ಸಾಂಪ್ರದಾಯಿಕ ದಿರಿಸಿನೊಂದಿಗೆ ಯುಗಾದಿ ಆಚರಿಸಿ
Team Udayavani, Mar 16, 2018, 4:43 PM IST
ಇನ್ನೇನು ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರುತ್ತಿದ್ದು, ಹಬ್ಬಕ್ಕೆ ಈಗಾಗಲೇ ಅನೇಕರು ಸಜ್ಜಾಗುತ್ತಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ನೂತನ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂತಸದಿಂದ ಆಚರಿಸಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿವೆ. ಹಬ್ಬಕ್ಕೆಂದೇ ಹೊಸ ದಿರಿಸು ಖರೀದಿಯಂತೂ ಜೋರಾಗಿದೆ. ಮಾಲ್‌ಗಳು ಸಹಿತ ಶಾಪಿಂಗ್ ಕಾಂಪ್ಲೆಕ್ಸ್‌ಗಳು ಪ್ರತಿನಿತ್ಯ ಜನಜಂಗುಳಿಯಿಂದ
ಕೂಡಿವೆ.
ಯುಗಾದಿ ಹಬ್ಬದ ದಿನ ಬೆಳಗ್ಗೆಯೇ ಮನೆಯ ಮುಂದೆ ರಂಗೋಲಿಯನ್ನಿಡುವುದು ಸಂಪ್ರದಾಯ. ಮುಂಜಾನೆ ಬೇಗ ಎದ್ದು ಎಣ್ಣೆ, ಸೀಗೇಕಾಯಿಯಿಂದ ಅಭ್ಯಂಜನ ಮಾಡುತ್ತಾರೆ. ಅನಂತರ ಹಬ್ಬದ ಮೆರುಗಿಗೆ ಸಾಂಪ್ರದಾಯಿಕ ಉಡುಗೆಗಳನ್ನು ತೊಡುವುದು ಸಾಮಾನ್ಯ ಟ್ರೆಂಡ್. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲೂ ಸಾಂಪ್ರದಾಯಿಕ ದಿರಿಸಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಸಾಂಪ್ರದಾಯಿಕ ಉಡುಪುಗಳಲ್ಲೇ ವಿವಿಧ ಮಾದರಿಯ ಆಯ್ಕೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಇದಕ್ಕೆ ತಕ್ಕಂತೆಯೇ ಶಾಪಿಂಗ್ ಮಾಲ್ ಗಳು ಕೂಡ ರೆಡಿಯಾಗಿದೆ.
ಜರಿ ಪಂಚೆಯಲ್ಲಿ ಹಬ್ಬ ಆಚರಣೆ
ರಾಜ್ಯದಲ್ಲಿ ನಗರ ಪ್ರದೇಶದಲ್ಲಿ ಪಂಚೆ ಉಡುವವರು ಕಡಿಮೆಯಾದರೂ, ಗ್ರಾಮೀಣ ಪ್ರದೇಶದಲ್ಲಿ ಈ ಪದ್ಧತಿ ಇಂದಿಗೂ ಇದೆ. ಪುರುಷರು ಜರಿಪಂಚೆಯನ್ನು ತೊಟ್ಟು ಹಬ್ಬದಲ್ಲಿ ಕಂಗೊಳಿಸುತ್ತಾರೆ. ಯುಗಾದಿ ಹಬ್ಬದ ದಿನ ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವುದರಿಂದ ಸಾಂಪ್ರದಾಯಿಕ ಬಟ್ಟೆಗಳನ್ನು ಹೆಚ್ಚಾಗಿ ಉಡುತ್ತಾರೆ. ಹೀಗಿದ್ದಾಗ ಪುರುಷರು ಪಂಚೆಗಳನ್ನೇ ಮೊದಲ ಆಯ್ಕೆ ಮಾಡುತ್ತಿದ್ದಾರೆ.
