ಕಲಿಕೆಗೆ ಸಹಾಯ ಮಾಡುವ ಸ್ಟೂಡೆಂಟ್ ಆ್ಯಪ್
Team Udayavani, Mar 14, 2018, 5:27 PM IST
ಈಗಿನ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಬಿಟ್ಟಿರುವುದು ತುಂಬಾ ಕಷ್ಟ. ಪರೀಕ್ಷೆ ಹತ್ತಿರದಲ್ಲಿದ್ದರಂತೂ ಪಾಲಕರು ತಮ್ಮ ಮಕ್ಕಳನ್ನು ಅದರಿಂದ ದೂರ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಆಗ ಮಕ್ಕಳು ಸ್ಮಾರ್ಟ್ ಫೋನ್ ಗೆ ಇನ್ನಷ್ಟು ಹತ್ತಿರವಾಗುವುದು ವಿಪರ್ಯಾಸ. ಈ ತಾಪತ್ರಯಕ್ಕೆಲ್ಲ ಇಲ್ಲಿದೆ ಉತ್ತರ. ಸ್ಮಾರ್ಟ್ ಫೋನ್ ಅನ್ನು ಕಲಿಕೆಗೆ ಸಹಾಯವಾಗುವಂತೆ ಬಳಸಿಕೊಳ್ಳುವಂತಾದರೆ ಎಷ್ಟು ಚೆನ್ನ ಅಲ್ಲವೇ? ಪರೀಕ್ಷಾ ಕಾಲದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ ಆರು ಆಂಡ್ರಾಯ್ಡ ಉಚಿತ ಆ್ಯಪ್ ಗಳು ಇಲ್ಲಿವೆ.
1 ಕೀಪ್ ಫೋಕಸ್ ಆ್ಯಪ್
ಓದಲು ಕುಳಿತಾಗ ಆಗಾಗ ವಾಟ್ಸಪ್, ಎಫ್ ಬಿ, ಇನ್ ಸ್ಟಾಗ್ರಾಂ ಚೆಕ್ ಮಾಡೋಣ ಅನ್ನಿಸುತ್ತೆ. ಗಂಟೆಗೊಮ್ಮೆ ಆ ಕಡೆ ಕಣ್ಣು ಹೋದರೆ ಓದಿನ ಕಡೆಗೆ ಗಮನ ಬರುವುದಿಲ್ಲ. ಹೀಗೆ ನಿಮ್ಮ ಗಮನ ಬೇರೆ ಕಡೆಗೆ ಹರಿಯುವುದನ್ನು ತಡೆಯಲು ‘ಕೀಪ್ ಫೋಕಸ್’ ಎಂಬ ಆ್ಯಪ್ ಇದೆ. ಆ ಆ್ಯಪ್ ಕೆಲವು ಸೋಶಿಯಲ್ ಮೀಡಿಯಾ ಸೈಟ್‌ಗಳನ್ನು, ಕೆಲವು ಕಾಲ ಬ್ಲಾಕ್ ಮಾಡಬಲ್ಲದು. ಈ ಆ್ಯಪ್ ಡೌನ್‌ಲೋಡ್ ಮಾಡಿ, ಯಾವ್ಯಾವ ಸೋಶಿಯಲ್ ಮೀಡಿಯಾ ಸೈಟ್ ಗಳನ್ನು ಎಷ್ಟು ಗಂಟೆಗಳ ಕಾಲ ಬ್ಲಾಕ್ ಮಾಡಬೇಕು ಅಂತ ನೀವೇ ಸೆಟ್ ಮಾಡಬಹುದು.
2 ಮಾಥ್ಸ್ ಅಲಾರಾಂ ಕ್ಲಾಕ್
ಕೆಲವರಿಗೆ ಗಣಿತದ ಕ್ಲಾಸ್‌ನಲ್ಲಿ ಗಡದ್ದಾಗಿ ನಿದ್ದೆ ಬರುತ್ತೆ. ಇನ್ನು ಕೆಲವರಿಗೆ ಮಾಥ್ಸ್ …ಅಂದರೆ ನಿದ್ದೆಯೇ ಹಾರಿ ಹೋಗುತ್ತದೆ. ಈ ಮಾಥ್ಸ್…ಅಲಾರಾಂ ಕ್ಲಾಕ್ ಆ್ಯಪ್ ಕೂಡ ನಿದ್ದೆಯಿಂದ ನಿಮ್ಮನ್ನು ಎಚ್ಚರಿಸುವ ಆ್ಯಪ್. ಬೆಳಗ್ಗೆ ಅಲಾರಾಂನ ಕಿವಿ ಹಿಂಡಿ, ತಲೆ ಮೇಲೆ ಕುಟ್ಟಿ ಮತ್ತೆ ಮಲಗುವ ಕುಂಭಕರ್ಣರಿಗೆ ಈ ಆ್ಯಪ್ ತುಂಬಾ ಬೆಸ್ಟ್ . ಯಾಕೆಂದರೆ, ಈ ಆ್ಯಪ್ ನಲ್ಲಿ ಅಲಾರಾಂ ಸೆಟ್ ಮಾಡಿದರೆ ಅದನ್ನು ಆಫ್ ಮಾಡುವ ಮುನ್ನ ನೀವು ಒಂದು ಗಣಿತದ ಸಮಸ್ಯೆಯನ್ನು ಬಿಡಿಸಬೇಕು. ಇಲ್ಲದಿದ್ದರೆ ಅಲಾರಾಂ ಕೂಗುತ್ತಲೇ ಇರುತ್ತದೆ. ಗಣಿತದ ಲೆಕ್ಕ ಬಿಡಿಸಿ, ಅಲಾರಾಂ ಆಫ್ ಆಗುವ ಮುನ್ನ ನಿದ್ದೆ ಹಾರಿ ಹೋಗಿರುವುದರಿಂದ ನೀವು ಎದ್ದೇ ಏಳುತ್ತೀರಿ.
