ಜಸ್ಟ್‌ ಮಾತ್‌ ಮಾತಲ್ಲಿ


Team Udayavani, Mar 16, 2018, 6:14 PM IST

Idam-Premam-Jeevam.jpg

ಆತ ಆಕೆಯನ್ನು ಪ್ರೀತಿಸುತ್ತಿದ್ದಾನಾ ಅಥವಾ ಜಸ್ಟ್‌ ಫ್ರೆಂಡಾ, ಯಾಕಾಗಿ ಆತ ಅಷ್ಟೊಂದು ಒರಟಾಗಿ ವರ್ತಿಸುತ್ತಾನೆ, ಆತನ ಉದ್ದೇಶವೇನು … “ಇದಂ ಪ್ರೇಮಂ ಜೀವನಂ’ ಸಿನಿಮಾ ಆರಂಭವಾಗಿ ಮುಗಿಯುವವರೆಗೂ ಇಂತಹ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಆ ಮಟ್ಟಿಗೆ ಚಿತ್ರ ಪ್ರಶ್ನೆಯೊಂದಿಗೇ ಸಾಗುತ್ತದೆ. ಆ ಪ್ರಶ್ನೆಗಳಿಗೆಲ್ಲಾ ಕೊನೆಯ ಹತ್ತು ನಿಮಿಷದಲ್ಲಿ ಉತ್ತರ ಹೇಳಿ ಮುಗಿಸಿದ್ದಾರೆ ನಿರ್ದೇಶಕರು. ಅಲ್ಲಿವರೆಗೆ ತಾಳ್ಮೆಯಿಂದ ಕಾಯುವ ಸರದಿ ನಿಮ್ಮದು. 

ಸಂಭಾಷಣೆಯನ್ನೇ ನಂಬಿಕೊಂಡು, ಎದುರಿಗಿರುವ ಕಲಾವಿದರ ಮಾತಿಗೂ ಅವಕಾಶ ಕೊಡದಷ್ಟರ ಮಟ್ಟಿಗೆ ಪಟಪಟನೇ ಮಾತನಾಡುವ ನಾಯಕನ ಪಾತ್ರಗಳು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಬಂದು ಹೋಗಿವೆ. ಈ ಚಿತ್ರ ಕೂಡಾ ಅದೇ ಸಾಲಿಗೆ ಸೇರುತ್ತದೆ. ಇಲ್ಲಿನ ನಾಯಕ ಅದೆಷ್ಟು ಮಾತನಾಡುತ್ತಾನೆ ಎಂದರೆ ಸಿನಿಮಾ ಮುಗಿಸಿ ಹೊರಬಂದ ಮೇಲೂ ಮಾತು ಗುಂಯ್‌ಗಾಡುತ್ತಿರುತ್ತದೆ.

“ಇದಂ ಪ್ರೇಮಂ ಜೀವನಂ’ ಒಂದು ಯೂತ್‌ಫ‌ುಲ್‌ ಸ್ಟೋರಿ. ಹಾಗಾಗಿ, ಸಿನಿಮಾ ಆರಂಭದಿಂದ ಕೊನೆವರೆಗೂ ಫ್ರೆಂಡ್ಸ್‌, ಕಾಫಿ ಡೇ, ಜಾಲಿರೈಡ್‌ … ಎಲ್ಲವೂ ಕಾಣಸಿಗುತ್ತದೆ. ಇದೆಲ್ಲದರ ಮಧ್ಯೆ ಒಂದು ಹಂತಕ್ಕೆ ಕಥೆ ಕಳೆದೇ ಹೋಗುತ್ತದೆ ಎನಿಸದೇ ಇರದು. ಹಾಗೆ ನೋಡಿದರೆ, ನಿರ್ದೇಶಕರು ಮಾಡಿಕೊಂಡಿರುವ ಒನ್‌ಲೈನ್‌ ಚೆನ್ನಾಗಿದೆ. ಜೀವನದಲ್ಲಿ ಪ್ರೀತಿ, ಪ್ರೇಮ, ಸ್ನೇಹಿತರು ಮುಖ್ಯ. ಆದರೆ ಅವರೆಲ್ಲರಿಗಿಂತ ತಂದೆ-ತಾಯಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.

ಅವರ ಆಸೆಯನ್ನು ಈಡೇರಿಸಿ, ಮುಂದೆ ಏನು ಬೇಕಾದರೂ ಮಾಡಿ ಎಂಬ ಒನ್‌ಲೈನ್‌ ಈ ಚಿತ್ರದಲ್ಲಿದೆ. ಬರೀ ಲವ್‌ಸ್ಟೋರಿಗಳ ಮಧ್ಯೆ ಈ ತರಹದ ಒಂದು ಅಂಶ ಗಮನ ಸೆಳೆದರೂ ಅದನ್ನು ಸಮರ್ಪಕವಾಗಿ ಕಟ್ಟಿಕೊಡುವಲ್ಲಿ ಎಡವಿದ್ದಾರೆ. ಚಿತ್ರದ ಕೊನೆಯಲ್ಲಿ ನಾಯಕನ ವರ್ತನೆಗೆ ಈ ಅಂಶದೊಂದಿಗೆ ಕಾರಣ ಹೇಳಿ ಮುಗಿಸುತ್ತಾರೆ. ಅದಕ್ಕಿಂತ ಮುಂಚಿನ ದೃಶ್ಯಗಳಲ್ಲಿ ಸಿನಿಮಾಕ್ಕೂ ಆ ಕಥೆಗೂ ಸಂಬಂಧವೇ ಇಲ್ಲದಂತೆ ಸಾಗುತ್ತದೆ.

