ಮುಂದುವರಿದ ವರ್ಷಧಾರೆ
Team Udayavani, Mar 17, 2018, 6:05 AM IST
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಕಂಡುಬಂದ ತೀವ್ರ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಮಳೆಯ ಆಟಾಟೋಪ ಮುಂದುವರಿದಿದ್ದು, ಶನಿವಾರ ಕೂಡ ಇದೇ ವಾತಾವರಣ ಇರಲಿದೆ.
ಬೆಂಗಳೂರು ಸೇರಿ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ಗುರುವಾರಕ್ಕೆ ಹೋಲಿಸಿದರೆ, ಶುಕ್ರವಾರ ಮಳೆ ಅಬ್ಬರ ತುಸು ಹೆಚ್ಚಿತ್ತು. ಮಂಡ್ಯ ಮತ್ತು ಮೈಸೂರಿನಲ್ಲಿ ಗರಿಷ್ಠ ಮಳೆ ದಾಖಲಾಗಿದೆ. ಇದರಿಂದ ರಾಜ್ಯಾದ್ಯಂತ ತಾಪಮಾನ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ಸಾಮಾನ್ಯವಾಗಿ ಮಾರ್ಚ್ನಲ್ಲಿ ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ 2-3 ಡಿ.ಸೆ. ಹೆಚ್ಚಿರುತ್ತದೆ. ಆದರೆ, ಸತತ ಮೂರು ದಿನಗಳ ಮಳೆ ಮತ್ತು ಮೋಡಕವಿದ ವಾತಾವರಣದಿಂದ ತಾಪಮಾನ 5ರಿಂದ 6 ಡಿ.ಸೆ.ಕುಸಿತ ಕಂಡಿದೆ. ಬೆಳಗ್ಗೆಯಿಂದ ಎಲ್ಲೆಡೆ ಬಿಸಿಲು ಇತ್ತು. ಸಂಜೆ ಒಮ್ಮೆಲೇ ಧಾರಾಕಾರವಾಗಿ ಮಳೆ ಸುರಿಯಿತು.
ಎಲ್ಲೆಲ್ಲಿ ಎಷ್ಟು ಮಳೆ?: ವಾಯುಭಾರ ಕುಸಿತದ ಪ್ರಭಾವ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಇರುವುದರಿಂದ ಹಳೇ ಮೈಸೂರು ಭಾಗದಲ್ಲಿ ಮಳೆ ಅಬ್ಬರ ಅಧಿಕವಾಗಿದೆ. ಮಂಡ್ಯ 128 ಮಿ.ಮೀ., ಮೈಸೂರು 103 ಮಿ.ಮೀ., ಚಾಮರಾಜನಗರ 55.5 ಮಿ.ಮೀ., ಬೆಂಗಳೂರು ನಗರ 58.5 ಮಿ.ಮೀ., ಬೆಂ.ಗ್ರಾಮಾಂತರ 77 ಮಿ.ಮೀ., ಹಾಸನ 23 ಮಿ.ಮೀ., ಚಿಕ್ಕಬಳ್ಳಾಪುರ 27 ಮಿ.ಮೀ. ಮಳೆಯಾಗಿದೆ. ಅದೇ ರೀತಿ ಚಿಕ್ಕಮಗಳೂರು 58.2, ಕೊಡಗು 13, ಶಿವಮೊಗ್ಗ 43.5, ಉತ್ತರ ಕನ್ನಡದಲ್ಲಿ 74.2, ದಾವಣಗೆರೆ 63, ಚಿತ್ರದುರ್ಗ 33.3, ಬೆಳಗಾವಿ 55.5, ತುಮಕೂರು 28.5, ಧಾರವಾಡ 48.5,ಹಾವೇರಿ 68, ಗದಗ 20 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.