ಪಂಚೆಯಲ್ಲಿಯೂ ವಿವಿಧ ಮಾದರಿಗಳು ಮಾರುಕಟ್ಟೆಗೆ ಬಂದಿವೆ. ಸೊಂಟದ ಸುತ್ತ ವೆಲೊðà ಅಳವಡಿಸಿದ ಪಂಚೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ದೊಡ್ಡವರು ಮಾತ್ರವಲ್ಲದೆ, ಮಕ್ಕಳು ಕೂಡ ಯುಗಾದಿ ಹಬ್ಬದ ದಿನ ಪಂಚೆ ಧರಿಸಿ ಸಂಭ್ರಮಿಸುತ್ತಾರೆ. ಬಿಳಿ ಪಂಚೆಗೆ ಮ್ಯಾಚಿಂಗ್ ಅಂಗಿಯನ್ನು ಧರಿಸಬೇಕು. ಸಾಮಾನ್ಯವಾಗಿ ರೇಷ್ಮೆ ಅಂಗಿ, ಜುಬ್ಬ, ಕಾಟನ್ ಅಂಗಿಗಳು ಸರಿ ಹೊಂದುತ್ತವೆ.
ಹಬ್ಬದ ಸಮಯದಲ್ಲಿ ನಾವು ಕೂಡ ಮಿರ ಮಿರ ಮಿಂಚಬೇಕು ಎಂಬ ಖುಷಿ ಮಕ್ಕಳಲ್ಲಿಯೂ ಇರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮಕ್ಕಳ ಧೋತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಮಕ್ಕಳಿಗೆ ಹಬ್ಬದ ಸಮಯದಲ್ಲಿ ರೇಷ್ಮೆ ಜರಿ ಅಥವಾ ಅಂಚಗಳುಳ್ಳ ಗಾಢ ಧೋತಿಗೆ ಎಂಬ್ರಾಯ್ಡರಿ, ಸ್ಟೋನ್ ವರ್ಕ್ ಇರುವಂತಹ ಟಾಪ್ ಮ್ಯಾಚ್ ಆಗುತ್ತದೆ. ಇದಲ್ಲದೆ ಪ್ರಿಂಟೆಡ್ ಧೋತಿ, ತಿಳಿ ಬಣ್ಣದ ಟಾಪ್, ಟೀಶರ್ಟ್‌ಗಳು ಮ್ಯಾಚಿಂಗ್ ಎನಿಸುತ್ತದೆ.
ಅಂದ ಹೆಚ್ಚಿಸುವ ಮಹಿಳೆಯರ ದಿರಿಸು
ಹಬ್ಬ ಬಂತೆಂದರೆ ಹೆಣ್ಮಕ್ಕಳಿಗಂತೂ ಖುಷಿಯೋ ಖುಷಿ. ಹೊಸ ಉಡುಗೆ ತೊಟ್ಟು ಮಿಂಚುವುರದಲ್ಲಿ ಸಂಭ್ರಮ. ಯುವತಿಯರು ಯುಗಾದಿ ಹಬ್ಬದ ಕಳೆ ಮತ್ತಷ್ಟು ಹೆಚ್ಚಿಸಲು ಲೆಹಾಂಗಕ್ಕೆ ಮೊರೆ ಹೋಗುತ್ತಿದ್ದಾರೆ. ಲೆಹಾಂಗ ಜತೆ ಮೆಟಲ್ ಒಡವೆ, ಜುಮ್ಕಿ, ಸರ, ಬಳೆ ತೊಟ್ಟರೆ ಅದರ ಗಮ್ಮತ್ತೇ ಬೇರೆ. ಇನ್ನೂ ಕೆಲವು ಮಹಿಳೆಯರು ಉದ್ದನೆಯ ಲಂಗ ಖರೀದಿ ಮಾಡುತ್ತಿದ್ದಾರೆ. ಇದಕ್ಕೆಂದೇ ಮಾರುಕಟ್ಟೆಯಲ್ಲಿ ಜೈಪುರಿ ಬಂಧೇಜಿ, ಗೋಟಾ ಪಾಟಿ, ಡಿಜಿಟಲ್ ಪ್ರಿಂಟ್‌ಗಳಲ್ಲಿ ಉದ್ದನೆಯ ಲಂಗಗಳು ಲಭ್ಯವಿವೆ.
