ಐಪಿಎಲ್ ಗೀತೆಯಲ್ಲಿ ಕನ್ನಡಿಗನ ಝಲಕ್
Team Udayavani, Mar 16, 2018, 6:10 AM IST
ಬೆಂಗಳೂರು: ಐಪಿಎಲ್ ಕಾವು ನಿಧಾನಕ್ಕೆ ಏರುತ್ತಿದೆ. ಚುಟುಕು ಕ್ರಿಕೆಟಿನ ಸಿಕ್ಸರ್, ಬೌಂಡರಿ ಸೇರಿ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ತವಕ ಅಭಿಮಾನಿಗಳಲ್ಲಿ ಗೂಡು ಕಟ್ಟಿಕೊಳ್ಳುತ್ತಿದೆ. ಈ ನಡುವೆ ಐಪಿಎಲ್ ಆಡಳಿತ ಮಂಡಳಿ ಕೂಟದ ಪ್ರಚಾರಕ್ಕೆ ಸಿದ್ಧಪಡಿಸಿದ ಗೀತೆಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಚುಟುಕು ಕ್ರಿಕೆಟಿನ ಅಪ್ಪಟ ಅಭಿಮಾನಿ ಕನ್ನಡಿಗ ಡಾ| ಸುಗುಮಾರ್ ಕುಮಾರ್ ಆಕರ್ಷಕ ವೇಷಭೂಷಣಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ ಮೊದಲ ಆವೃತ್ತಿಯಿಂದಲೂ ಮೈದಾನದಲ್ಲಿ ಅಭಿಮಾನಿಗಳ ನಡುವೆ ರೋಚಕ ಕ್ಷಣಗಳಲ್ಲಿ ಕುಣಿದು ಕುಪ್ಪಳಿಸಿ ಆನಂದಿಸುವ ಅಪ್ಪಟ ಕ್ರಿಕೆಟ್ ಅಭಿಮಾನಿ ಸುಗುಮಾರ್ ಕುಮಾರ್. ವಿಮಾನ ನಿಲ್ದಾಣದಲ್ಲಿರುವ ಲಾಜಿಸ್ಟಿಕ್ ಕಂಪೆನಿಯೊಂದರ ನಿರ್ವಹಣಾ ವಿಭಾಗದಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಸುಗುಮಾರ್ ಅವರ ಆನಂದದ ಕ್ಷಣಗಳನ್ನು ಹಾಡಿಗಾಗಿ ಸಿದ್ಧಪಡಿಸಲಾದ ವೀಡಿಯೋದಲ್ಲಿ ಬಳಸಿಕೊಳ್ಳಲಾಗಿದೆ. ತಮ್ಮ ಖುಷಿಯ ಕ್ಷಣಗಳನ್ನು ‘ಉದಯವಾಣಿ’ ಜತೆ ಸುಗುಮಾರ್ ಹಂಚಿಕೊಂಡಿದ್ದಾರೆ.
‘ವಿಶ್ವದ ಗಮನ ಸೆಳೆಯುವ ಪ್ರತಿಷ್ಠಿತ ಟೂರ್ನಿ ಐಪಿಎಲ್‌ನ ಅಧಿಕೃತ ಗೀತೆಯಲ್ಲಿ ನಾನು ಕೂಡ ಇದ್ದೇನೆಂದು ಹೇಳಿಕೊಳ್ಳುವುದೇ ಬಹಳ ಖುಷಿಯ ವಿಚಾರ. ಈಗಾಗಲೇ ಅನೇಕ ವೀಡಿಯೋ ಚಾನಲ್‌ಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಅನೇಕರು ದೂರವಾಣಿ ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಕ್ರೀಡಾ ಅಭಿಮಾನಿಯೊಬ್ಬನಿಗೂ ಈ ಮಟ್ಟದಲ್ಲಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ ಎನ್ನುವುದೇ ನನ್ನಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ’ ಎನ್ನುತ್ತಾರೆ ಸುಗುಮಾರ್ ಕುಮಾರ್. ಸುಗುಮಾರ್ ಕೇವಲ ಕ್ರಿಕೆಟ್ ಮಾತ್ರವಲ್ಲ, ಫುಟ್‌ಬಾಲ್ ಲೀಗ್, ಇಂಡಿಯನ್ ಸೂಪರ್ ಲೀಗ್‌ನಲ್ಲಿಯೂ ಬೆಂಗಳೂರು ಎಫ್ಸಿ ಪರ ಚಿಯರ್ ಮಾಡುತ್ತಿದ್ದಾರೆ.
