ವೈಚಾರಿಕತೆ ಮೇಲೆ ದಾಳಿ ಅಪಾಯ
Team Udayavani, Mar 13, 2018, 5:31 PM IST
ರಾಯಚೂರು: ದೇಶದಲ್ಲಿ ಕೋಮು ಶಕ್ತಿಗಳ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿದ್ದು, ವಿಚಾರವಾದಿ, ಚಿಂತಕರು, ಲೇಖಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿವೆ.
ವಿಚಾರವಾದಿಗಳ ಕೊಲೆ ದೇಶದ ಭವಿಷ್ಯಕ್ಕೆ ಅಪಾಯಕಾರಿ ಎಂದು ಅಖೀಲ ಭಾರತ ಕ್ರಾಂತಿಕಾರಿ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಪ್ರದೀಪಸಿಂಗ್ ಠಾಕೂರ್ ಆತಂಕ ವ್ಯಕ್ತಪಡಿಸಿದರು.
ನಗರದ ವೀರಾಂಜನೇಯ ಮುನ್ನೂರಕಾಪು ಕಲ್ಯಾಣ ಮಂಟಪದಲ್ಲಿ ಸೋಮವಾರದಿಂದ ಶುರುವಾದ ಅಖೀಲ
ಭಾರತ ಕ್ರಾಂತಿಕಾರಿ ಕಿಸಾನ್ ಸಭಾ 2ನೇ ರಾಷ್ಟ್ರೀಯ ಸಮ್ಮೇಳನದ ಎರಡನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಲೇಖಕರಾದ ಪನ್ಸಾರೆ, ದಾಬೋಲ್ಕರ್, ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ, ಮುಜಫರ್ ಅಲ್ಲಂಗಿರಿ ಅಂಥವರ
ಕೊಲೆಯಾಗಿದೆ. ಮತ್ತೂಂದು ಕಡೆ ಲೆನಿನ್, ಅಂಬೇಡ್ಕರ್, ಪೆರಿಯಾರ್ ಪ್ರತಿಮೆಗಳನ್ನು ಕೋಮು ಶಕ್ತಿಗಳು ಧ್ವಂಸಗೊಳಿಸಿವೆ. ಸಿದ್ಧಾಂತಗಳ ಮೇಲೆ ನಡೆಯುತ್ತಿರುವ ದಾಳಿಗಳ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಲು ಮುಂದಾಗಬೇಕು ಎಂದರು.
ಆಳುವ ಸರ್ಕಾರಗಳು ಜವಾಬ್ದಾರಿಹೀನವಾಗಿ ವರ್ತಿಸುತ್ತಿವೆ. ರೈತರ ಸರಣಿ ಆತ್ಮಹತ್ಯೆಗಳು ನಡೆದರೂ ಸ್ಪಂದಿಸುತ್ತಿಲ್ಲ.
ಬೆಂಬಲ ಬೆಲೆ ನೀಡುತ್ತಿಲ್ಲ, ಸಾಲ ಮನ್ನಾ ಮಾಡುತ್ತಿಲ್ಲ. ದಲಿತ, ಆದಿವಾಸಿಗಳ ಭೂಮಿ ಮತ್ತು ವಸತಿ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸಿಲ್ಲ. ಕೇವಲ ಬಂಡವಾಳಶಾಹಿ ಪರ ಯೋಜನೆ ಜಾರಿಗೊಳಿಸುತ್ತಿವೆ. ಇಂಥ ಕ್ರಮಗಳ ವಿರುದ್ಧ ರೈತ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದಾರೆ ಎಂದರು.
ಎಐಕೆಕೆಎಸ್ ರಾಷ್ಟ್ರಾಧ್ಯಕ್ಷ ಬಾಬುರಾಮ್ ಶರ್ಮಾ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಬಡಜನರಿಗೆ ವಸತಿ, ರೈತರಿಗೆ ಭೂಮಿ ಹಂಚಿಕೆಗಾಗಿ ಸರ್ಕಾರಗಳು ಪರ್ಯಾಯ ಕೃಷಿ ನೀತಿ ಜಾರಿಗೆ ತರಬೇಕು ಎಂದರು.
ಟಿಯುಸಿಐ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರಿಕಿ, ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಜಿಲ್ಲಾ
ಕಾರ್ಯದರ್ಶಿ ಕೆ.ನಾಗಲಿಂಗಸ್ವಾಮಿ, ಆರ್ ವೈಎಫ್‌ಐ ರಾಜ್ಯ ಕಾರ್ಯದರ್ಶಿ ನಾಗರಾಜ ಪೂಜಾರ, ಆರ್.ಸಿ.ಎಫ್. ಬಿ.ಎನ್.ಯರದಿಹಾಳ, ವಿದ್ಯಾರ್ಥಿ ಸಂಘಟನೆಯ ಕಿರಣಕುಮಾರ, ಮಹಿಳಾ ಸಂಘಟನೆಯ ಚನ್ನಮ್ಮ, ವೆಲ್ಲು ತಮಿಳುನಾಡು ಮಾತನಾಡಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.