ಹರತಾಳದಲ್ಲಿ ಮನುಷ್ಯರನ್ನು ಸೋಲಿಸುವ ತಾಕತ್ತು ಇರುವ ಪ್ರಾಣಿ ಯಾವುದು?


Team Udayavani, Mar 15, 2018, 4:06 PM IST

logo-kannu.jpg

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ  ಜಗತ್ತಿನೊಳಗೊಂದು ಸುತ್ತು!

ಮನುಷ್ಯನೊಬ್ಬ ಹರತಾಳಕ್ಕೆ ಮುಂದಾದರೆ ಎಷ್ಟು ದಿನ ಕೂರಬಹುದು? ವಾರ? ತಿಂಗಳು? ಅಲ್ಲಿಗೆ, ಕೂರುವುದರ ಮೂಲಕ ಶುರುವಾಗಿದ್ದ ಅವನ ಹರತಾಳ ಮಲಗುವುದರ ಮೂಲಕ ಕೊನೆಯಾಗುತ್ತದೆಯಷ್ಟೆ! ಇಂದು ಎಲ್ಲೆಲ್ಲೂ ಸ್ಪರ್ಧೆಗಳೇ. ತರಗತಿಗಳಲ್ಲಿ, ಕಚೇರಿಗಳಲ್ಲಿ, ಮನೆಗಳಲ್ಲಿ, ರಿಯಾಲಿಟಿ ಶೋಗಳಲ್ಲಿ.. ಹಾಗೆಯೇ ಊಟದ ಸ್ಪರ್ಧೆಗಳಿರುವಂತೆ ಹಸಿವಿನ ಸ್ಪರ್ಧೆಯೂ ಹುಟ್ಟಿಕೊಂಡರೆ ಹೇಗಿರುತ್ತದೆ? ಅದರಲ್ಲೂ, ಮನುಷ್ಯರಿಗೂ ಪ್ರಾಣಿಗಳಿಗೂ ನಡುವೆ ಈ ಸ್ಪರ್ಧೆ ಇಟ್ಟರೆ ಟಿ.ಆರ್‌ .ಪಿ ಹೆಚ್ಚುವುದು ಖಂಡಿತ. ಪ್ರಾಣಿಗಳಿಂದ ಸೇವೆ ಮಾಡಿಸಿಕೊಳ್ಳುವ ಮನುಷ್ಯ ಆ ವಿಷಯದಲ್ಲಿ ಗೆದ್ದರೂ ಈ ಸ್ಪರ್ಧೆಯಲ್ಲಿ ಮಾತ್ರ ಗೆಲ್ಲಲಾರ. ಏಕೆ ಅಂತೀರಾ? ಹಾಗೊಂದು ವೇಳೆ ಇಂಥದ್ದೊಂದು ಸ್ಪರ್ಧೆ ನಿಜಕ್ಕೂ ಏರ್ಪಟ್ಟರೆ ಪ್ರಾಣಿಗಳು ತಮ್ಮ ಕಡೆಯಿಂದ ಅಖಾಡಕ್ಕಿಳಿಸುವುದು ಟರಾಂಟುಲ! ಅಂದರೆ ಜೇಡವನ್ನು!

ಚಿಕ್ಕ ಜೇಡಕ್ಕೆ ಯಾಕೆ ಇಷ್ಟೊಂದು ಮರ್ಯಾದೆ ಎನ್ನದಿರಿ. ಇದು ಅಂತಿಂಥ ಜೇಡವಲ್ಲ, ವಿಷಪೂರಿತ ಜೇಡವಿದು. ಆದರೆ ಎದುರಾಳಿಯನ್ನು ಕಚ್ಚಿ ಸಾಯಿಸಿ ಸ್ಪರ್ಧೆ ಗೆಲ್ಲುವಷ್ಟು ಬುದ್ಧಿವಂತ ಜೀವಿ ಇದಲ್ಲ. ಇದರ ಒಂದು ತಾಕತ್ತೇ ಸಾಕು ಈ ಸ್ಪರ್ಧೆಯನ್ನು ಗೆಲ್ಲಿಸಿಕೊಡಲು. ಕುತಂತ್ರಗಳ ಅಗತ್ಯ ಇದಕ್ಕಿಲ್ಲ. ಅದರದ್ದು ದೀರ್ಘ‌ಕಾಲ ಹಸಿವಿನಿಂದ ಇರುವ ತಾಕತ್ತು. ಟರಾಂಟುಲಗಳು ಅನ್ನಾಹಾರಗಳಿಲ್ಲದೆ ಎಷ್ಟು ದಿನ ಇರಬಲ್ಲವೆಂದು ನಿಮಗೆ ಗೊತ್ತಾದರೆ ನೀವು ಖಂಡಿತಾ ಹೌಹಾರುವಿರಿ. 

