ನಗರಾಡಳಿತದಲ್ಲಿ ಬೆಂಗಳೂರೇ ಲಾಸ್ಟ್
Team Udayavani, Mar 15, 2018, 12:27 PM IST
ಬೆಂಗಳೂರು: ದೇಶದ 23 ನಗರಗಳ ಆಡಳಿತ ವ್ಯವಸ್ಥೆಯ ಪೈಕಿ ಬೆಂಗಳೂರಿಗೆ ಕೊನೆಯ ಸ್ಥಾನ ಸಿಕ್ಕಿದೆ. ಉದ್ಯಾನ
ನಗರಿಯ ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಆ್ಯಂಡ್ ಡೆಮಾಕ್ರಸಿ ನಡೆಸಿದ ಅಧ್ಯಯನದಲ್ಲಿ ಈ ವಿಷಯ
ಉಲ್ಲೇಖೀಸಲಾಗಿದೆ. ದೇಶದ 23 ಪ್ರಮುಖ ನಗರಗಳ ನಗರಾಡಳಿತ ಕುರಿತು “ಇಂಡಿಯಾಸ್ ಸಿಟಿ ಸಿಸ್ಟ
ಮ್ಸ್‌ನ ವಾರ್ಷಿಕ ಅಧ್ಯಯನ-2017′ ಎಂಬ ಅಧ್ಯಯನ ನಡೆಸಿತ್ತು. ಅದರಲ್ಲಿ ಪುಣೆ ಮೊದಲ ಸ್ಥಾನ ಪಡೆದಿದ್ದರೆ,
ಬೆಂಗಳೂರು ಕಡೆಯ ಸ್ಥಾನದಲ್ಲಿ ಇದೆ.
ಮಹಾನಗರಗಳ ಪೈಕಿ ಅತ್ಯಂತ ಕಳಪೆ ಪ್ರದರ್ಶನಕ್ಕಾಗಿ ಅತಿ ಕಡಿಮೆ ಅಂಕವನ್ನು ಬೆಂಗಳೂರು ಪಡೆದಿದೆ. ಹಣಕಾಸು ನಿರ್ವಹಣೆಯಲ್ಲಿ ಅತ್ಯಂತ ದುರ್ಬಲವಾಗಿರುವುದರಿಂದ ಕೆಳಗಿನ ಸ್ಥಾನ ಪಡೆದುಕೊಂಡಿದೆ.
ಈ ಅಧ್ಯಯನವನ್ನು ನಗರ ಯೋಜನೆ ಮತ್ತು ವಿನ್ಯಾಸ, ನಗರ ಸಾಮರ್ಥ್ಯ ಮತ್ತು ಸಂಪನ್ಮೂಲ, ಅಧಿಕಾರ ಮತ್ತು ನ್ಯಾಯಯುತ ರಾಜಕೀಯ ಪ್ರಾತಿನಿಧ್ಯತೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭಾಗವಹಿಸುವಿಕೆ ಎಂಬ ಪರಿಕಲ್ಪನೆಗಳ ವ್ಯಾಪ್ತಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ಮತ್ತು ಅಂಕಿಅಂಶ ಸಂಗ್ರಹಿಸುವ ಮೂಲಕ ನಡೆಸಲಾಗಿತ್ತು. ನಗರಗಳ ಪ್ರದರ್ಶನ ಆಧಾರದ ಮೇಲೆ 10 ಅಂಕಗಳನ್ನು ನೀಡಲಾಗಿತ್ತು. 23 ನಗರಗಳಲ್ಲಿ 12 ನಗರಗಳು ಅತ್ಯುತ್ತಮ ಮೂಲಸೌಕರ್ಯ ಮತ್ತು ಸೇವೆ ನೀಡುವಲ್ಲಿ ನಾಲ್ಕಕ್ಕಿಂತಲೂ ಕಡಿಮೆ ಅಂಕ ಗಳಿಸಿವೆ. ಬೆಂಗಳೂರು ಕೂಡ ಆ ಪಟ್ಟಿಯಲ್ಲಿದೆ ಎಂದು ಜನಾಗ್ರಹ ಸಂಸ್ಥೆ ಸಿಇಒ ಶ್ರೀಕಾಂತ್ ವಿಶ್ವನಾಥನ್ ತಿಳಿಸಿದ್ದಾರೆ.
ಬಹುತೇಕ ನಗರಗಳಲ್ಲಿ ನಗರ ಪಾಲಿಕೆಗಳಲ್ಲಿ ಸಿಬ್ಬಂದಿ ಕೊರತೆ ಇರುತ್ತದೆ. ಸರಾಸರಿ ಶೇ.35ರಷ್ಟು ಹುದ್ದೆಗಳು
ಭರ್ತಿಯಾಗದೇ ಉಳಿದಿರುತ್ತವೆ.
ನಗರಸಭೆಯ ಹಿರಿಯ ಅಧಿಕಾರಿಗಳಿಗೆ ತಮ್ಮ ಕಾರ್ಯಕ್ಷೇತ್ರ ಬಗ್ಗೆ ತಿಳಿವಳಿಕೆ ಕೊರಕೆ ಇರುತ್ತದೆ. ಮೇಯರ್ ಮತ್ತು
ಕೌನ್ಸಿಲ್‌ಗಳಿಗೆ ಸಂಪೂರ್ಣ ಅಧಿಕಾರ ಇರುವುದಿಲ್ಲ. ಜತೆಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ
ಅವರಿಗೆ ಇರುವ ಹೊಣೆಯ ಕುರಿತು ಸರಾಸರಿ 2.7 ವರ್ಷಗಳ ಅನುಭವ ಇರುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.