ತಾಲೂಕು ಆಸ್ಪತ್ರೆಯಾದರೆ ಗ್ರಾಮೀಣ ಜನತೆಗೆ ಉಪಕಾರ
Team Udayavani, Mar 15, 2018, 6:15 AM IST
ಕಾಪು ಪುರಸಭೆಯಾಗಿದ್ದರೂ ಇನ್ನೂ ಇಲ್ಲಿ ಪ್ರಾಥಮಿಕ ಕೇಂದ್ರ ಮಾತ್ರವೇ ಇದ್ದು ಸೌಲಭ್ಯ ಕೊರತೆಗಳಿಂದ, ಸಿಬಂದಿ ಕೊರತೆಯಿಂದ ಬಳಲುತ್ತಿದೆ. ತಾಲೂಕಾದ ಬಳಿಕ 100 ಹಾಸಿಗೆಗಳ ಸುಸಜ್ಜಿತ ತಾಲೂಕು ಆಸ್ಪತ್ರೆ ಸ್ಥಾಪನೆಯ ನಿರೀಕ್ಷೆ ಜನರದ್ದು. ಇದರಿಂದ ಚಿಕಿತ್ಸೆಗೆ ವೃಥಾ ಅಲೆದಾಟ ತಪ್ಪೀತು ಎಂಬ ಆಶಾಭಾವನೆಯಿದೆ.
ಕಾಪು: ತಾಲೂಕು ಕೇಂದ್ರವಾಗಿರುವ ಕಾಪು ಆರೋಗ್ಯ ಕ್ಷೇತ್ರ ಅಭಿವೃದ್ಧಿಯಲ್ಲಿ ವ್ಯಾಪಕ ನಿರೀಕ್ಷೆಯನ್ನು ಹೊಂದಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರವಿದ್ದು, ಮುಂದಿನ ದಿನಗಳಲ್ಲಿ ಸುಧಾರಿತ ವೈದ್ಯಕೀಯ ಸೇವೆಯ ಆಶಯ ಹೊಂದಿದೆ.
ಪುರಸಭೆ ರೂಪುಗೊಂಡ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಪುನರ್‌ನಿರ್ಮಾಣಕ್ಕೆ 1.30 ಕೋ. ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಲಾಗಿತ್ತು. ಈಗ ತಾಲೂಕು ಕೇಂದ್ರವಾಗಿರುವ ಹಿನ್ನೆಲೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿ
ಪ್ರಸ್ತುತ 6 ಬೆಡ್ (3 ಪುರುಷ – 3 ಮಹಿಳೆ) ಗಳ ಸೌಲಭ್ಯಹೊಂದಿದೆ. ನಿತ್ಯ 70ರಿಂದ 80 ಮಂದಿ ರೋಗಿ
ಗಳು ಇಲ್ಲಿಗೆ ತಪಾಸಣೆಗೆ ಆಗಮಿಸುತ್ತಾರೆ.
ಪ್ರಾ.ಆ. ಕೇಂದ್ರ ವ್ಯಾಪ್ತಿಯಲ್ಲಿ 9 ಉಪ ಆರೋಗ್ಯ ಕೇಂದ್ರಗಳಿದ್ದು ನಾಲ್ಕು ಕಡೆ ಕಟ್ಟಡಗಳಿಲ್ಲ. ಸಿಬಂದಿಯೂ ಇಲ್ಲ. ಕಾಪು, ಕಾಪು ಪಡು, ಮೂಳೂರು, ಉಳಿಯಾರಗೋಳಿ, ಕೈಪುಂಜಾಲು, ಮಲ್ಲಾರು, ಪಾಂಗಾಳ, ಇನ್ನಂಜೆ,
ಮಜೂರು, ಪಾದೂರು, ಹೇರೂರು, ಉಚ್ಚಿಲ, ಬೆಳಪು, ಪಣಿಯೂರು ಸಹಿತ ಹಲವು ಪ್ರದೇಶಗಳ ಜನರು ಇಲ್ಲಿನ ಪ್ರಾ.ಆ. ಕೇಂದ್ರವನ್ನು ಅವಲಂಬಿಸಿದ್ದಾರೆ.
ಕಳೆದ ಕೆಲ ತಿಂಗಳಿಂದ ಪೂರ್ಣಕಾಲಿಕ ವೈದ್ಯರ ಹುದ್ದೆ ಖಾಲಿಯಿದ್ದು, ಪಡುಬಿದ್ರಿಯ ವೈದ್ಯಾಧಿಕಾರಿ ಚಾರ್ಜ್‌ನಲ್ಲಿದ್ದಾರೆ. ದಿನಕ್ಕೊಬ್ಬ ವೈದ್ಯರು ಬರುವುದ ರಿಂದ ಶಾಶ್ವತ ವೈದ್ಯಾಧಿಕಾರಿಗಳ ಬಗ್ಗೆ ಜನತೆ ಅಸಮಾಧಾನ ಹೊಂದಿದ್ದಾರೆ.
