ಸಂದರ್ಶನ:ಅಪ್ಪಯ್ಯಮಣಿಯಾಣಿ ಸುಳ್ಯವಿಧಾನಸಭಾ ಕ್ಷೇತ್ರ ಬಿಜೆಪಿಉಸ್ತುವಾರಿ
Team Udayavani, Mar 17, 2018, 12:15 PM IST
ಚುನಾವಣೆ ತಯಾರಿ ಯಾವ ರೀತಿ ಸಾಗಿದೆ?
ಸಂಘಟನಾತ್ಮಕ ನೆಲೆಯಲ್ಲಿ ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯ ನಡೆಯುತ್ತಿದೆ. ಬೂತ್ ಮಟ್ಟದಲ್ಲಿ ಸಶಕ್ತೀಕರಣ ಹಮ್ಮಿಕೊಂಡಿದ್ದೇವೆ. ಬೂತ್ ವ್ಯಾಪ್ತಿಯಲ್ಲಿ 12 ಜನರ ತಂಡ ರಚಿಸಿ ಸಕ್ರಿಯವಾಗುವುದು, ಮತದಾರರ ಪಟ್ಟಿಗೆ ಸೇರ್ಪಡೆ ಇತ್ಯಾದಿ ರೀತಿಯಲ್ಲಿ ಸಂಘಟನ ಕಾರ್ಯ ಪ್ರಗತಿಯಲ್ಲಿದೆ. ಕ್ಷೇತ್ರದ ಸಮಿತಿ, ಶಕ್ತಿ ಕೇಂದ್ರ, ಅನಂತರ ಐದೈದು ಕೇಂದ್ರಗಳಿಗೆ ಶಕ್ತಿ ಕೇಂದ್ರ ರಚಿಸಿ ಸಂಘಟನಾತ್ಮಕ ನೆಲೆಗಟ್ಟಿನಲ್ಲಿ ಪಕ್ಷವನ್ನು ತಯಾರುಗೊಳಿಸಲಾಗುತ್ತಿದೆ.
ಯಾವ ಅಂಶಗಳನ್ನು ಮತದಾರರ ಮುಂದೆ ಇಡಲಿದ್ದೀರಿ?
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ತಳೆದಿರುವ ಹಿಂದೂ ವಿರೋಧಿ ಧೋರಣೆ ಪ್ರಮುಖ ಅಸ್ತ್ರವಾಗಲಿದೆ. ಕಾಂಗ್ರೆಸ್‌ನ ಧರ್ಮ ಒಡೆಯುವ ತಂತ್ರಗಾರಿಕೆ, ಮಠ ಮಂದಿರಗಳನ್ನು ವಶಕ್ಕೆ ತೆಗೆದುಕೊಳ್ಳುವ ಯತ್ನ, ವ್ಯಾಪಕ ಭ್ರಷ್ಟಾಚಾರಗಳನ್ನು ಜನರ ಮುಂದಿಡಲಿದ್ದೇವೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ದೇಶ, ರಾಜ್ಯದ ವ್ಯವಸ್ಥೆಗೆ ತೊಡಕಾಗುವ ಸಂಗತಿಗಳನ್ನು ಜನರ ಮುಂದಿರಿಸಿಸಲಾಗುವುದು.
ಅಭಿವೃದ್ಧಿ ವಿಷಯದ ಬಗ್ಗೆ ಪ್ರಸ್ತಾವ ಇಲ್ಲವೇ?
ಖಂಡಿತ ಇದೆ. ಮೋದಿ ಸರಕಾರದ ಜನಪರ ಯೋಜನೆಗಳು, ಈ ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದೆ ಇಡಲಾಗುವುದು. ಭ್ರಷ್ಟಾಚಾರ ರಹಿತ ಮತ್ತು ಜನಪರ ಆಡಳಿತವನ್ನು ನೀಡುವ ಬಗ್ಗೆ ಜನರ ಮುಂದಿಡಲಾಗುವುದು.
ಸುಳ್ಯದಲ್ಲಿ ಈ ಬಾರಿ ಯಾರು ಬಿಜೆಪಿ ಅಭ್ಯರ್ಥಿ?
ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಚುನಾವಣಾ ಉಸ್ತುವಾರಿಗಳ ಮಟ್ಟದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆದಿಲ್ಲ. ಎಪ್ರಿಲ್ ಮೊದಲ ವಾರದ ಅನಂತರ ಅದಕ್ಕೆ ಸಂಬಂಧಿಸಿದ ಸಮಿತಿಯಿಂದ ಪ್ರಕ್ರಿಯೆ ಆರಂಭವಾಗ ಬಹುದು. ಅರ್ಹ ಅಭ್ಯರ್ಥಿ ಯಾರೆಂಬ ಬಗ್ಗೆ ಸರ್ವೆ ನಡೆಸಿ, ಸೂಕ್ತ ವ್ಯಕ್ತಿಗೆ ಟಿಕೇಟ್ ನೀಡಲಾಗುತ್ತದೆ. ಈ ಬಗ್ಗೆ ನಮಗೆ ಇನ್ನೂ ಮಾಹಿತಿ ಬಂದಿಲ್ಲ.
ಸುಳ್ಯದಲ್ಲಿ ಪಕ್ಷದ ಜವಾಬ್ದಾರಿ ಇದು ಪ್ರಥಮವೇ?
ಹೌದು. ಆದರೆ ಈ ಹಿಂದೆ ಬಂಟ್ವಾಳ ಕ್ಷೇತ್ರದಲ್ಲಿ ಎರಡು ಬಾರಿ ಚುನಾವಣಾ ಪ್ರಭಾರಿಯಾಗಿ ಕೆಲಸ ಮಾಡಿದ ಅನುಭವ ಇದೆ. ಬೇರೆಬೇರೆ ಸಂದರ್ಭಗಳಲ್ಲಿ ಸುಳ್ಯದಲ್ಲಿ ಪಕ್ಷದ ಬೆಳವಣಿಗೆಯ ಬಗ್ಗೆ ಗಮನಿಸುವ ಅವಕಾಶ ಸಿಕ್ಕಿತ್ತು. ಈಗ ಉಸ್ತುವಾರಿಯಾಗಿ ಕ್ಷೇತ್ರ, ಶಕ್ತಿ ಕೇಂದ್ರದ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಶಕ್ತಿ ಕೇಂದ್ರದಲ್ಲಿ ಒಂದು ಸುತ್ತಿನ ಪ್ರಚಾರ ಸಭೆ ಮುಗಿಸಿದ್ದೇನೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.