ರಕ್ತದಾನದಿಂದ ಮಾನವತೆಯ ಸೇವೆ: ಪ್ರೊ| ಪಾಸ್ಕಲ್ ಡೇಸಾ
Team Udayavani, Mar 15, 2018, 6:45 AM IST
ಶಿರ್ವ: ರಕ್ತದಾನ ಮಾಡುವುದು ಮಾನವೀಯ ಕಾರ್ಯವಾಗಿದ್ದು ಆಪತ್ಕಾಲದಲ್ಲಿ ಜೀವ ಉಳಿಸುವುದಕ್ಕಾಗಿ ರಕ್ತ ನೀಡ ಬೇಕು. ವಿದ್ಯಾರ್ಥಿಗಳು ರಕ್ತದಾನ ಮಾಡಿ ಮಾನವತೆಯ ಸೇವೆ ಮಾಡುವುದರ ಮೂಲಕ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದು ಕಾಲೇಜಿನ ನಿವೃತ್ತ ಉಪನ್ಯಾಸಕ ಮೇಜರ್ ಪ್ರೊ| ಪಾಸ್ಕಲ್ ಡೇಸಾ ಹೇಳಿದರು.
ಅವರು ಬುಧವಾರ ಲಯನ್ಸ್ ಕ್ಲಬ್, ಶಿರ್ವ-ಮಂಚಕಲ್, ಬ್ಲಿಡ್‌ಬ್ಯಾಂಕ್ ಕೆಎಂಸಿ ಮಣಿಪಾಲ, ಆರೋಗ್ಯ ಸಮಿತಿ ಶಿರ್ವ ಆರೋಗ್ಯ ಮಾತಾ ದೇವಾಲಯ, ಎನ್ನೆಸ್ಸೆಸ್, ರೇಂಜರ್-ರೋವರ್ ಘಟಕ, ವಿದ್ಯಾರ್ಥಿ ಸಂಘ , ಸ್ನಾತಕೋತ್ತರ ವಿಭಾಗ ಸಂತ ಮೇರಿ ಕಾಲೇಜು ಶಿರ್ವ ಇವುಗಳ ಸಹಯೋಗದಲ್ಲಿ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ 25ನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಸಂತ ಮೇರಿ ಮತ್ತು ಡಾನ್ ಬೊಸ್ಕೊ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ| ಫಾ| ಸ್ಟಾನಿ ತಾವ್ರೋ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ 25 ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ಆಯೋಜಿಸಿದ ಕಾಲೇಜಿನ ನಿವೃತ್ತ ಉಪನ್ಯಾಸಕ ಮೇಜರ್ ಪ್ರೊ| ಪಾಸ್ಕಲ್ ಡೇಸಾ ಅವರನ್ನು ಸಂಚಾಲಕ ರೆ| ಫಾ| ಸ್ಟಾನಿ ತಾವ್ರೋ ಸಮ್ಮಾನಿಸಿದರು. ಕೆಎಂಸಿ ಮಣಿಪಾಲದ ಡಾ| ಇಶಿತಾ ಗರ್ಗ್, ಪ್ರಾಂಶುಪಾಲ ಪ್ರೊ| ರಾಜನ್ ವಿ.ಎನ್., ಲಯನ್ಸ್ ಕ್ಲಬ್‌ನ ಅಧ್ಯಕ್ಷ ಜೂಲಿಯಾನ್ ರೋಡ್ರಿಗಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ವಿಲ್ಸನ್ ರೋಡ್ರಿಗಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿ’ಸೋಜಾ, ಯೂತ್ ರೆಡ್‌ಕ್ರಾಸ್ ಸೆಲ್‌ನ ನಿರ್ದೇಶಕಿ ಪ್ರೊ| ರತ್ನಾವತಿ ಲೀನಾ ಫೆರಾವೋ, ಅಸಿಸ್ಟೆಂಟ್ ಪ್ರೊ| ನಿರ್ಮಿತಾ ಕುಮಾರಿ, ಪ್ರೊ| ಜಗದೀಶ ಆಚಾರ್ಯ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್‌ನ ಸದಸ್ಯರು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ| ಪದ್ಮನಾಭ ಭಟ್ ಸ್ವಾಗತಿಸಿದರು. ಶ್ರೇಯಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಮೆಲ್ವಿನ್ ಅರಾನ್ಹ, ವಂದಿಸಿದರು. ಸುಮಾರು 175 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.