ಮಾತಿನಲ್ಲೇ ಸಿನಿಮಾ ತೋರಿಸಲು ಹೊರಟ ಪರಿಣಾಮ, ನಾಯಕ ವಿವಿಧ ಶೈಲಿಯಲ್ಲಿ ಡೈಲಾಗ್‌ ಹೇಳುತ್ತಾ, ಕನ್ನಡದ ಅನೇಕ ನಟರನ್ನು ನೆನಪಿಸುತ್ತಾರೆ ಕೂಡಾ. ಅತ್ತ ಕಡೆ ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯೂ ಆಗದೇ, ಇತ್ತ ಕಡೆ ಅಪ್ಪ-ಅಮ್ಮನೇ ಮುಖ್ಯ ಎಂಬ ಮೌಲ್ಯವನ್ನು ಪರಿಣಾಮಕಾರಿಯಾಗಿ ಸಾರದೇ ಮುಗಿದು ಹೋಗುತ್ತದೆ “ಇದಂ ಪ್ರೇಮಂ ಜೀವನಂ’. ಬಹುತೇಕ ಸಿನಿಮಾಗಳಂತೆ ಇಲ್ಲೂ ನಾಯಕನ ಒಳ್ಳೆಯ ಗುಣಗಳನ್ನು ವಿವಿಧ ಅಂಶಗಳ ಮೂಲಕ ತೋರಿಸುತ್ತಾ ಹೋಗಿದ್ದಾರೆ.

ಮೇಲ್ನೋಟಕ್ಕೆ ಒರಟನಂತೆ ಕಾಣುವ ನಾಯಕ, ಯಾವ ರೀತಿ ಸ್ನೇಹಿತರ ಸಮಸ್ಯೆಗಳಿಗೆ ಸ್ಪಂಧಿಸುತ್ತಾನೆ ಎಂಬುದನ್ನು ವಿವಿಧ ಆಯಾಮಗಳಲ್ಲಿ ತೋರಿಸಲು ಪ್ರಯತ್ನಿಸಿದ್ದಾರೆ. ಸಿನಿಮಾದಲ್ಲಿ ಅನಾವಶ್ಯಕ ಅಂಶ ಎಂದು ಯಾವುದೂ ಪ್ರತ್ಯೇಕವಾಗಿ ಕಾಣುವುದಿಲ್ಲ. ನಾಯಕನಿಗೆ ಸುಖಾಸುಮ್ಮನೆ ಬಿಲ್ಡಪ್‌ ಫೈಟ್‌ಗಳಾಗಲಿ, ಎಲ್ಲೆಂದರಲ್ಲಿ ಹಾಡಾಗಲಿ ಅಥವಾ ಕಾಮಿಡಿಯಾಗಲೀ ಇಲ್ಲ. ಅವೆಲ್ಲವನ್ನು ನಾಯಕನ ಸಂಭಾಷಣೆಯಲ್ಲೇ ಮುಗಿಸಿದ್ದಾರೆ. ಆದರೆ, ಕಥೆಗಿಂತ ಮಾತೇ ಜಾಸ್ತಿಯಾಯಿತೇನೋ ಎಂಬ ಭಾವನೆ ಕಾಡದೇ ಇರದು.

ಒಂದು ಕೂಲ್‌ ಲವ್‌ಸ್ಟೋರಿಯನ್ನು ಸಣ್ಣ ಸಂದೇಶದೊಂದಿಗೆ ನಿರ್ದೇಶಕರು ಕಟ್ಟಿಕೊಡಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ನಾಯಕ ಸನತ್‌ ಮೊದಲ ಚಿತ್ರದಲ್ಲಿ ತಕ್ಕಮಟ್ಟಿಗೆ ಗಮನ ಸೆಳೆದಿದ್ದಾರೆ. ನಟನೆಗಿಂತ ಮಾತು ಸ್ವಲ್ಪ ಹೆಚ್ಚಾಯಿತು ಎನಿಸಿದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಶನಾಯ ಕಾಟ್ಪೆ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಉಳಿದಂತೆ ಅವಿನಾಶ್‌, ಮಾಳವಿಕ, ಭಾವನಾ ಪ್ರೀತಂ ಸೇರಿದಂತೆ  ಚಿತ್ರದಲ್ಲಿ ನಟಿಸಿದ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. 

ಚಿತ್ರ: ಇದಂ ಪ್ರೇಮಂ ಜೀವನಂ
ನಿರ್ಮಾಣ: ಗೋಕುಲ್‌, ನವೀನ್‌ ಕುಮಾರ್‌
ನಿರ್ದೇಶನ: ರಾಘವಾಂಕ ಪ್ರಭು
ತಾರಾಗಣ: ಸನತ್‌, ಶನಾಯ ಕಾಟ್ಪೆ, ಅವಿನಾಶ್‌, ಮಾಳವಿಕ, ಭಾವನಾ ಪ್ರೀತಂ, ದೀಪು, ರಾಮು, ಭರತ್‌, ನಾಗಾರ್ಜುನ್‌ ಮುಂತಾದವರು

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ugravatara Review:

Ugravatara Review: ದುರ್ಗಿ ಭರ್ಜರಿ ಬೇಟೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

Prapthi Movie Review

Prapthi Movie Review: ಭಾವನೆಗಳ ಸುತ್ತ ಪ್ರಾಪ್ತಿ

mooka jeeva kannada movie review

Mooka Jeeva Review: ಮುಗ್ಧ ಮನಸ್ಸಿನ ಪ್ರತಿಬಿಂಬ

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

Ellige Payana Yavudo Daari Review: ರೋಚಕ ಹಾದಿಯ ಸುಖಕರ ಪಯಣವಿದು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.