ಆರ್ಥಿಕ ನೆರವಿಲ್ಲದೆ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭವಲ್ಲ
Team Udayavani, Mar 16, 2018, 2:47 PM IST
ಮಂಗಳೂರು : ವಿದ್ಯಾರ್ಥಿಗಳಿಂದ ಯಾವುದೇ ರೀತಿಯಲ್ಲಿ ಆರ್ಥಿಕ ನೆರವನ್ನು ಪಡೆಯದೆ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ನವಭಾರತ ರಾತ್ರಿ ಪ್ರೌಢಶಾಲೆ ಇದನ್ನು ಸಾಧಿಸಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಹೇಳಿದರು.
ನಗರದ ರಥಬೀದಿಯಲ್ಲಿರುವ ನವಭಾರತ ರಾತ್ರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದ ಅವರು, ನನಗೂ ಈ ಶಾಲೆಗೂ ಕಳೆದ ಅನೇಕ ವರ್ಷಗಳಿಂದ ಸಂಬಂಧವಿದೆ. ಈ ಶಾಲೆಯ ಸೃಷ್ಟಿಕರ್ತ ಖಾಲಿದ್ ಮಹಮ್ಮದ್ ಭಗವಂತ ಮೆಚ್ಚುವ ಸೇವೆ ಮಾಡಿದ್ದಾರೆ ಎಂದು ತಿಳಿಸಿದರು.
ಕಳೆದ 75 ವರ್ಷಗಳ ಹಿಂದೆ ಅನೇಕರಿಗೆ ವಿದ್ಯಾಭ್ಯಾಸಕ್ಕೆ ತುಂಬಾ ಕಷ್ಟವಿತ್ತು. ಮನೆಯಲ್ಲಿ ಬಡತನವಿದ್ದ ಸಮಯದಲ್ಲಿ ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗುವ ಅನಿವಾರ್ಯತೆ ಹಲವಾರು ಮಂದಿಗಿತ್ತು. ಆಗ ಅವರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದರು. ಅಂತಹವರಿಗೆ ಬೆಳಕಾಗಿ ರಾಜ್ಯದಲ್ಲೇ ಮೊದಲ ರಾತ್ರಿ ಪ್ರೌಢಶಾಲೆಯಾಗಿ ಹುಟ್ಟಿಕೊಂಡದ್ದು ನವಭಾರತ ಶಾಲೆ ಎಂದು ಹೇಳಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ| ಪಿ.ವಿ. ಶೆಣೈ ಮಾತನಾಡಿ, ಈ ಸಂಸ್ಥೆಯು ಕೇವಲ ನಾಲ್ಕು ಮಂದಿ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ, ರಾಜ್ಯದಲ್ಲೇ ಮೊದಲ ರಾತ್ರಿ ಪ್ರೌಢಶಾಲೆಯಾಗಿ ಹೊರಹೊಮ್ಮಿದೆ. ಸದ್ಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಗತಿ, ಯಕ್ಷಗಾನ, ಯೋಗಾಸನ, ಎಸ್ಎಸ್ಎಲ್ಸಿ ಕೋಚಿಂಗ್ ಕಲಿಸುತ್ತಿದ್ದೇವೆ. ವಿದ್ಯಾರ್ಥಿಗಳಿಂದ ನಯಾ ಪೈಸೆ ತೆಗೆದುಕೊಳ್ಳದೆ ದಾನಿಗಳ ಹಣದಿಂದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ನವಭಾರತ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ| ಬಿ. ಅಹಮದ್ ಹಾಜಿ ಮೊಹಿಯುದ್ದೀನ್ ತುಂಬೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ವಿಲಾಸ ನಾಯಕ್, ಕೈಂಡ್ ಫೌಂಡೇಶನ್ ಕಾರ್ಯದರ್ಶಿ ಡಾ| ಪಿ. ಕೇಶವನಾಥ, ಸಂಸ್ಥೆಯ ಸಂಚಾಲಕ ಎಂ. ರಾಮಚಂದ್ರ ಸಹಿತ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಬಯಲಾಟ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.