3 ರಿಯಲ್ ಕ್ಯಾಲ್ಕ್ ಸೈಂಟಿಫಿಕ್ ಕ್ಯಾಲ್ಕುಲೇಟರ್
ಈ ಆ್ಯಪ್ ಸೈಂಟಿಫಿಕ್ ಕ್ಯಾಲ್ಕುಲೇಟರ್ ನಂತೆ ಕೆಲಸ ಮಾಡುತ್ತದೆ. ಕ್ಯಾಲ್ಕುಲೇಟರ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರೆ ಈ ಆ್ಯಪ್ ಬಳಕೆಯಾಗುತ್ತದೆ. ಗಣಿತದ ಮತ್ತು ವಿಜ್ಞಾನದ ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆ ಹರಿಸಲು ಈ ಆ್ಯಪ್ ಸಹಕಾರಿ.
4 ಟೈಮ್‌ಟೇಬಲ್
ಕೆಲವೊಮ್ಮೆ ಎಕ್ಸಾಂ ಟೈಮ್‌ಟೇ ಬಲ್ಲೇ ಮರೆತು ಹೋಗಿ ಫಜೀತಿಯಾಗುತ್ತದೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಪರೀಕ್ಷಾ ವೇಳಾಪಟ್ಟಿ, ಪರೀಕ್ಷೆಗೆ ಓದೋಕೆ ಅಂತ ನೀವು ಮಾಡಿಕೊಂಡಿರೋ ವೇಳಾಪಟ್ಟಿಗಳನ್ನು ಒಮ್ಮೆ ಫೀಡ್ ಮಾಡಿದರೆ ಸಾಕು.
5 ಡಿಕ್ಷನರಿ.ಕಾಂ
ಕೆಲವರಿಗೆ ಇಂಗ್ಲಿಷ್ ಕಷ್ಟ ಎಂಬ ಭಾವನೆಯಿದೆ. ಅಂಥವರು ದಪ್ಪ ದಪ್ಪ ಡಿಕ್ಷನರಿ ಓದಬೇಕು ಅಂತೇನಿಲ್ಲ. ಮೊಬೈಲ್‌ನಲ್ಲಿ ಈ ಆ್ಯಪ್ ಡೈನ್‌ಲೋಡ್ ಮಾಡಿಕೊಂಡರಾಯ್ತು. ಡಿಕ್ಷನರಿ. ಕಾಂನಲ್ಲಿ 2 ಲಕ್ಷಕ್ಕೂ ಹೆಚ್ಚು ಇಂಗ್ಲಿಷ್ ಪದಗಳಿಗೆ ಅರ್ಥ ಸಿಗುತ್ತದೆ. ಅಷ್ಟೇ ಅಲ್ಲದೆ, ಆ ಪದ ಹೇಗೆ ಹುಟ್ಟಿಕೊಂಡಿತು? ಆ ಪದದ ಇತಿಹಾಸವೇನು? ಅದರ ಸಮಾನಾರ್ಥಕ ಪದ, ವಿರುದ್ಧಾರ್ಥಕ ಪದಗಳು ಕೂಡ ಲಭ್ಯ.
6 ಮೈಸ್ಕ್ರಿಪ್ಟ್ ಸ್ಮಾರ್ಟ್ ನೋಟ್
ಓದಲು ಕುಳಿತಾಗ ಕೆಲವು ಅಂಶಗಳನ್ನು ನೋಟ್ಸ್ ಮಾಡಿಕೊಳ್ಳಬೇಕಾಗುತ್ತದೆ. ಕೆಲವರಿಗೆ ತಮ್ಮ ಹ್ಯಾಂಡ್‌ರೈ ಟಿಂಗ್ ನಲ್ಲಿ ಬರೆದಿದ್ದನ್ನು ಓದಿದರೆ ಅದು ಚೆನ್ನಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಅಂಥವರು ಮೈ ಸ್ಕ್ರಿಪ್ಟ್ ಸ್ಮಾರ್ಟ್‌ನೋಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಬಹುದು. ನಿಮ್ಮ ಹಸ್ತಾಕ್ಷರವನ್ನು ಅರ್ಥ ಮಾಡಿಕೊಳ್ಳುವ ಈ ಆ್ಯಪ್ ಅದನ್ನು ಬೇಕಾದರೆ ಟೆಕ್ಸ್ಟ್ ಡಾಕ್ಯುಮೆಂಟ್ ಫಾರ್ಮ್ಯಾಟ್ ಆಗಿ ಬದಲಾಯಿಸುತ್ತದೆ. ಇದನ್ನು ಪಿಡಿಎಫ್ ಆಗಿ ಬದಲಾಯಿಸಲೂ ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.