ತಾಲೂಕು ವ್ಯಾಪ್ತಿಯಲ್ಲಿ 9 ಸರಕಾರಿ ಆಸ್ಪತ್ರೆ
ಸಮುದಾಯ ಆರೋಗ್ಯ ಕೇಂದ್ರ- ಶಿರ್ವ, ಪ್ರಾ.ಆ. ಕೇಂದ್ರ – ಕಾಪು, ಪಡುಬಿದ್ರಿ, ಮೂಡಬೆಟ್ಟು ಮತ್ತು ಮುದರಂಗಡಿ ಆಯುರ್ವೇದ ಪ್ರಾಥಮಿಕ ಆರೋಗ್ಯ ಕೇಂದ್ರ – ಪಣಿಯೂರು, ಪಲಿಮಾರು, ಮಲ್ಲಾರು, ಕುರ್ಕಾಲು .
ಸಿಬಂದಿ ಕೊರತೆಯೇ ಸಮಸ್ಯೆ
ತಾಲೂಕು ವ್ಯಾಪ್ತಿಯ ಹೆಚ್ಚಿನ ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ವ್ಯಾಪಕವಾಗಿದೆ. ಸಿಬಂದಿಗೆ ವಸತಿ ಸೌಲಭ್ಯದ ಕೊರತೆಯೂ ಇದೆ. ತಾಲೂಕಿನಾದ್ಯಂತ 135 ಹುದ್ದೆಗಳು ಮಂಜೂರಾಗಿದ್ದರೆ, ಅವುಗಳಲ್ಲಿ 72 ಹುದ್ದೆ ಖಾಲಿ ಇವೆ.
ತಾಲೂಕು ಆಸ್ಪತ್ರೆಯಾದರೆ ಲಾಭ
ಈಗಿರುವ 6 ಬೆಡ್‌ಗಳ ಆಸ್ಪತ್ರೆಯ ಬದಲಾಗಿ 100 ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾಗಲು ಅವಕಾಶವಿದೆ. 95 ಪೂರ್ಣಕಾಲಿಕ ಸಿಬಂದಿ ನೇಮಕವಾಗಲಿದ್ದಾರೆ. ಸ್ಕ್ಯಾನಿಂಗ್, ಕಣ್ಣು, ಮೂಗು, ರಕ್ತ ಪರೀಕ್ಷೆ, ಹೆರಿಗೆ ಸೇರಿದಂತೆ ವಿವಿಧ ತಜ್ಞರ ಸೇವೆಗಳು ಲಭ್ಯವಾಗಲಿವೆ.
ಖಾಸಗಿಯವರಿಂದಲೂ ಸೇವೆ
ಕಾಪು ಪೇಟೆಗೆ ಸನಿಹದ ಕೊಪ್ಪಲಂಗಡಿಯಲ್ಲಿ ಪ್ರಶಾಂತ್ ಆಸ್ಪತ್ರೆ, ಕಾಪು ನಸಿಂìಂಗ್ ಹೋಂ ಸಾರ್ವಜನಿಕರ ತುರ್ತು ಸೇವೆಗೆ ಲಭ್ಯವಿವೆ. ಇನ್ನು 10ಕ್ಕೂ ಅಧಿಕ ಕ್ಲಿನಿಕ್‌ಗಳು, 4 ಮೆಡಿಕಲ್ ಲ್ಯಾಬ್‌ಗಳು, 6 ಮೆಡಿಕಲ್ ಶಾಪ್‌ಗ್ಳು ಕ್ಷೇತ್ರದ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿವೆ.
ತುರ್ತಾಗಿ ಆಗಬೇಕಾದ್ದೇನು? “
ಗ್ರಾಮೀಣ ಜನರು ಚಿಕಿತ್ಸೆಗಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ.ಇಲ್ಲಿ ತಾಲೂಕು ಆಸ್ಪತ್ರೆಯಾಗುವ ಮೊದಲು ತುರ್ತು ಚಿಕಿತ್ಸೆ, ಒಳರೋಗಿ ಸೌಲಭ್ಯಗಳು ಬೇಕು ಎಂಬ ಬೇಡಿಕೆ ಇದೆ. ಇವುಗಳೊಂದಿಗೆ ಶೀತಲೀಕೃತ ಶವಾಗಾರ, ಎಕ್ಸ್‌ರೇ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ವಿಭಾಗ, ಸ್ತ್ರೀ ರೋಗ ತಜ್ಞರ ಸಹಿತವಾದ ವಿವಿಧ ಸೌಲಭ್ಯಗಳು ಬೇಕಿವೆ.
ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುವ ಪ್ರಯತ್ನ. ಕಾಪು ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್ ನಂಬರ್ 9148594259 ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.