ಮೇಕಪ್ ದುಬಾರಿ, ಆದರೂ ಬೇಕು
ಪಂದ್ಯದ ವೇಳೆ ಮೇಕಪ್‌ಗೆಂದೇ ಮೂರ್‍ನಾಲ್ಕು ಸಾವಿರ ಖರ್ಚು ಮಾಡುತ್ತೇನೆ ಎನ್ನುವ ಸುಗುಮಾರ್, ಕಳೆದ 10 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಒಂದೇ ಒಂದು ಪಂದ್ಯಕ್ಕೂ ಗೈರು ಹಾಜರಾಗಿದ್ದಿಲ್ಲ. ಆರ್‌ಸಿಬಿಯ ಅಪ್ಪಟ ಅಭಿಮಾನಿ ಆಗಿರುವ ಸುಗುಮಾರ್ ಈಗಾಗಲೇ “ಆರ್‌ಸಿಬಿ ಸೂಪರ್ ಫ್ಯಾನ್’ ಎಂದೇ ಜನಪ್ರಿಯರಾಗಿದ್ದಾರೆ. ಮೇಕಪ್, ಡ್ರೆಸ್‌ಗೆ ತಗಲುವ ವೆಚ್ಚವನ್ನೆಲ್ಲ ತಾವೇ ಭರಿಸಿಕೊಳ್ಳುವ ಇವರು ಈ ಹಿಂದೆ ದುಬೈನಲ್ಲಿ ಐಪಿಎಲ್, ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆದಾಗಲೂ ಹಾಜರಿದ್ದರು.
ಸೇನೆ ಸೇರಲು ಅಪ್ಪ ಬಿಡಲಿಲ್ಲ
ಪದವೀಧರರಾಗಿರುವ ಸುಗುಮಾರ್ ಕುಮಾರ್ ಇಂಡಿಯನ್ ಆರ್ಮಿ ಸೇರಿಕೊಳ್ಳುವ ಕನಸು ಕಂಡಿದ್ದರು. ಆದರೆ ಅವರ ಸೋದರ ಇವರಿಗಿಂತ ಮೊದಲು ಆರ್ಮಿ ಸೇರಿಕೊಂಡಿದ್ದರಿಂದ ತಂದೆ ಇದಕ್ಕೆ ಅವಕಾಶ ನೀಡಲಿಲ್ಲ. ಆದರೆ ಅಣ್ಣ ಆರ್ಮಿಯಲ್ಲಿದ್ದಾರೆ ಎಂದು ಖುಷಿಯಿಂದ ಹೇಳಿಕೊಳ್ಳುವ ಸುಗುಮಾರ್, “ಅಣ್ಣ ಯೋಧ, ಅವರಂತೆ ನಾನೂ ಸಮಾಜಸೇವೆ ಮಾಡಬೇಕೆನ್ನುವ ತುಡಿತ ನನ್ನಲ್ಲಿತ್ತು. ಕ್ರಿಕೆಟ್ ಆಟಗಾರನಾಗಿದ್ದ ಸಮಯದಲ್ಲಿ ಐಪಿಎಲ್ ನನ್ನನ್ನು ಆಕರ್ಷಿಸಿತು. ಆಗ ನಾನು ಹುಟ್ಟಿಬೆಳೆದ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉದ್ದೇಶದೊಂದಿಗೆ ಅಭಿಮಾನಿಯಾಗಿ ಕಾಣಿಸಿಕೊಳ್ಳಬೇಕೆನಿಸಿತು. ಇದಕ್ಕೆ ಐಪಿಎಲ್ ಒಳ್ಳೆಯ ವೇದಿಕೆಯೂ ಆಯಿತು. ಹೊರದೇಶ, ಹೊರ ರಾಜ್ಯದ ಅನೇಕ ಮಂದಿ ನನ್ನ ಬಳಿ ವೇಷಭೂಷಣಗಳ ಬಗ್ಗೆ ಕೇಳುತ್ತಾರೆ. ಆಗ ಕನ್ನಡನಾಡಿನ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ’ ಎನ್ನುತ್ತಾರೆ. ಐಪಿಎಲ್ ಟೂರ್ನಿಯ ವೇಳೆ ನನ್ನ ಈ ಪ್ರಯತ್ನಗಳಿಗೆ ಮನೆಯವರ ಹಾಗೂ ಪತ್ನಿ ಸುಮಾ ಸಹಕಾರ ಮರೆಯಲಾಗದ್ದು ಎಂದು ಹೇಳುತ್ತಾರೆ.
