ಕೆನಡಾದತ್ತ ಐಟಿ ನೌಕ ರರ ಚಿತ್ತ
Team Udayavani, Mar 15, 2018, 7:30 AM IST
ಟೊರಾಂಟೋ: ಉದ್ಯೋಗ ಅರಸಿ ಅಮೆರಿಕ ಪ್ರಯಾಣ ಬೆಳೆಸುವ ಭಾರತೀಯರ ಎಚ್1ಬಿ ವೀಸಾ ತಲೆನೋವು ಮುಂದುವರಿದಿದೆ. ಆದರೆ, ಈ ನಡುವೆಯೇ ಭಾರತ ಸೇರಿದಂತೆ ವಿದೇಶಿ ಟೆಕ್ಕಿಗಳಿಗೆ ಅವಕಾಶಗಳೇನು ಕೊರತೆ ಆದಂತಿಲ್ಲ. ಅತ್ತ ಕೆನಡಾ ಕೈಬೀಸುತ್ತಿರುವುದು ಒಳ್ಳೆಯ ಅವಕಾಶ ತೆರೆದುಕೊಳ್ಳುವ ಸಾಧ್ಯತೆ ಇದೆ ಎನ್ನುವ ನಿರೀಕ್ಷೆಯಲ್ಲಿ ಟೆಕಿಗಳಿದ್ದಾರೆ.
“ದ ಹಿಂದುಸ್ತಾನ್ ಟೈಮ್ಸ್’ ಪತ್ರಿಕೆ ವರದಿ ಮಾಡಿರುವ ಪ್ರಕಾರ ಕೆನಡಾ ಕಳೆದ ಜೂನ್ನಲ್ಲಿ ಆರಂಭಿಸಿದ ಗ್ಲೋಬಲ್ ಸ್ಕಿಲ್ ಯೋಜನೆ ಯಡಿ ಡಿಸೆಂಬರ್ 31ರ ತನಕ ಹೆಚ್ಚುಕಡಿಮೆ 4,400 ಅರ್ಜಿಗಳಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ವಿದೇಶಿ ವೃತ್ತಿಪರ ಹಾಗೂ ವ್ಯವಸ್ಥಾಪಕ ಕೌಶಲ್ಯ ಹೊಂದಿರುವ ವಿದೇಶಿಗರು ಅವಕಾಶವನ್ನು ಕಂಡು ಕೊಳ್ಳುತ್ತಿದ್ದಾರೆ. ಈ ಮೂಲಕ ಭಾರತೀಯರು ಬೇಡಿಕೆ ಉಳಿಸಿ ಕೊಳ್ಳುವಲ್ಲಿ ಯಶಸ್ವಿ ಯಾಗುತ್ತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ಇ-ಮೇಲ್ ಪ್ರತಿಕ್ರಿಯೆ ನೀಡಿರುವ ಕೆನಡಾ ವಕ್ತಾರ ಲಿಂಡ್ಸೆ ವೆಂಪ್, “ಜಾಗತಿಕ ಮಟ್ಟದಲ್ಲಿ ಕಂಪನಿಗಳು ಕೌಶಲ್ಯ ಇರುವ ಉದ್ಯೋಗಿಗಳ ಹುಡುಕಾಟದಲ್ಲಿ ಸ್ಪರ್ಧೆ ಯಲ್ಲಿವೆ. ಯುರೋಪಿಯನ್ ರಾಷ್ಟ್ರಗಳು ಹಾಗೂ ಅಮೆರಿಕ ಕೂಡ ಈ ಸ್ಪರ್ಧೆಯಲ್ಲಿದ್ದು, ಇದರಿಂದ ಭಾರತ ಸೇರಿ ವಿದೇಶಿ ಉದ್ಯೋಗಿ ಗಳಿಗೆ ಬೇಡಿಕೆ ಜಾಸ್ತಿ ಇದೆ’ ಎಂದಿದ್ದಾರೆ.
ಸಿಂಗಾಪುರದಲ್ಲಿ ಇನ್ನಷ್ಟು ಬಿಗಿ: ಇವೆಲ್ಲದರ ನಡುವೆ ಇದೀಗ ಸಿಂಗಾಪುರದಲ್ಲಿ ವಿದೇಶಿ ವೃತ್ತಿಪರ ಹಾಗೂ ಕೌಶಲ್ಯ ಹೊಂದಿರುವ ಪ್ರತಿಭೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅವಕಾಶ ನೀಡುವ ಪ್ರಕ್ರಿಯೆಯ ನಿಯಮಾ ವಳಿಯನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ. ಇದರಿಂದಾಗಿ ಭಾರತೀಯರು ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.