ಪ್ರೋತ್ಸಾಹಧನ ವಿಳಂಬ, ಅಥ್ಲೀಟ್‌ಗಳ ಪರದಾಟ
Team Udayavani, Mar 17, 2018, 6:00 AM IST
ಬೆಂಗಳೂರು: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಹಿರಿಯ ಮತ್ತು ಕಿರಿಯ ಕ್ರೀಡಾ ಸರ್ಕಾರದ ಪ್ರೋತ್ಸಾಹ ಧನಕ್ಕಾಗಿ ಅಕ್ಷರಶಃ ಶಬರಿಯಂತೆ ಕಾದು ಕುಳಿತಿದ್ದಾರೆ. ಕಳೆದ 3 ವರ್ಷಗಳಿಂದ ಹಣ ನೀಡದೇ ರಾಜ್ಯ ಕ್ರೀಡಾ ಇಲಾಖೆ ಈ ಮೊತ್ತವನ್ನು ಬಾಕಿಯಿರಿಸಿ ಕೊಂಡಿರುವುದರಿಂದ ಅಥ್ಲೀಟ್‌ಗಳು ಪರದಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸರ್ಕಾರ ಈ ಬಗ್ಗೆ ಅರ್ಜಿ ಆಹ್ವಾನಿಸಿದ್ದರೂ ಅಥ್ಲೀಟ್‌ಗಳು ಹಣ ಖಾತೆಗೆ ಬಂದಮೇಲಷ್ಟೇ ನಂಬಲು ಸಾಧ್ಯ ಎನ್ನುವಷ್ಟು ಬೇಸತ್ತು ಹೋಗಿದ್ದಾರೆ.
3 ಕೋಟಿ ರೂ. ಬಾಕಿ: ರಾಷ್ಟ್ರೀಯ ಕೂಟದ ಹಿರಿಯರ ವಿಭಾಗದಲ್ಲಿ ಚಿನ್ನ ಗೆದ್ದವರಿಗೆ 2 ಲಕ್ಷ ರೂ., ಬೆಳ್ಳಿ ಗೆದ್ದವರಿಗೆ 1.5 ಲಕ್ಷ ರೂ., ಕಂಚು ಗೆದ್ದವರಿಗೆ 1 ಲಕ್ಷ ರೂ. ನೀಡಲಾಗುತ್ತದೆ. ಅದೇ ರೀತಿ 18 ಮತ್ತು 20 ವರ್ಷದೊಳಗಿಕ್ರೀಡಾಕೂಟದಲ್ಲಿ ಚಿನ್ನ ಲಕ್ಷ ರೂ., ಬೆಳ್ಳಿ ಗೆದ್ದವರಿಗೆ 75 ಕಂಚು ಗೆದ್ದವರಿಗೆ 50 ಸಾವಿರ ಡಲಾಗುತ್ತದೆ. ವಿವಿಧ ರಾಷ್ಟ್ರೀಯ ದ ವರ್ಷದಲ್ಲಿ ಸುಮಾರು ರಾಜ್ಯಕ್ಕೆ ಬರುತ್ತಿವೆ. 2016 ಮತ್ತು 2017 ಈ ಮೂರು 300ಕ್ಕೂ ಅಧಿಕ ರಾಷ್ಟ್ರೀಯ ರಾಜ್ಯ ಅಥ್ಲೀಟ್‌ಗಳು ಹೀಗಾಗಿ ಸುಮಾರು 3 ಕೋಟಿ
ಧಿಕ ಮೊತ್ತ ಅಥ್ಲೀಟ್‌ಗಳ ಕೈಸೇರಬೇಕಾಗಿದೆ. ಅದೀಗ ರಾಜ್ಯಸರ್ಕಾರದ ಬಳಿ ಬಾಕಿಯಿದೆ.
ವಿಳಂಬ ನೀತಿ ಯಾಕೆ?: ಇಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜತೆಗೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತಿದೆ. ಹರ್ಯಾಣ, ಒಡಿಶಾ, ಪಂಜಾಬ್, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪದಕ ಗೆದ್ದ ಅಥ್ಲೀಟ್‌ಗಳಿಗೆ ಆಯಾ ವರ್ಷವೇ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಚಿನ್ನ ಗೆದ್ದವರಿಗೆ 5 ಲಕ್ಷ ರೂ. ನೀಡ ಲಾಗುತ್ತಿದೆ. ಬೇರೆ ರಾಜ್ಯದಲ್ಲಿ ಸಾಧ್ಯವಾಗುವ ಕೆಲಸ ನಮ್ಮಲ್ಲಿ ಆಗುತ್ತಿಲ್ಲ. ನಮ್ಮಲ್ಲೂ ಮೊತ್ತ ಏರಿಸಬೇಕೆಂದು ಹಲವು ಅಥ್ಲೀಟ್‌ಗಳು ಮನವಿ ಮಾಡಿಕೊಂಡಿದ್ದಾರೆ.
ಕಡೆಗೂ ಅರ್ಜಿಆಹ್ವಾನ
ಅಂತೂ 3 ವರ್ಷಗಳ ನಂತರ ಪದಕ ಗೆದ್ದ ಅಥ್ಲೀಟ್‌ಗಳಿಗೆ ಪ್ರೋತ್ಸಾಹಧನ ದೊರೆಯುವ ಭರವಸೆ ಸಿಕ್ಕಿದೆ. 2015, 2016 ಮತ್ತು 2017ರಲ್ಲಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಹಿರಿಯ ಮತ್ತು ಕಿರಿಯ ಅಥ್ಲೀಟ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೀಗಾಗಿ
ಅಥ್ಲೀಟ್‌ಗಳು ಕೊಂಚ ನಿರಾಳರಾಗಿದ್ದರೂ, ಹಣ ತಕ್ಷಣ ಕೈಸೇರುತ್ತದೆ ಎಂಬ ಭರವಸೆ ಹೊಂದಿಲ್ಲ. ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನ.
ಅಥ್ಲೀಟ್‌ಗಳಿಗೆ ಕಿಟ್, ಆಹಾರ, ವೈದ್ಯಕೀಯ ಸೌಲಭ್ಯ, ತರಬೇತಿ ಸೇರಿದಂತೆ ನಾನಾ ರೀತಿಯ ವೆಚ್ಚ ಇರುತ್ತದೆ. ಇದನ್ನು ಸರಿದೂಗಿಸು ವುದು ಸುಲಭವಲ್ಲ. ದಯವಿಟ್ಟು ಸರ್ಕಾರ ರಾಷ್ಟ್ರೀಯ ಪದಕ ಗೆದ್ದವರಿಗೆ ಪ್ರೋತ್ಸಾಹಧನವನ್ನು ಆಯಾ ವರ್ಷವೇ ನೀಡಬೇಕು.
● ಹೆಸರು ಹೇಳಲಿಚ್ಛಿಸದ ರಾಷ್ಟ್ರೀಯ ಪದಕ ವಿಜೇತ ಅಥ್ಲೀಟ್
ಮಂಜು ಮಳಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.