ವಿರಾಟ್ ನೆಚ್ಚಿನ ಆಟಗಾರ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೆಚ್ಚಿನ ಆಟಗಾರ ಎನ್ನುವ ಸುಗುಮಾರ್ ಕುಮಾರ್, 2016ರಲ್ಲಿ ನಡೆದ ಟೂರ್ನಿಯ ಗೋ ಗ್ರೀನ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ ಸಿಡಿಸಿರುವ ಶತಕ ಸಂಭ್ರಮದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುವಾಗ, ಅದು ಜೀವನದ ಮರೆಯಲಾಗದ ಕ್ಷಣ ಎನ್ನುತ್ತಾರೆ. ಆ ಪಂದ್ಯದಲ್ಲಿ ಕೊಹ್ಲಿ 109, ಎಬಿಡಿ 129 ರನ್ ಸಿಡಿಸಿದ್ದರು.
ರೆಡ್ ಇಂಡಿಯನ್ ಡ್ರೆಸ್ ಉಡುಗೊರೆ
ಸುಗುಮಾರ್ ಅವರ ಕ್ರಿಕೆಟ್ ಅಭಿಮಾನ ಕಂಡು ಅನಿವಾಸಿ ಭಾರತೀಯ ಹರೀಶ್ ಪೈ ಅಮೆರಿಕದಿಂದ ಆರ್‌ಸಿಬಿಯ ಅಧಿಕೃತ ಬಣ್ಣಕ್ಕೆ ಹೋಲುವ ರೆಡ್ ಇಂಡಿಯನ್ ಉಡುಪೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಪಿನ ಮೇಲೆ ಆರ್‌ಸಿಬಿ ಚಿಹ್ನೆಯನ್ನು ಕಲಾತ್ಮಕವಾಗಿ ನೂಲಿನಿಂದಲೇ ಬರೆಯಲಾಗಿದೆ.
ಸುಗುಮಾರ್ ಯಾಕೆ ಸ್ಪೆಷಲ್?
ಸುಗುಮಾರ್ ಕುಮಾರ್ ಅವರು ಶಿಸ್ತಿನ ಅಭಿಮಾನಿ. ಕ್ರಿಕೆಟ್ ಅಭಿಮಾನದ ಜತೆ ಜತೆಗೆ ಕನ್ನಡನಾಡಿನ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವ ಉದ್ದೇಶವನ್ನೂ ಹೊಂದಿದ್ದಾರೆ. ಸ್ಟೇಡಿಯಂನಲ್ಲಿ ಕ್ರಿಕೆಟ್ ಅಭಿಮಾನಿಯಾಗಿ ಗುರುತಿಸಿಕೊಳ್ಳುವುದರ ಜತೆಗೆ ಅವರ ವೇಷಭೂಷಣ ನೋಡಿಯೇ ಅವರ ಮೇಲೆ ಅಭಿಮಾನ ಬೆಳೆಸಿಕೊಂಡವರು ಲೆಕ್ಕವಿಲ್ಲದಷ್ಟು ಮಂದಿ. ಮೈಸೂರು ರಾಜ, ಕೆಂಪೇಗೌಡ ಸೇರಿ ಅನೇಕ ವೇಷದಲ್ಲಿ ಕಾಣಿಸಿಕೊಳ್ಳುವ ಸುಗುಮಾರ್ ಈ ಮೂಲಕ ನಾಡಿನ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವ ತಮ್ಮ ಉದ್ದೇಶಕ್ಕೆ ಐಪಿಎಲ್ ಟೂರ್ನಿಗಳನ್ನೇ ವೇದಿಕೆಯಾಗಿಸಿಕೊಳ್ಳುತ್ತಾರೆ.
– ಜಿಎಸ್‌ಬಿ ಅಗ್ನಿಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.