ಅದು,  ಬರೋಬ್ಬರಿ ಎರಡುವರ್ಷ ಒಂಬತ್ತು ತಿಂಗಳುಗಳ  ಕಾಲ ಏನೂತಿನ್ನದೇ ಇರಬಲ್ಲದು ಆದರೆ ಮನುಷ್ಯ ಇದನ್ನೂ ಬಿಟ್ಟಿಲ್ಲ. ಟರಾಂಟುಲಗಳಲ್ಲೂ ರುಚಿ ಕಂಡುಕೊಂಡಿದ್ದಾನೆ ಅದರ ಪರಿಣಾಮವನ್ನು ಆಫ್ರಿಕಾದ ರೆಸ್ಟೋರೆಂಟುಗಳಲ್ಲಿ ಕಾಣಬಹುದಾಗಿದೆ. ಅಲ್ಲಿ ಇವುಗಳನ್ನು ಹುರಿದು ಮಾರಾಟಕ್ಕೆ ಇಡಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಟರಾಂಟುಲಗಳಲ್ಲಿ ನೂರಾರು ಪ್ರಭೇದಗಳಿದ್ದು ಎಲ್ಲವೂ
ವಿಷಪೂರಿತವಲ್ಲ. ಹೀಗಾಗಿ ಅನಗತ್ಯ ಭಯ ಬೇಡ. ಅದೇನೇ ಇರಲಿ, ಈಗ ನೀವೇ ಯೋಚಿಸಿ. ಟರಾಂಟುಲ ವಿಷಪೂರಿತವೋ? ಇಲ್ಲಾ ಅದನ್ನೂ ಹುರಿದು ಮುಕ್ಕುವ ಮನುಷ್ಯ ವಿಷಪೂರಿತನೋ?

ಗೋಲ್ಡ್‌ ಫಿಷ್‌ ಅನ್ನು ಕತ್ತಲಲ್ಲಿರಿಸಬಾರದು ಏಕೆ?
ಗೃಹೋಪಯೋಗಿ ವಸ್ತುಗಳು ತಮ್ಮ ಹೊಳಪು ಕಳೆದುಕೊಳ್ಳದಂತೆ ಕಾಲ ಕಾಲಕ್ಕೆ ತೊಳೆಯುವುದು, ಪಾಲಿಷ್‌ ಮಾಡಿಸುವುದು ಇತ್ಯಾದಿಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಇಲ್ಲೊಂದು ಪ್ರಾಣಿ ಇದೆ. ಇದರ ವೈಶಿಷ್ಟéವೇನೆಂದರೆ ಕತ್ತಲಿನ ಸ್ಥಳದಲ್ಲಿ ಇವುಗಳನ್ನು ಇರಿಸಿದರೆ ಕೆಲ ಸಮಯದ ನಂತರ ತಮ್ಮ ಮೈ ಹೊಳಪನ್ನು ಕಳೆದುಕೊಳ್ಳುತ್ತವೆ. ಹೊಳಪು ಕಳೆದುಕೊಂಡರೆ ಯಾರುಗೇನು ನಷ್ಟ ಎನ್ನದಿರಿ. ಏಕೆಂದರೆ ಈ ಜೀವಿಗೆ ಮುಖ್ಯವಾಗಿ ಬೇಕಾಗಿರುವುದು ಇದೇ ಮೈಯ ಹೊಳಪು. ಈ ಜೀವಿಯೇ ನಾವು ನೀವು ತಂತಮ್ಮ ಮನೆಯ ಅಲಂಕಾರ ಹೆಚ್ಚಿಸಲು ಗಾಜಿನ ಬೋನಿನಲ್ಲಿ ಕೂಡಿ ಹಾಕುವ ಗೋಲ್ಡ್‌ ಫಿಶ್‌. ಇದು ಹೊಳಪು ಕಳೆದುಕೊಂಡರೆ ಪಾಲಿಶ್‌ ಮಾಡಲಾಗುವುದಿಲ್ಲ.

ಗೋಲ್ಡ್‌ ಫಿಶ್‌ ತನ್ನ ಚಿನ್ನದ ಹೊಳಪನ್ನು ಕಳೆದುಕೊಳ್ಳಬಾರದೆಂದರೆ ಬೆಳಕು ಇರುವ ಸ್ಥಳದಲ್ಲಿಯೇ ಅದನ್ನು ಇರಿಸುವುಸು ಸೂಕ್ತ. ಇಲ್ಲವಾದರೆ ಚಿನ್ನದ ಬಣ್ಣ ಕಳೆದುಕೊಂಡ ನಂತರ ಸಾಮಾನ್ಯ ಮೀನುಗಳಂತೆ ಕಾಣುವ ಗೋಲ್ಡ್‌ ಫಿಷ್‌ ಅನ್ನು ಯಾರು ತಾನೇ ಇಟ್ಟುಕೊಂಡಾರು? ಚಿನ್ನದ ಮೆರುಗು ಮಾಯವಾದಾಕ್ಷಣ ಗೋಲ್ಡ್‌ ಫಿಷ್‌, “ರೋಲ್ಡ್‌ ಗೋಲ್ಡ್‌ ಫಿಷ್‌’ ಆಗಿಬಿಡುವುದಿಲ್ಲ. ಎಲ್ಲವೂ ನಮ್ಮ ಭ್ರಮೆಯಷ್ಟೇ. ಆದರೆ, ವರ್ಣಭೇದ ಮಾಡುವ ಮನುಷ್ಯನಿಂದ ಬಣ್ಣ ಕಳೆದುಕೊಂಡ ಗೋಲ್ಡ್‌ಫಿಷ್‌ಗೆ ಆಪತ್ತು ಒದಗಬಾರದಲ್ಲ? 

