ವಿಟ್ಲ: ಹೈವೋಲ್ಟೇಜ್ ಪ್ರವಹಿಸಿ ಮನೆ ಅಗ್ನಿಗಾಹುತಿ
Team Udayavani, Mar 16, 2018, 11:19 AM IST
ವಿಟ್ಲ: ಇಲ್ಲಿನ ಪೊನ್ನೊಟ್ಟುನಲ್ಲಿ ಗುರುವಾರ ಬೆಳಗ್ಗೆ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸಿದ್ದರಿಂದ ಮನೆ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಪರಿಸರದ ಹಲವು ಮನೆಗಳ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೀಡಾಗಿವೆ.
ಮೂಲತಃ ಕೇರಳ ನಿವಾಸಿ, ವಿಟ್ಲದ ರಾಜಧಾನಿ ಜುವೆಲರಿ ಮಾಲಕ ತಾನಾಜಿ ಅವರಿಗೆ ಸೇರಿದ ಮನೆ ಸುಟ್ಟು ಹೋಗಿದೆ. ಬುಧವಾರ ಸಂಜೆ ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ವ್ಯತ್ಯಯಗೊಂಡಿತ್ತು. ಬೆಳಗ್ಗೆ ವಿದ್ಯುತ್ ಬಂದಾಗ ತಾನಾಜಿ ಮನೆಯ ಫ್ರಿಜ್‌ನ ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ನೂಟ್ ಸಂಭವಿಸಿದೆ. ಅಡುಗೆ ಕೋಣೆಯೊಳಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಫ್ರಿಜ್ ಸುಟ್ಟು ಹೋಯಿತು. ಮಾಡು (ಸ್ಲಾಬ್) ಮತ್ತು ಗೋಡೆ ಬಿರುಕು ಬಿಟ್ಟಿದ್ದು, ವಯರಿಂಗ್ ಸುಟ್ಟುಹೋಗಿದೆ. ಹಲವು ವಿದ್ಯುತ್ ಉಪಕರಣಗಳು ಸಹಿತ ಬೆಲೆಬಾಳುವ ವಸ್ತುಗಳು ನಾಶವಾಗಿವೆ.
ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯ ವಾಗಿಲ್ಲ. ಆದರೆ ಒಳಗಿದ್ದ ಎರಡು ಅನಿಲ ಸಿಲಿಂಡರ್‌ಗಳನ್ನು ಹೊರಗೆ ತಂದು ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ದುರಂತ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ.
ಸ್ಥಳಕ್ಕೆ ವಿಟ್ಲ ಮೆಸ್ಕಾಂ ಉಪವಿಭಾಗದ ಎಂಜಿನಿಯರ್ ಪ್ರವೀಣ್ ಜೋಷಿ, ಶಾಖಾಧಿಕಾರಿ ವಸಂತ, ಪ.ಪಂ. ಅಧ್ಯಕ್ಷ ಅರುಣ್ ಎಂ. ವಿಟ್ಲ, ವಿಟ್ಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ, ಗ್ರಾಮ ಕರಣಿಕ ಪ್ರಕಾಶ್ ಮೊದಲಾದವರು ಭೇಟಿ ನೀಡಿದರು. ಸುಮಾರು 15 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಹಲವು ಮನೆಗಳಿಗೆ ಹಾನಿ
ಹೈವೋಲ್ಟೆàಜ್ ಕಾರಣದಿಂದಾಗಿ ಪರಿಸರದ ವತ್ಸಲಾ ಅವರ ಫ್ರಿಜ್, ಆರೀಫ್ ಖಾನ್ ಅವರ ವಿದ್ಯುತ್ ಉಪಕರಣಗಳು, ಇಸ್ಮಾಯಿಲ್ ಸಾಹೇಬ್ ಅವರ ಪಂಪ್‌ಸೆಟ್, ಗಂಗಾಧರ್ ಅವರ ಪಂಪ್, ಲಿಂಗಪ್ಪ ಅವರ ಮಿಕ್ಸಿ , ಗಿರೀಶ್ ಅವರ ವಿದ್ಯುತ್ ಉತ್ಪನ್ನಗಳಿಗೆ ಹಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.