ಕೋಟೆ ಪುರಾತತಕ್ವೆ , ಕಂದಕ ಕಂದಾಯ ಇಲಾಖೆಗೆ!
Team Udayavani, Mar 16, 2018, 11:58 AM IST
ರಾಯಚೂರು: ಅವೈಜ್ಞಾನಿಕ ನಿಯಮಗಳಿಂದ ಸಾರ್ವಜನಿಕ ಆಸ್ತಿ ಹೇಗೆ ದುರ್ಬಳಕೆ ಆಗುತ್ತದೆ ಎನ್ನಲಿಕ್ಕೆ ಇಲ್ಲಿದೆ ಉತ್ತಮ ನಿದರ್ಶನ. ಪುರಾತತ್ವ ಇಲಾಖೆ ಅಧೀನದಲ್ಲಿರಬೇಕಾದ ಕೋಟೆಯ ಕಂದಕ ಜಾಗ ಕಂದಾಯ ಇಲಾಖೆ ಸೇರಿದ್ದು, ಇದರಿಂದ ಕಂದಕ ಒತ್ತುವರಿಯಾಗುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ.
ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಯಚೂರು ಕೋಟೆಗೆ ಈಗ ಒತ್ತುವರಿದಾರರ ಕಾಟ ಶುರುವಾಗಿದೆ. ಆದರೆ, ಇದನ್ನು ತಡೆಯಬೇಕಾದ ಇಲಾಖೆಗೆ ಅಧಿಕಾರಗಳಿಲ್ಲದೇ ಕೈಕಟ್ಟಿ ಕೂಡುವ ಪರಿಸ್ಥಿತಿ ಇದೆ. ಇಲಾಖೆಗಳಲ್ಲಿನ ಸಮನ್ವಯ
ಕೊರತೆಯಿಂದ ಕಂದಕ ಸ್ಥಳ ಪರರ ಸ್ವತ್ತಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಗಿ ಪಡೆದು ಪುರಾತತ್ವ ಇಲಾಖೆ ಗಮನಕ್ಕಿಲ್ಲದಂತೆ ಕಂದಕದ ಆಸುಪಾಸು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಕ್ಕೆ ಆಕ್ರಮಿಸಿಕೊಳ್ಳಲಾಗುತ್ತಿದೆ.
ಏನಿದು ಸಮಸ್ಯೆ?: ರಾಯಚೂರು ಕೋಟೆ ನಿರ್ಮಾಣವಾಗಿದ್ದು 13ನೇ ಶತಮಾನದಲ್ಲಿ. ಕಾಕತೀಯ ವಂಶದ ಮಹಾರಾಣಿ ರುದ್ರಮ್ಮದೇವಿ ಅವಧಿಯಲ್ಲಿ ಈ ಕೋಟೆ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ನಂತರ ಈ ಪ್ರದೇಶ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿತು.
19ನೇ ಶತಮಾನದ ಆರಂಭದಲ್ಲಿ ಇಲ್ಲಿನ ಕೆಲ ಸ್ಮಾರಕಗಳನ್ನು ಸಾರ್ವಜನಿಕ ಆಸ್ತಿ ಎಂದು ಘೋಷಿಸಲಾಯಿತು. ಆಗ ಅದರಲ್ಲಿ ಸ್ಮಾರಕವನ್ನು ಮಾತ್ರ ಉಲ್ಲೇಖೀಸಿ ಅಕ್ಕಪಕ್ಕದ ಸ್ಥಳಗಳನ್ನು ಸೇರಿಸಲಿಲ್ಲ. ಅಲ್ಲದೇ, ಆಗ ಚಾಲ್ತಿಯಲ್ಲಿದ್ದ ಉರ್ದು ಭಾಷೆಯಲ್ಲೇ
ಎಲ್ಲ ದಾಖಲೆಗಳನ್ನು ರಚಿಸಲಾಯಿತು. ಆಗ ಕೋಟೆ ಅಕ್ಕಪಕ್ಕದ ಸ್ಥಳವೆಲ್ಲ ಕಂದಾಯ ಇಲಾಖೆಗೆ ಒಳಪಟ್ಟರೆ ಕೆಲವರು ತಮ್ಮ ಸ್ವಂತಕ್ಕೆ ಮಾಡಿಕೊಂಡರು. ಆದರೆ, ಕಾಲಾನುಕ್ರಮೇಣ ಈ ಕೋಟೆ ಕಂದಕಗಳು ಒತ್ತುವರಿಯಾಗುತ್ತಲೇ ಇದೆ.
25ಕ್ಕೂ ಅಧಿಕ ಪ್ರಕರಣಗಳು: ಕೋಟೆ ಮತ್ತು ಕಂದಕ ಒತ್ತುವರಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 25ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯ ಹಂತದಲ್ಲಿವೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯ
ತಡೆಯಾಜ್ಞೆ ನೀಡಿದೆ. ಹೀಗಾಗಿ ವಿಚಾರಣೆಗೆ ಬಾರದೆ ದಿನಾಂಕ ಮೂಂದೂಡುತ್ತಲೇ ಬರಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಸ್ಥಳ ನಮ್ಮ ಹೆಸರಲ್ಲಿಯೇ ಇದೆ ಎಂದು ಸಾಕಷ್ಟು ಜನ ನ್ಯಾಯಾಲಯ ಮೊರೆ ಹೋಗಿದ್ದಾರೆ.
ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜಾಗೆ, ಕೋಟೆ ಒತ್ತುವರಿ ತಡೆಗೆ ಯಾವುದೇ ಸ್ಮಾರಕದಿಂದ 100 ಮೀ. ಅಂತರದಲ್ಲಿ ಕಟ್ಟಡ ಕಟ್ಟಬಾರದು ಎಂದಿದ್ದರೂ ಕಂದಾಯ ಇಲಾಖೆಯಲ್ಲಿ ಆಸ್ತಿ ಖಾಸಗಿಯವರ ಹೆಸರಲ್ಲಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಹೀಗಾಗಿ ನಗರಸಭೆಯಿಂದ ಸುಲಭಕ್ಕೆ ಪರವಾನಗಿಸಿಗುತ್ತಿದೆ. ಕೋಟೆ ಸುತ್ತಲಿನ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡದಂತೆ ಪ್ರಾಚ್ಯವಸ್ತು ಇಲಾಖೆ ಸಾಕಷ್ಟು ಬಾರಿ ಮನವಿ ಮಾಡಿದೆ.
ಪ್ರಾಚ್ಯವಸ್ತು ಇಲಾಖೆಯಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಪಡೆದವರು ಮಾತ್ರ ಕಟ್ಟಡ ನಿರ್ಮಿಸಬೇಕು. ನೀವು ಪರವಾನಗಿ ನೀಡುವ ಮುನ್ನ ಪುರಾತತ್ವ ಇಲಾಖೆಯಿಂದ ಎನ್‌ಒಸಿ ಪಡೆಯಲು ಸೂಚಿಸುವಂತೆ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಂದಕ ಪರರ ಆಸ್ತಿ ಎನ್ನುವಂತಾಗಿದೆ ಪುರಾತತ್ವ ಇಲಾಖೆ ಸ್ಥಿತಿ. ಇನ್ನಾದರೂ ಜಿಲ್ಲಾ ಧಿಕಾರಿಗಳು ಈ ವಿಚಾರದಲ್ಲಿ ಕಠಿಣ ನಿಲವು ತಾಳಬೇಕು. ಇಲ್ಲವಾದಲ್ಲಿ ಕಂದಕ ಎಂಬುದು ಕೆಲವೇ ವರ್ಷಗಳಲ್ಲಿ ಕಾಣೆಯಾಗುವುದರಲ್ಲಿ
ಸಂದೇಹಗಳಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಕೋಟೆ ಕಂದಕದ ಸ್ಥಳ ಒತ್ತುವರಿ ಮಾಡಲು ಬಿಡುವುದಿಲ್ಲ. ಈ ಹಿಂದೆ ನಗರಸಭೆ ಪರವಾನಗಿ ನೀಡಿರುವ ಬಗ್ಗೆ ಗಮನಕ್ಕಿಲ್ಲ. ಆದರೆ, ಹೊಸದಾಗಿ ಮಾತ್ರ ಯಾವುದೇ ಪರವಾನಗಿ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಕಂದಕ ಒತ್ತುವರಿಗೆ ಆಸ್ಪದ ನೀಡುವುದಿಲ್ಲ. ಹಿಂದೆ ನೀಡಿರುವ ಪರವಾನಗಿಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕ್ಕೆ ಸೂಚನೆ ನೀಡಲಾಗುವುದು.
ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ ರಾಯಚೂರು
ಪುರಾತತ್ವ ಇಲಾಖೆ ಬರೆದ ಪತ್ರದ ಬಗ್ಗೆ ಗಮನಕ್ಕಿಲ್ಲ. ನಾನು ಈಚೆಗೆ ಅಧಿಕಾರ ಸ್ವೀಕರಿಸಿದ್ದು, ಹೊಸದಾಗಿ ಯಾರಿಗೂ ಪರವಾನಗಿ ನೀಡಿಲ್ಲ. ಈಚೆಗೆ ಒಬ್ಬರು ಕಟ್ಟಡ ನಿರ್ಮಿಸುತ್ತಿರುವುದು ಗಮನಕ್ಕೆ ಬಂದಾಗ ತೆರವುಗೊಳಿಸಲಾಯಿತು. ಈ ಕೂಡಲೇ
ಪುರಾತತ್ವ ಇಲಾಖೆಗೆ ಪ್ರತಿಕ್ರಿಯಿಸುತ್ತೇನೆ.
ರಮೇಶ ನಾಯಕ, ನಗರಸಭೆ ಪೌರಾಯುಕ
ಸಿದ್ದಯ್ಯಸ್ವಾಮಿ ಕುಕನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗ್ರಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.