ಚೆಂದುಳ್ಳಿಗೆ ಈರುಳ್ಳಿ

Team Udayavani, Mar 16, 2018, 7:30 AM IST

a-13.jpg

ಈರುಳ್ಳಿ ಬಜ್ಜಿ , ಬೋಂಡ, ಪಕೋಡ ಓಕೆ, ಆದ್ರೆ ಹಸಿ ಈರುಳ್ಳಿ ಬೇಡಪ್ಪಾ ‘ ಅಂತ ದೂರ ಓಡದಿರಿ. ಯಾಕೆ ಗೊತ್ತಾ, ಈರುಳ್ಳಿ ಬರೀ ಕಣ್ಣೀರು ತರಿಸಲ್ಲ, ಮುಖದಲ್ಲಿ ನಗುವನ್ನೂ ತರುತ್ತೆ. ಈರುಳ್ಳಿಯ ಪ್ರಯೋಜನಗಳೂ ಅನೇಕ. ಈರುಳ್ಳಿ ಮಹಾತ್ಮೆ ಏನಂತ ಇಲ್ಲಿದೆ ನೋಡಿ.

ಕಾಂತಿಯುತ ಚರ್ಮ: ಈರುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ಸ್‌ , ಸಲರ್‌ ಮತ್ತು ವಿಟಮಿನ್‌ಗಳು ಚರ್ಮಕ್ಕೆ ಒಳ್ಳೆಯದು. ಈರುಳ್ಳಿ ರಸವನ್ನು ಲೇಪಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ರಕ್ತದ ಕಲ್ಮಶಗಳನ್ನು ಶುದ್ಧೀಕರಿಸುವುದರಿಂದ ಚರ್ಮದ ಸಮಸ್ಯೆಗಳು ದೂರಾಗುತ್ತವೆ.

ಚರ್ಮದ ಸುಕ್ಕು ನಿವಾರಣೆ: 30-40 ವರ್ಷಕ್ಕೆಲ್ಲಾ ಕೆಲವರ ಚರ್ಮ ಕಾಂತಿ ಕಳೆದುಕೊಂಡು, ಸುಕ್ಕು ಸುಕ್ಕಾಗುತ್ತದೆ. ಈರುಳ್ಳಿಯಲ್ಲಿನ ಆ್ಯಂಟಿಆಕ್ಸಿಡೆಂಟ್ಸ್‌ ಅಂಶ ಚರ್ಮ ನೆರಿಗೆ ಬೀಳುವುದನ್ನು ತಡೆಯುತ್ತದೆ. ಈರುಳ್ಳಿಯಲ್ಲಿರುವ ಎ, ಸಿ, ಇ ವಿಟಮಿನ್‌ ಕೂಡ ಚರ್ಮಕ್ಕೆ ಒಳ್ಳೆಯದು.

ಬಿಳುಪಿನ ತ್ವಚೆಗೆ: ಈರುಳ್ಳಿ ರಸಕ್ಕೆ ಅರಸಿನ ಸೇರಿಸಿ ಹಚ್ಚಿದರೆ ಚರ್ಮದ ಕಲೆ, ಪ್ಯಾಚ್‌ ಮತ್ತು ಡಾರ್ಕ್‌ ಪಿಗೆಟೇಶನ್‌ಗಳು ನಿವಾರಣೆಯಾಗಿ, ಚರ್ಮಕ್ಕೆ ಬಿಳುಪು ಸಿಗುತ್ತದೆ. ಸೂಕ್ಷ್ಮ ಚರ್ಮದವರು ಈರುಳ್ಳಿ ರಸದ ಜೊತೆಗೆ ಕಡಲೆಹಿಟ್ಟು , ಕೆನೆ ಸೇರಿಸಿ ಹಚ್ಚಿ.