ಭಾರತೀಯ ಸಾಂಪ್ರದಾಯಿಕ ನಾರಿಯಂತೆ ಸೀರೆಯೊಂದಿಗೆ ಯುಗಾದಿ ಆಚರಿಸುವುದು ಕೂಡ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಹಿಳೆಯ ನೆಚ್ಚಿನ ಸಂಗಾತಿ ಸೀರೆಯಾಗಿದ್ದು, ಗಾಢ ಮತ್ತು ಹೊಳೆಯುವ ಸೀರೆಗಳನ್ನೇ ಖರೀದಿ ಮಾಡಲಾಗುತ್ತದೆ. ಅದರಲ್ಲೂ ಕಸೂತಿ ಹೊಂದಿದ ಕಿತ್ತಳೆ, ಕೆಂಪು, ಹಸುರು ಬಣ್ಣದ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿವೆ.
ಹಬ್ಬಕ್ಕೆ ಅನೇಕ ಆಫರ್‌ಗಳು
ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬಕ್ಕೆ ಖರೀದಿಸುವ ಬಟ್ಟೆಗಳ ಮೇಲೆ ಅನೇಕ ಆಫರ್‌ಗಳನ್ನು ನೀಡಿದ್ದಾರೆ. ಕೆಲವೆಡೆ ಒಂದು ಬಟ್ಟೆ ಕೊಂಡರೆ ಮತ್ತೂಂದು ಉಚಿತವಾಗಿದ್ದರೆ ಮತ್ತೂ ಕೆಲವೆಡೆಗಳಲ್ಲಿ ಶೇ. 15, 20 ಮತ್ತು 30ರಷ್ಟು ಆಫರ್ ನೀಡಲಾಗಿದೆ. ಇವಿಷ್ಟೇ ಅಲ್ಲದೆ ಆನ್‌ಲೈನ್ ಶಾಪಿಂಗ್ ಪ್ರಿಯರಿಗೂ ಖರೀದಿಸುವ ಬಟ್ಟಗಳ ಮೇಲೆ ಆಫರ್‌ಗಳ ಸುರಿಮಳೆಯನ್ನೇ ನೀಡಲಾಗಿದೆ.
ಬೇಡಿಕೆ ಹೆಚ್ಚು
ಯುಗಾದಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪುರುಷರು ಹೆಚ್ಚಾಗಿ ಪಾರ್ಮಲ್ ಪ್ಯಾಂಟ್, ಜುಬ್ಬ, ಪಂಚೆ ಖರೀದಿ ಮಾಡುತ್ತಿದ್ದಾರೆ. ಅಲ್ಲದೆ, ಮಹಿಳೆ ಯರ ಲೆಹಂಗಾ, ಸಾರಿಗೆ ಬೇಡಿಕೆ ಹೆಚ್ಚಿದೆ.
– ರಾಮಕೃಷ್ಣ, ಅಂಗಡಿ ಮಾಲಕ
ಆಫರ್‌ಗಳಿವೆ
ಹೊಸ ಬಟ್ಟೆಗಳು ಕೂಡ ಯುಗಾದಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಮಹಿಳೆಯರು ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಯಾದ ಸಾರಿಯನ್ನು ಧರಿಸಲು ಇಷ್ಟಪಡುತ್ತಾರೆ. ಹಬ್ಬಕ್ಕೆಂದೇ ಅನೇಕ ಆಫರ್‌ಗಳು ಬಂದಿದ್ದು, ಇದರ ಲಾಭವನ್ನು ಎಲ್ಲರೂ ಪಡೆಯುತ್ತೇವೆ.
– ಸಂಗೀತಾ, ಉದ್ಯೋಗಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.