ಫೆಡರರ್‌ಗೆ ಸುಲಭ ಜಯ
Team Udayavani, Mar 14, 2018, 7:30 AM IST
ಇಂಡಿಯನ್ ವೆಲ್ಸ್ (ಕ್ಯಾಲಿಫೋ ರ್ನಿಯಾ): ಸ್ವಿಸ್ ದಂತಕತೆ ರೋಜರ್ ಫೆಡರರ್ ಆರನೇ ಇಂಡಿಯನ್ ವೆಲ್ಸ್ ಟೆನಿಸ್ ಪ್ರಶಸ್ತಿ ಗೆಲುವಿನ ಸನಿಹಕ್ಕೆ ಬಂದಿದ್ದಾರೆ. ಸೋಮವಾರ ನಡೆದ 3ನೇ ಸುತ್ತಿನ ಸ್ಪರ್ಧೆಯಲ್ಲಿ ಅವರು ಸರ್ಬಿಯಾದ ಫಿಲಿಪ್ ಕ್ರ್ಯಾಜಿನೊವಿಕ್ ವಿರುದ್ಧ 6-2, 6-1 ನೇರ ಸೆಟ್ ಸುಲಭ ಜಯದೊಂದಿಗೆ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ.
36ರ ಹರೆಯದ ಅನುಭವಿ ಆಟಗಾರ ಫೆಡರರ್ ಎದುರಾಳಿ ಕ್ರ್ಯಾಜಿನೊವಿಕ್ ಅವರನ್ನು 58 ನಿಮಿಷಗಳಲ್ಲಿ ಮಣಿಸಿದರು. ಈ ಋತುವಿನಾರಂಭದಿಂದಲೂ ಅಮೋಘ ಪ್ರದರ್ಶನ ನೀಡುತ್ತಲೇ ಬಂದಿರುವ ಫೆಡರರ್ ಆಡಿದ 14 ಪಂದ್ಯಗಳಲ್ಲೂ ಜಯ ಸಾಧಿಸಿದ್ದಾರೆ.
ಪಂದ್ಯದ ಬಳಿಕ ಪ್ರತಿಕ್ರಿಯಿಸಿರುವ ವಿಶ್ವ ನಂ. 1 ಆಟಗಾರ, “ಕ್ರ್ಯಾಜಿನೊವಿಕ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿ ನಾನು ಮಿಶ್ರ ಆಟ ಪ್ರದರ್ಶಿಸಿದೆ. ಅದರ ಜತೆಗೆ ನಾನು ಆಟವನ್ನು ಆನಂದಿಸಿದೆ, ವೈವಿಧ್ಯತೆ ಪ್ರದರ್ಶಿಸಿದೆ ಕೂಡ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raju James Bond: ಕಣ್ಮಣಿ ಮೆಚ್ಚಿದ ರಾಜು; ಫೆ. 14ಕ್ಕೆ ‘ರಾಜು ಜೇಮ್ಸ್ ಬಾಂಡ್’ ರಿಲೀಸ್
ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ
High Court: ಜಯಲಲಿತಾ ಸಂಬಂಧಿಗೆ ಚಿನ್ನ, ವಸ್ತು ಮರಳಿಸಲು ಹೈ ನಕಾರ
Theft Case: ಕೆಲಸಕಿದ್ಕ ಹೋಟೆಲ್‌ನಲ್ಲಿ ಕದ್ದ ಮ್ಯಾನೇಜರ್
Yelandur: ಮೂಗುರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆ; ಬಂಡಿ ಹರಿದು ಓರ್ವ ಮೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.