‘ಮಹಿಳಾ ಸ್ವಾವಲಂಬನೆ ಸಹಕಾರಿ ಸಂಸ್ಥೆಗಳ ಗುರಿಯಾಗಲಿ’
Team Udayavani, Mar 17, 2018, 10:10 AM IST
ಕಾಸರಗೋಡು: ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಕೆಲಸ ಸಹಕಾರಿ ಸಂಸ್ಥೆಗಳ ಮೂಲಕ ಆಗಬೇಕೆಂದು ಜಾಯಿಂಟ್ ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿಯ ರಹೀಂ ಅಭಿಪ್ರಾಯಪಟ್ಟರು. ಕಾಸರಗೋಡು ಶ್ರೀ ನಾರಾಯಣ ಗುರು ವನಿತಾ ಸರ್ವೀಸ್ ಕೋ- ಆಪರೇಟಿವ್ ಸೊಸೈಟಿಯ ಸ್ಥಿರ ಠೇವಣಿ ಹಾಗೂ ಸಾಲ ವಿತರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಸಹಕಾರಿ ಸಂಸ್ಥೆಗಳು ಠೇವಣಿ ಸಂಗ್ರಹಿಸುವುದೇ ಗುರಿಯಾಗಿರಿಸದೆ ತಳಮಟ್ಟದಲ್ಲಿರುವ ಮಹಿಳೆಯರಿಗೆ ಸ್ವಉದ್ಯೋಗ ಆರಂಭಿಸಲು ಸಾಲ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಜವಾಬ್ದಾರಿ ಸೊಸೈಟಿಯ ಆಡಳಿತ ಮಂಡಳಿಗಿದೆ ಎಂದರು.
ಸ್ಥಿರ ಠೇವಣಿ ಪತ್ರವನ್ನು ಚಂದ್ರಕಲಾ ಹಾಗೂ ವಸಂತಿ ಅವರಿಗೆ ರಹೀಂ ಅವರು ವಿತರಿಸಿದರು. ಅಸಿಸ್ಟೆಂಟ್ ರಿಜಿಸ್ಟ್ರಾರ್ ಜಯಚಂದ್ರನ್ ಸಾಲ ಪತ್ರವನ್ನು ನಳಿನಿ ಅವರಿಗೆ ವಿತರಿಸಿದರು. ಯೂನಿಟ್ ಇನ್ಸ್‌ಪೆಕ್ಟರ್ ಬೈಜು, ನಾರಾಯಣ ಚೆನ್ನಿಕರೆ, ಕೆ. ಕಮಲಾಕ್ಷ ಸುವರ್ಣ, ಶಿವ ಕೆ., ಚಂದ್ರಶೇಖರ ಚಿಪ್ಲುಕೋಟೆ ಮೊದಲಾದವರು ಶುಭಹಾರೈಸಿದರು. ಸರೋಜಿನಿ ಕೆ. ಅಧ್ಯಕ್ಷತೆ ವಹಿಸಿದರು. ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.