ಕೋಡಿ ಕನ್ಯಾಣ: ಅಳಿವೆ ಹೂಳೆತ್ತುವ ಕಾಮಗಾರಿ ಸ್ಥಗಿತ
Team Udayavani, Mar 15, 2018, 6:45 AM IST
ಕೋಟ: ಕೋಡಿಕನ್ಯಾಣ ಜೆಟ್ಟಿ ಅಭಿವೃದ್ಧಿಪಡಿಸಿ ಮಲ್ಪೆಗೆ ಪರ್ಯಾಯ ಬಂದರು ನಿರ್ಮಿಸಲು ಕೈಗೊಂಡ ಅಳಿವೆ ಹೂಳೆತ್ತುವ ಕಾಮಗಾರಿ ಇದೀಗ ಅರ್ಧಕ್ಕೇ ನಿಂತಿದೆ. ಆದ್ದರಿಂದ ಇಲ್ಲಿನ ಬಂದರು ಅಭಿವೃದ್ಧಿ ಕನಸಿಗೆ ಹಿನ್ನಡೆಯಾಗಿದೆ. ಅಳಿವೆ ಹೂಳೆತ್ತಲು ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ 6.76 ಕೋ. ರೂ. ಬಿಡುಗಡೆ ಮಾಡಿತ್ತು. ಆದರೆ ಬಿಲ್ ಪಾವತಿಯಾಗಿಲ್ಲ ಎನ್ನುವ ಕಾರಣ ನೀಡಿ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಸಮನ್ವಯದ ಕೊರತೆ ?
ಈ ಹಿಂದೆ ಟೆಂಡರ್ ಮುಗಿದು ಹಲವು ತಿಂಗಳು ಕಾಮಗಾರಿ ಆರಂಭವಾಗಿರಲಿಲ್ಲ. ಅನಂತರ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಗುತ್ತಿಗೆ ವಹಿಸಿಕೊಂಡ ಕಂಪೆನಿಯವರಿಗೆ ಬಿಸಿ ಮುಟ್ಟಿಸಿದ ಮೇಲೆ ಕಾಮಗಾರಿ ಆರಂಭವಾಗಿತ್ತು. ಈಗ ಕೋಟ್ಯಂತರ ರೂ. ಬಿಲ್ ಪಾವತಿಯಾಗಿಲ್ಲ. ಬಿಲ್ ಪಾವತಿಸಿ ದರೆ ಕೆಲಸ ಮುಂದುವರಿಸುತ್ತೇವೆ ಎನ್ನು ವುದು ಗುತ್ತಿಗೆದಾರರ ವಾದ. ಆದರೆ ಅಧಿಕಾರಿಗಳು ಇದನ್ನು ಒಪ್ಪುತ್ತಿಲ್ಲ, ಕಾಮಗಾರಿಗೆ ಅನುದಾನದ ಕೊರತೆ ಇಲ್ಲ, ಕೆಲಸ ಸರಿಯಾಗಿ ಆಗದ ಕಾರಣ ಬಿಲ್ ಪಾವತಿ ಮಾಡಿಲ್ಲ. ಕೆಲಸ ಮಾಡಿದರೆ ಹಣ ನೀಡುತ್ತೇವೆ ಎನ್ನುತ್ತಾರೆ. ಅಧಿಕಾರಿ ಗಳು, ಗುತ್ತಿಗೆದಾರರ ನಡುವಿನ ಹಗ್ಗಜಗ್ಗಾಟ ದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಬಂದರು ಅಭಿವೃದ್ಧಿ ಕಾರ್ಯ ಚಾಲ್ತಿಯಲ್ಲಿ2 ಕೋಟಿ ರೂ. ವೆಚ್ಚದಲ್ಲಿ ಜಟ್ಟಿ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದು ಟೆಂಡರ್ ಹಂತದಲ್ಲಿದೆ. ಸಣ್ಣ ನೀರಾವರಿ ಇಲಾಖೆಯಿಂದ 1 ಕೋ.ರೂ. ಬಿಡುಗಡೆ ಯಾಗಿ ಬದಿಕಟ್ಟುವ ಕಾಮಗಾರಿ ನಡೆದಿದೆ. ಉಳಿದಂತೆ ವಿವಿಧ ಬೇಡಿಕೆಗಳನು ಸರಕಾರಕ್ಕೆ ಸಲ್ಲಿಸಲಾಗಿದೆ. ಎಲ್ಲವೂ ಕೈಗೂಡಿದರೆ ಮುಂದಿನ ಮೀನುಗಾರಿಕೆ ಅವಧಿಯಲ್ಲಿ ಇದನ್ನು ಬಂದರಾಗಿ ಉಪಯೋಗಿಸಿಕೊಳ್ಳುವ ಯೋಚನೆ ಇತ್ತು. ಆದರೆ ಇದೀಗ ಹೂಳೆತ್ತುವ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಹಿನ್ನಡೆಯಾಗಿದೆ.
ಹೋರಾಟದ ಎಚ್ಚರಿಕೆ
ಗುತ್ತಿಗೆದಾರರಿಗೆ
ಹೂಳೆತ್ತುವ ಕಾಮಗಾರಿಗೆ ನೀಡಿದ್ದ ಸಮಯಾವಕಾಶ ಮುಗಿದಿದ್ದರೂ, ಕಾಮಗಾರಿ ಇನ್ನೂ ಮುಗಿದಿಲ್ಲ. ಮೇ ಒಳಗೆ ಕಾಮಗಾರಿ ಮುಗಿಸುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು. ಇಲ್ಲವಾದರೆ ಚುನಾವಣೆ ಸಂದರ್ಭ ಉಗ್ರ ಹೋರಾಟ ನಡೆಸಲಾಗುವುದು.
– ಚಂದ್ರ ಕಾಂಚನ್ ಕೋಡಿ, ಅಧ್ಯಕ್ಷರು, ಕೋಡಿ ಮೀನುಗಾರರ ಸಂಘ
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.