ಮಾಣಿಯಲ್ಲಿ ಅಪಘಾತವಾದ ಬಸ್ ನಂಬರ್ – ಟಿಕೆಟ್ ತಾಳೆಯಾಗುತ್ತಿಲ್ಲ!
Team Udayavani, Mar 17, 2018, 9:20 AM IST
ಉಪ್ಪಿನಂಗಡಿ: ಬುಧವಾರ ಮಾಣಿಯಲ್ಲಿ ಸಂಭವಿಸಿದ ಬಸ್ ಅಪಘಾತ ಮತ್ತು ತನ್ನ ಪತ್ನಿ ದಿವ್ಯಾ ಪ್ರಭು (40) ಸಾವಿಗೆ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಮೃತರ ಪತಿ ದೂರು ನೀಡಿದ ಬೆನ್ನಲ್ಲೇ, ಬಸ್ಸಿನ ನಂಬರ್ ಹಾಗೂ ಟಿಕೆಟ್ ತಾಳೆಯಾಗದಿರುವುದು ಕಂಡು ಬಂದಿದೆ. ನಷ್ಟ ಪರಿಹಾರ ತಪ್ಪಿಸಲು ಕೆಎಸ್ಆರ್ಟಿಸಿ ಉದ್ದೇಶ ಪೂರ್ವಕವಾಗಿಯೇ ಈ ತಂತ್ರಗಾರಿಕೆ ನಡೆಸುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ದಿವ್ಯಾ ಪ್ರಭು ಪ್ರಯಾಣಿಸಿದ ಬಸ್ಸಿನ ನಂಬ್ರ ಕೆಎ 19 ಎಫ್ 3143 ಆಗಿದ್ದು, ನೀಡಲಾದ ಟಿಕೆಟ್ನಲ್ಲಿ ಬಸ್ಸಿನ ಸಂಖ್ಯೆ ಕೆಎ 19 ಎಫ್ 2707 ಎಂದು ನಮೂದಾಗಿದೆ. ಪ್ರಕರಣದ ವಿಚಾರಣೆ ವೇಳೆ ಟಿಕೆಟ್ನಲ್ಲಿರುವ ಬಸ್ಸಿನ ಸಂಖ್ಯೆ ಪ್ರಮುಖ ದಾಖಲೆ ಆಗಿರುವುದರಿಂದ ನ್ಯಾಯಾಲಯದಲ್ಲಿ ಮೃತ ಮಹಿಳೆಯ ಪರವಾಗಿ ಸಲ್ಲಿಸುವ ದಾಖಲೆಗೂ ಅಪಘಾತಕ್ಕೀಡಾದ ಬಸ್ಸಿನ ಸಂಖ್ಯೆಗೂ ಹೊಂದಾಣಿಕೆಯಾಗದೆ ಕುಟುಂಬಕ್ಕೆ ಪರಿಹಾರ ಸಿಗಲು ತೊಂದರೆಯಾಗಲಿದೆ.
ಹಲವು ಬಸ್ಗಳಲ್ಲಿ ಇಂಥ ಲೋಪ
ಮಾ. 15ರಂದು ತಾನು ಮಂಗಳೂರಿನಿಂದ ಪುತ್ತೂರಿಗೆ ಕೆಎ 21 ಎಫ್ 0100 ನಂಬರಿನ ಬಸ್ಸಿನಲ್ಲಿ ಪ್ರಯಾಣಿಸಿದ್ದು, ಟಿಕೆಟ್ನಲ್ಲಿ ಬಸ್ಸಿನ ಸಂಖ್ಯೆ ಕೆಎ 19 ಎಫ್ 2660 ಎಂದಿತ್ತು. ನಿರ್ವಾಹಕನನ್ನು ವಿಚಾರಿಸಿದಾಗ “ನಾವೇನು ಮಾಡೋದು ಸರ್, ಆಫೀಸಿನಲ್ಲಿ ನಮಗೆ ಕೊಡುವ ಮಿಷಿನ್ನಲ್ಲಿ ಟಿಕೆಟ್ ಕೊಡುವುದು ಮಾತ್ರ ನಮ್ಮ ಕೆಲಸ. ಅದರಲ್ಲಿ ಯಾವ ಬಸ್ಸಿನ ನಂಬ್ರ ಫೀಡ್ ಆಗಿದೆ ಎನ್ನುವುದು ನಮಗೆ ಗೊತ್ತಾಗುವುದಿಲ್ಲ’ ಎಂದು ತಿಳಿಸಿದ್ದಾರೆ ಎಂದು ಉಪ್ಪಿನಂಗಡಿ ನಿವಾಸಿ ವಿನಾಯಕ ಪ್ರಭು ಯಾನೆ ಮುನ್ನಾ ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.