ಸ್ಕಂದಗಿರಿ,ಅವುಲುಬೆಟ್ಟಚಾರಣಕ್ಕೆಅನುಮತಿಕಡ್ಡಾಯ
Team Udayavani, Mar 15, 2018, 5:42 PM IST
ಚಿಕ್ಕಬಳ್ಳಾಪುರ: ಚಾರಣ ಪ್ರಿಯರೇ ಹುಷಾರ್.. ನೀವು ಅರಣ್ಯ ಇಲಾಖೆ ಅನುಮತಿ ಇಲ್ಲದೇ ದೃಢಿಕೃತ ಮಾರ್ಗದರ್ಶಕರಿಲ್ಲದೇ ಜಿಲ್ಲೆಯ ಅರಣ್ಯ ಪ್ರದೇಶ ಅದರಲ್ಲೂ ಐತಿಹಾಸಿಕ ಸ್ಕಂದಗಿರಿ ಹಾಗೂ ಅವುಲುಬೆಟ್ಟಕ್ಕೆ ಚಾರಣ
ನಡೆಸಿದರೆ ನೀವು ಬೇಹುಗಾರಿಕೆ ಪಡೆಯಿಂದ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗುವುದು ಗ್ಯಾರೆಂಟಿ.
ಇತ್ತೀಚೆಗೆ ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕೆಲವು ಮಂದಿ ವಿದ್ಯಾರ್ಥಿಗಳು ಅರಣ್ಯ ಇಲಾಖೆ ಅನುಮತಿ ಪಡೆಯದೇ ಅರಣ್ಯ ಪ್ರವೇಶ ಮಾಡಿ ಕೈಗೊಂಡಿದ್ದ ಚಾರಣದ ವೇಳೆ ಅಕಸ್ಮಿಕವಾಗಿ ಉಂಟಾದ ಕಾಡ್ಗಿಚ್ಚಿಗೆ ಸಿಲುಕು ಮೃತ ಪಟ್ಟ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಅರಣ್ಯ ಕಾರ್ಯಪಡೆ ಈ ಆದೇಶವನ್ನು ಹೊರಡಿಸಿದ್ದು, ಅರಣ್ಯ ಪ್ರದೇಶದಲ್ಲಿ ಚಾರಣ ಕೈಗೊಳ್ಳಲು ಅವಕಾಶ ನೀಡುವ ಅಥವಾ ನಿಷೇಧಿಸುವ ಅಧಿಕಾರವನ್ನು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಹಿಸಿದೆ.
ಆದೇಶದಲ್ಲಿನಿದೆ?: ರಾಜ್ಯದಲ್ಲಿ ಕೂಡ ಅನಧಿಕೃತವಾಗಿ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡಲಾಗುತ್ತಿದೆಯೆಂಬ ದೂರುಗಳು ಸಾಕಷ್ಟು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಇಂತಹ ಅನಧಿಕೃತವಾದ ಟ್ರೇಸ್ ಪಾಸ್ ಅಥವಾ ಇಲಾಖೆ ಅಧಿಕಾರಿಗಳು ಯಾವುದೇ ಅನುಮತಿ ಯಾವುದೇ ಅನುಮತಿ ಇಲ್ಲದೇ ಅರಣ್ಯ ಪ್ರವೇಶ ಆಗದ ರೀತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸುವಂತೆ ತಿಳಿಸಿದೆ.
