ರಾಜ್ಯಮಟ್ಟದ ಸೈಕಲ್‌ ಜಾಥಾ ಅಭಿಯಾನಕ್ಕೆ ಚಾಲನೆ


Team Udayavani, Mar 14, 2018, 10:18 AM IST

14-March-2.jpg

ಮಹಾನಗರ: ದೇಶದ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುತ್ತಿರುವ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ವಿಸರ್ಜಿಸಲು ಭ್ರಷ್ಟಾಚಾರದ ಕಾರಣವನ್ನು ನೀತಿ ಆಯೋಗ ನೀಡುವುದಾದರೆ, ಇದಕ್ಕಿಂತ ಹೆಚ್ಚು ಭ್ರಷ್ಟಾಚಾರ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಮೊದಲು ಬೀಗ ಹಾಕಲಿ ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ| ಎಚ್‌.ಎನ್‌. ರವೀಂದ್ರ ಹೇಳಿದರು.

ಉದ್ದೇಶಿತ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆಯ ಜನವಿರೋಧಿ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಮಟ್ಟದ ಸೈಕಲ್‌ ಜಾಥಾ ಅಭಿಯಾನಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಭ್ರಷ್ಟಾಚಾರವನ್ನು ನಿಯಂತ್ರಿಸಲು ಸೂಕ್ತ ಕಾಯ್ದೆ- ಕಾನೂನುಗಳಿರುವಾಗ ಅದನ್ನು ಸಮರ್ಥವಾಗಿ ಬಳಸುವ ಬದಲು ಎಂಸಿಐ ವಿಸರ್ಜಿಸಲು ಶಿಫಾರಸು ಮಾಡಿರುವುದು ಸರಿಯಲ್ಲ. ಉದ್ದೇಶಿತ ಮಸೂದೆ ಜನಾರೋಗ್ಯಕ್ಕೆ ಮಾರಕ ಹಾಗೂ ದೇಶದ ಆರೋಗ್ಯ ವ್ಯವಸ್ಥೆಯನ್ನೇ ಹದಗೆಡಿಸಲಿದೆ ಎಂದರು.

ಈ ಮಸೂದೆಯ ಪ್ರಕಾರ 64 ಮಂದಿಯ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಕೇವಲ ಐದು ಮಂದಿ ಚುನಾಯಿತ ಸದಸ್ಯರಿಗೆ ಅವಕಾಶವಿದೆ. ಉಳಿದ 59 ಮಂದಿ ಸರಕಾರದಿಂದ ನೇಮಕಗೊಳ್ಳುವವರು. ಹೀಗಿರುವಾಗ ಇಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ ಎನ್ನುವ ಖಾತ್ರಿ ಇದೆಯೇ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರಕ್ಕೆ ಕಾರಣವಾದೀತು
ಹಿಂದೆ ಇದ್ದ ವ್ಯವಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಎಂಸಿಐಗೆ ಇತ್ತು. ಆದರೆ ಹೊಸ ಆಯೋಗ ಯಾವ ತಪಾಸಣೆಯೂ ಇಲ್ಲದೇ ನೇರವಾಗಿ ಅನುಮತಿ ನೀಡಬಹುದಾಗಿದೆ. ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಮಂಗಳೂರು ಐಎಂಎ ಅಧ್ಯಕ್ಷ ಡಾ| ಕೆ.ಆರ್‌. ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಗೀತಾ ದೊಪ್ಪ, ಡಾ| ಉಳ್ಳುಂಬಿ, ಡಾ| ಭಾಸ್ಕರ್‌, ಹರೀಶ್‌ ದೇಲಂತಬೆಟ್ಟು, ಡಾ| ಮುಕುಂದ್‌, ಡಾ| ಉಲ್ಲಾಸ್‌ ಶೆಟ್ಟಿ, ಖಜಾಂಚಿ ಸುಚಿತ್ರಾ ಶಣೈ, ಚುನಾಯಿತ ಅಧ್ಯಕ್ಷ ಡಾ| ಸಚ್ಚಿದಾನಂದ ರೈ, ಹಿರಿಯ ವೈದ್ಯ ಡಾ| ಶಾಂತಾರಾಮ ಶೆಟ್ಟಿ, ದಿವಾಕರ ರಾವ್‌, ಮಾಜಿ ಅಧ್ಯಕ್ಷ ಡಾ| ಜಿ.ಕೆ. ಭಟ್‌ ಸಂಕಬಿತ್ತಿಲು, ಡಾ|ಅಮೃತಾ ಭಂಡಾರಿ ಉಪಸ್ಥಿತರಿದ್ದರು. ಡಾ| ಅಣ್ಣಯ್ಯ ಕುಲಾಲ್‌ ನಿರೂಪಿಸಿದರು. ಐಎಂಎ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಸೈಕಲ್‌ ಮತ್ತು ದ್ವಿಚಕ್ರ ವಾಹನ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಿಗೆ ಮನವಿ ಪತ್ರ ಕಳುಹಿಸಲಾಯಿತು.

ಜನ ಸಾಮಾನ್ಯರಿಗೆ ಮಾರಕ
ಆಯುರ್ವೇದ ವೈದ್ಯರಿಗೆ ಅಲ್ಪಾವಧಿ ತರಬೇತಿ ನೀಡಿ ಅಲೋಪತಿಕ್‌ ಔಷಧ ವಿತರಿಸಲು ಅವಕಾಶ ಮಾಡಿಕೊಡುವುದು ಒಂದೆಡೆ ಆಯುರ್ವೇದ ಪದ್ಧತಿಯನ್ನು ಮುಗಿಸುವ ಸಂಚು. ಇನ್ನೊಂದೆಡೆ ಅರೆಜ್ಞಾನದಿಂದ ಚಿಕಿತ್ಸೆ ನೀಡುವುದು ಜನಸಾಮಾನ್ಯರ ಪಾಲಿಗೆ ಮಾರಕವಾಗಲಿದೆ. ಇಂಥ ವೈದ್ಯರಿಂದ ನಮ್ಮ ಸಂಸದರು, ಸಚಿವರು ಚಿಕಿತ್ಸೆ ಪಡೆಯುತ್ತಾರೆಯೇ?
– ಡಾ| ಎಚ್‌.ಎನ್‌. ರವೀಂದ್ರ,
ಅಧ್ಯಕ್ಷ , ಭಾರತೀಯ ವೈದ್ಯಕೀಯ ಸಂಘದ
ಕರ್ನಾಟಕ ರಾಜ್ಯ ಘಟಕ

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.