವರನ್ನು ಮತ್ತೆ ಸಿಎಂ ಮಾಡಲು ಜನ ಕಾತರರಾಗಿದ್ದಾರೆ ಎಂದರು.
ಸ್ಥಳೀಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಗೊಂದಲ ತಮಗೆ ವರವಾಗಲಿದ್ದು, 25 ಸಾವಿರ ಮತಗಳ ಅಂತರದಲ್ಲಿ ಗೆಲುವು
ಸಾಧಿ ಸುವ ವಿಶ್ವಾಸವಿದೆ. ಬಿಎಸ್‌ಪಿ ಸಹ ಜೆಡಿಎಸ್ ಜೊತೆ ಕೈಜೋಡಿಸಿದ್ದು, ಎಲ್ಲ ದಲಿತ ಮತಗಳೂ ಸಹ ನಮ್ಮ ಪಕ್ಷಕ್ಕೆ ದಕ್ಕಲಿವೆ
ಎಂದರು. ಮಾ. 31 ರ ಸಂಜೆ 4ಕ್ಕೆ ಕುಮಾರಸ್ವಾಮಿ ನಂದಿಗುಡಿಯಲ್ಲಿ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ನಗರದ ಗಾಂಧಿ ಮೈದಾನದಿಂದ ಹಾಗೂ ಮಲೆಬೆನ್ನೂರಿನಿಂದ ಆಗಮಿಸುವ ಬೈಕ್ ರ್ಯಾಲಿ ಮೂಲಕ ಅವರನ್ನು ಸ್ವಾಗತಿಸಲಾಗುವುದು. 30 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಜಿಪಂ ಸದಸ್ಯೆ ಬಿ.ಟಿ.ಹೇಮಾವತಿ, ನಗರಸಭೆ ಸದಸ್ಯರಾದ
ಹಬೀಬ್‌ಉಲ್ಲಾ, ಅತಾವುಲ್ಲಾ, ವಿರುಪಾಕ್ಷಿ, ನಗೀನಾ ಸುಬಾನ್, ಡಿ.ಉಜ್ಜೆàಶ್, ತಾಪಂ ಸದಸ್ಯ ರಾಜು, ಕೊಟ್ರಪ್ಪ, ಅಮಾನುಲ್ಲಾ,
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಕುಮಾರಿ, ಮುಖಂಡರಾದ ಹುಲಿಗಿನಹೊಳೆ ಚಂದ್ರಯ್ಯ, ಕೊಂಡಜ್ಜಿ ಮುದೇಗೌಡ್ರು,
ಗಂಟಿ ಬಸವರಾಜಪ್ಪ, ಬಸವರಾಜು, ಲಕ್ಷ್ಮೀ ಆಚಾರ್, ಎಂ.ಜಿ.ಪರಮೇಶ್ವರಗೌಡ, ನಿಟ್ಟೂರು ನಾಗರಾಜ್, ಸಂಜೀವಣ್ಣ,
ಅಂಜನಮ್ಮ, ಮುಜಮಿಲ್ ಸಾಹೇಬ್, ಎ.ಕೆ.ನಾಗಪ್ಪ, ಬಂಡೇರ ತಿಮ್ಮಣ್ಣ, ಹನುಮಗೌಡ, ಬಿ.ಹಾಲೇಶ್, ಮುರುಗೇಶಪ್ಪ, ಜಿ.ದೇವರಾಜ್, ಮಲ್ಲಿಕಾರ್ಜುನ, ದೀಟೂರು ಶೇಖಣ್ಣ, ಎಂ.ಜಿ.ತಮ್ಮಣ್ಣನವರ್, ನಂದಿಗುಡಿ ರಾಜಣ್ಣ, ಕೆ.ಎನ್.ಅಡಿವೇಶ್, ಜಿಗಳಿ
ಗಂಗಪ್ಪ, ದಿನೇಶ್ ಬಾಬು, ರುದ್ರಾಚಾರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.