ನಮ್ಮೊಂದಿಗೆ ನೆಗಡಿಯನ್ನು ಹಂಚಿಕೊಳ್ಳುವ ಪ್ರಾಣಿ ಯಾವುದು ಗೊತ್ತೇ?
ನಗುವನ್ನು ಸಾಂಕ್ರಾಮಿಕ ಅನ್ನುತ್ತಾರೆ ಅದು ಅತಿಯಾದರೆ ಮಾತ್ರ ಸಾಂಕ್ರಾಮಿಕ ಖಾಯಿಲೆ ಎಂದು ಅಪವಾದ ಹೊರಿಸಬಹುದು. ಹಾಗಾಗಿ
ಅಲ್ಲಿಯ ತನಕ ಸುಮ್ಮನಿರಿ. ನಗುವಿನಷ್ಟೇ ಸಾಂಕ್ರಾಮಿಕವಾದ, ಆದರೆ ಯಾರಿಗೂ ಬೇಡದ ಮತ್ತು ಬೇಡವೆಂದರೂ ಕಾಡುವ ಮತ್ತೂಂದು ವಿಚಾರವಿದೆ. ಇದು ನೆಗಡಿಗೆ ಸಂಬಂಧಿಸಿದ ಸಮಾಚಾರ. ನೆಗಡಿಯೂ ಸಾಂಕ್ರಾಮಿಕವಲ್ಲವೆ? ನೆಗಡಿಯಾಯ್ತು ಅಂದರೆ, ಆದವರಿಗಿಂತಲೂ ಹೆಚ್ಚಿನ ಕಾಳಜಿ ಆಗದವರಿಗೆ, ತಮಗೆ ಬರದಿರಲಪ್ಪಾ ಎಂದು. ನಿಮಗೆ ಗೊತ್ತಿದೆಯೋ, ಇಲ್ಲವೋ, ಈ ನೆಗಡಿ ನಿಮ್ಮಿಂದ ಕೇವಲ ಮನುಷ್ಯರಿಗೆ ಮಾತ್ರ ಹರಡುವುದಿಲ್ಲ, ಪ್ರಾಣಿಗಳಿಗೂ ಹರಡುತ್ತದೆ. ನಿಮ್ಮ ಜೊತೆ ನೆಗಡಿಯನ್ನು ಹಂಚಿಕೊಳ್ಳುವ ಪ್ರಾಣಿ ಗೊರಿಲ್ಲ.

ಒಂದೇ ಪ್ರಭೇದಕ್ಕೆ ಸೇರಿದ್ದ ನಾವುಗಳು ಅಂದರೆ ಮನುಷ್ಯ ಮತ್ತು ಗೊರಿಲ್ಲ ವಿಕಾಸಪಥದಲ್ಲಿ ಬೇರೆಯ ಹಾದಿ ಹಿಡಿದರೂ ಕೆಲವೊಂದು ವಿಚಾರಗಳಲ್ಲಿ  ಸಾಮ್ಯತೆ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಇದೊಂದು ಉತ್ತಮ  ನಿದರ್ಶನ. ಆದ್ದರಿಂದ ಮುಂದಿನ ಬಾರಿ ನೆಗಡಿಯಾದಾಗ  ಪ್ರೀತಿಪಾತ್ರರಿಂದ ದೂರವನ್ನು ಕಾಪಾಡಿಕೊಂಡಂತೆಯೇ  ಗೊರಿಲ್ಲಾಗಳಿಂದಲೂ ದೂರವಿರಿ. ಒಂದಕ್ಕಿಂತ ಹೆಚ್ಚು ಕಂಪ್ಯೂಟರ್‌ ಉಪಕರಣಗಳಿಗೆ ಹೊಂದುವ ಸಾಫ್ಟ್ವೇರನ್ನು ಕಂಪ್ಯಾಟಿಬಲ್‌ ಎನ್ನುತ್ತಾರೆ. ಅದರಂತೆಯೇ ಮನುಷ್ಯ ಮತ್ತು ಗೊರಿಲ್ಲಾಗೂ ಹರಡುವುದರಿಂದ ನೆಗಡಿಯನ್ನು ಕಂಪ್ಯಾಟಿಬಲ್‌ ಎನ್ನಬಹುದು. ಏನಂತೀರಾ!

*ಹರ್ಷ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.