ಜೊತೆಗೆ ಟ್ರಕ್ಕಿಂಗ್ ಸ್ಥಳಗಳಲ್ಲಿ ಹೆಚ್ಚಿನ ಅನುಪಯುಕ್ತ ಕಸಕಡ್ಡಿ ಇದ್ದರೆ ತೆರವುಗೊಳಿಸುವಂತೆ ಬೇಸಿಗೆ ಮುಗಿಯುವರೆಗೂ ಟ್ರಕ್ಕಿಂಗ್ ಮಾರ್ಗಗಳ ಮೇಲೆ ನಿಗಾವಹಿಸಿ ಈಗಾಗಲೇ ಗುರುತಿಸಲಾದ ಟ್ರಕ್ಕಿಂಗ್ ಮಾರ್ಗಗಳಲ್ಲಿ ಮಾತ್ರ ಕ್ಯಾರಿಯಿಂಗ್ ಹಾಗೂ ಕ್ಯಾಪಾಸಿಟಿಗೆ ಅನುಗುಣವಾಗಿ ಟ್ರಕ್ಕಿಂಗ್‌ಗೆ ಅನುಮತಿ ನೀಡಲು ಸೂಚಿಸಿದೆ.
ಒಟ್ಟಿನಲ್ಲಿ ಬೇಸಿಗೆ ಆರಂಭದಲ್ಲಿಯೇ ತಮಿಳುನಾಡಿನಲ್ಲಿ ನಡೆದ ಕಾಡ್ಗಿಚ್ಚಿನಿಂದ 10 ಮಂದಿ ವಿದ್ಯಾರ್ಥಿಗಳು ಬಲಿಯಾದ ಪ್ರಕರಣ ರಾಜ್ಯದ ಅರಣ್ಯ ಇಲಾಖೆಗೆ ಪಾಠ ಕಲಿಸಿದ್ದು, ರಾಜ್ಯದ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ಕೈಗೊಳ್ಳುವ ಚಾರಣ ಪ್ರಿಯರ ರಕ್ಷಣಗೆ ಹಲವು ಮಾರ್ಗೋಪಾಯಗಳನ್ನು ಕೈಗೊಳ್ಳುವಂತೆ ಮಾಡಿದೆ.
ಪರಿಸ್ಥಿತಿ ನೋಡಿಕೊಂಡು ಕ್ರಮ: ಡಾ. ಮಂಜುನಾಥ್
ಅರಣ್ಯ ಪ್ರದೇಶದೊಳಗೆ ಚಾರಣ ನಡೆಸುವುದಕ್ಕೆ ಇಲಾಖೆ ಯಾವುದೇ ನಿಷೇಧ ಹೇರಿಲ್ಲ. ಆದರೆ, ಇಲಾಖೆ ಅನುಮತಿ ಪಡೆದು ಚಾರಣ ಕೈಗೊಳ್ಳುವುದು ಕಡ್ಡಾಯ. ಜೊತೆಗೆ ಸ್ಥಳೀಯ ಪರಿಸ್ಥಿತಿಯನ್ನು ನೋಡಿಕೊಂಡು ಬೇಸಿಗೆ ಮುಗಿಯುವವರೆಗೂ ಚಾರಣಕ್ಕೆ ಅವಕಾಶ ನೀಡಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಲು ಜಿÇÉೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ರಾಜ್ಯ ಅರಣ್ಯ ಪಡೆ ಅಧಿಕಾರ ನೀಡಿದೆ. ಅನಧಿಕೃತ ಚಾರಣ ನಡೆಸುವವರನ್ನು ಪತ್ತೆ ಮಾಡಲು ಬೇಹುಗಾರಿಕೆ ಪಡೆ ರಚಿಸಲು ಅರಣ್ಯ ಕಾರ್ಯಪಡೆ ಆದೇಶಿಸಿದೆ. ಚಿಕ್ಕಬಳ್ಳಾಪುರದ ಸ್ಕಂದರಿಗಿ ಬೆಟ್ಟದ ಚಾರಣಕ್ಕೆ ನಾವು ನಿಷೇಧ ಹೇರಿಲ್ಲ. ಪರಿಸ್ಥಿತಿ ನೋಡಿಕೊಂಡು ಕ್ರಮ ವಹಿಸುತ್ತೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಡಿ.ಮಂಜುನಾಥ ತಿಳಿಸಿದ್ದಾರೆ.
ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.