ಮೊಡವೆ ಕಲೆ ನಿವಾರಣೆ: ಮೊಡವೆ, ಸುಟ್ಟಗಾಯದ ಕಲೆ ಮತ್ತು ಚರ್ಮದ ಅಲರ್ಜಿಗಳಿಗೆ ಈರುಳ್ಳಿ ರಸ ರಾಮಬಾಣ. ಈರುಳ್ಳಿ ರಸದ ಜೊತೆಗೆ ಆಲಿವ್‌ ಅಥವಾ ಅಲ್ಮಂಡ್‌ ಎಣ್ಣೆ ಸೇರಿಸಿ. ಫೇಸ್‌ಪ್ಯಾಕ್‌ನಂತೆ ಮುಖಕ್ಕೆ ಹಚ್ಚಿ.

ಸೊಂಪಾದ ಕೂದಲಿಗೆ: ಈರುಳ್ಳಿಯಲ್ಲಿನ ಸಲರ್‌ ಅಂಶ, ತಲೆಗೆ ರಕ್ತ ಸಂಚಲನೆ ಸರಾಗವಾಗಿಸುತ್ತದೆ. ಅದರಿಂದ, ಉದುರಿದ ಕೂದಲು ಮರುಹುಟ್ಟು ಪಡೆಯುತ್ತದೆ. ಈರುಳ್ಳಿ ರಸದ ಜೊತೆಗೆ ರೋಸ್‌ವಾಟರ್‌ ಸೇರಿಸಿ ಮಸಾಜ್‌ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.

ತಲೆಹೊಟ್ಟು ನಿವಾರಣೆ:  ತಲೆಹೊಟ್ಟಿನ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿರುವವರು ಅನೇಕ. ಅವರು ಮಾಡಬೇಕಾದ್ದಿಷ್ಟೆ , ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ , ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.

ಕೂದಲ ನೆರೆ ತಡೆಯಲು: ಕಲುಷಿತ ನೀರು, ಪೌಷ್ಟಿಕಾಂಶ ಕೊರತೆ ಹೀಗೆ ಬೇರೆ ಬೇರೆ ಕಾರಣಗಳಿಂದ ಕೂದಲು ಬೇಗ ಬಿಳಿಯಾಗುತ್ತದೆ. ಆಗ ಕೃತಕ ಬಣ್ಣ ಹಚ್ಚುವುದರ ಬದಲು ಈರುಳ್ಳಿ ರಸಕ್ಕೆ ಸಾಸಿವೆ ಎಣ್ಣೆ ಸೇರಿಸಿ ಹಚ್ಚಿ. ಕೂದಲಿಗೆ ನೈಸರ್ಗಿಕ ಶೈನ್‌ ಕೂಡ ಸಿಗುತ್ತದೆ.

ತುಟಿಯ ಆರೋಗ್ಯ:  ಕಪ್ಪಾದ ತುಟಿಗೆ ನೈಜ ಬಣ್ಣ ಸಿಗಲು, ಒಡೆದ ತುಟಿ ಗುಣವಾಗಲು ಈರುಳ್ಳಿ ಸಹಕಾರಿ. ಈರುಳ್ಳಿ ರಸದ ಜೊತೆಗೆ ವಿಟಮಿನ್‌ “ಇ’ ಎಣ್ಣೆ ಸೇರಿಸಿ ದಿನಾ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿ.

ಕಣ್ಣಿನ ಆರೋಗ್ಯ:  ಎ, ಸಿ, ಇ ವಿಟಮಿನ್‌ ಅಧಿಕವಾಗಿರುವ ಈರುಳ್ಳಿ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಈರುಳ್ಳಿಯಲ್ಲಿನ ಸಲ#ರ್‌ ಅಂಶ ಕೂಡ ಕಣ್ಣನ್ನು ಹಲವಾರು ಸಮಸ್ಯೆಗಳಿಂದ ರಸುತ್ತದೆ. 

ಟಾಪ್ ನ್ಯೂಸ್

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

tobacc

Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ  ಸಂಪುಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.